ಮಹಾಮಳೆ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಇದೀಗ ಜನರೆಲ್ಲಾ ದೇವರ ಮೊರೆ ಹೋಗುವಂತೆ ಮಾಡಿದೆ. ತಲಕಾವೇರಿಯಲ್ಲಿ ವಿಶೇಷ ಪ್ರಾರ್ಥನೆ ನಡೆದಿದೆ..
ಕಳೆದ ಎರಡು ವರ್ಷಗಳ ಮಹಾಮಳೆಯಿಂದ ಕಂಗೆಟ್ಟಿರುವ ಕೊಡಗನ್ನು ಪ್ರಾಕೃತಿಕ ವಿಕೋಪದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದ ಮಾನವ, ಜಾನುವಾರು ಜೀವಹಾನಿಯಾಗಿದ್ದು, ಕೃಷಿ ಕ್ಷೇತ್ರ ಹಾಗೂ ತೋಟಗಳು ಕೊಚ್ಚಿ ಹೋಗಿವೆ. ಭವಿಷ್ಯದ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂದು ಜಿಲ್ಲೆಯ ಜನ ಚಿಂತಾಕ್ರಾಂತರಾಗಿದ್ದಾರೆ. ಈ ರೀತಿಯ ಪರಿಸ್ಥಿತಿ ಮುಂದೆ ಬಾರದಿರಲಿ ಮತ್ತು ಜಿಲ್ಲೆಯ ಜನ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಭಕ್ತಸಮೂಹ ಬೇಡಿಕೊಂಡಿತು.
ಕುಲದೇವಿ ಎನಿಸಿರುವ ಕಾವೇರಿ, ಮಹಾಗಣಪತಿ ಮತ್ತು ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಶಾಂತಾಚಾರ್ ಹಾಗೂ ಟಿ.ಎಸ್.ನಾರಾಯಣಾಚಾರ್ ವಿಶೇಷ ಪೂಜೆ ಸಲ್ಲಿಸಿದರು. ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ಪ್ರಾರ್ಥಿಸಿದರು.
ಗ್ರಾಮದ ಪ್ರಮುಖರಾದ ಕುದುಕುಳಿ ಭರತ್ ಸೇರಿದಂತೆ ಹಿರಿಯರಾದ ಜಿ.ರಾಜೇಂದ್ರ, ಎಂ.ಬಿ.ದೇವಯ್ಯ ದೇವಿಪೂಣಚ್ಚ, ಕಾಳನರವಿ, ಉಮಾಪ್ರಭು, ಕುದುಪಜೆ ಪಳಂಗಪ್ಪ, ದಾಸಪ್ಪ, ಕುಡಿಯರ ಮುತ್ತಪ್ಪ, ದೇವಂಗೋಡಿ ಹರೀಶ್, ಹೊಸಗದ್ದೆ ಭಾಸ್ಕರ್ ಹಾಗೂ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…