ಮಂಗಳೂರು: ಮತ್ತೆ ಚಂಡಮಾರುತದ ಪ್ರಭಾವ ಶುರುವಾಗಿದೆ. ಕ್ಯಾರ್ , ಮಹಾ ಚಂಡಮಾರುತವು ಅರಬೀ ಸಮುದ್ರದಲ್ಲಿ ಕಂಡುಬಂದು ಕರಾವಳಿ ಪ್ರದೇಶ ಹಾಗೂ ಒಳನಾಡಿನಲ್ಲಿ ಭಾರೀ ಮಳೆಯ ಸೂಚನೆ ನೀಡಿ ಬಳಿಕ ತಣ್ಣಗಾಯಿತು. ಸದ್ಯ ಗುಜರಾತ್ ಕರಾವಳಿ ತೀರದಲ್ಲಿದ್ದರೂ ದುರ್ಬಲವಾಗುತ್ತಾ ಸಾಗಿದೆ. ಯಾವುದೇ ಆತಂಕವಿಲ್ಲ. ಮುಂಬಯಿ ಸೇರಿದಂತೆ ಕೆಲವು ಕಡೆ ಮಳೆಯಾಗಲಿದೆ.
ಆದರೆ ಈಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಬುಲ್ ಬುಲ್ ಚಂಡಮಾರುತ ಕಂಡುಬಂದಿದೆ. ಈಗಾಗಲೇ ಒಡಿಶಾ, ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಹೈ ಎಲರ್ಟ್ ಘೋಷಣೆ ಮಾಡಲಾಗಿದೆ. ಬುಲ್ ಬುಲ್ ಪರಿಣಾಮವಾಗಿ ಕೇರಳ, ತಮಿಳುನಾಡು , ಕರ್ನಾಟಕದಲ್ಲಿ ನ.8, 9, 10 ರಂದು ಮಳೆಯಾಗಲಿದೆ. ನ.12 ರವರೆಗೆ ಈ ಚಂಡಮಾರುತದ ಪ್ರಭಾವ ಇದೆ.
ಬುಲ್ ಬುಲ್ ಚಂಡಮಾರುತವು ಒಡಿಶಾದಲ್ಲಿ ಪ್ರಭಾವ ಬೀರಲಿದೆ. ಈಗಾಗಲೇ ಒಡಿಶಾದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲೂ ಪ್ರಭಾವ ಬೀರಲಿದೆ. ಈಗಿನ ಪ್ರಕಾರ ಅಂಡಮಾನ್ ನಿಕೋಬಾರ್ ನಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾದರೆ ನ.9 ಹಾಗೂ 10 ರಂದು ಬುಲ್ ಬುಲ್ ಒಡಿಶಾಕ್ಕೆ ಪ್ರವೇಶಿಸಿ ಭಾರೀ ಮಳೆಯಾಗಲಿದೆ.ಕರ್ನಾಟಕ ಕರಾವಳಿ ಭಾಗ, ಮಲೆನಾಡು, ಗುಜರಾತ್ ,ಒಡಿಶಾದಲ್ಲಿ ಚಂಡಮಾರುತ ಪ್ರಭಾವ ಇರಲಿದೆ.
ಪಶ್ಚಿಮ ಬಂಗಾಳದಲ್ಲಿ ನ.10 ಹಾಗೂ 11 ರಂದು ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ವರದಿ ಹೇಳಿದೆ. ಇದೇ ಸಂದರ್ಭ ನ.8 ರಿಂದ 10 ರವರೆಗೆ ರಾಜ್ಯದ ಕರಾವಳಿ ಹಾಗೂ ಒಳನಾಡು ಸೇರಿದಂತೆ ವಿವಿದೆಡೆ ಮಳೆಯಾಗಬಹುದು. ಬುಲ್ ಬುಲ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ಶಿವಮೊಗ್ಗ, ಧಾರವಾಡ, ಕೊಡಗು, ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 8 ರ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬುಲ್ ಬುಲ್ ನಿಂದಾಗಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದರೂ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 8ರ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸುಳ್ಯ ನ್ಯೂಸ್.ಕಾಂ ಅ.24 ರಂದು ಹವಾಮಾನದ ಬಗ್ಗೆ ವಿಶ್ಲೇಷಣೆ ಮಾಡಿತ್ತು. 3 ಚಂಡಮಾರುತದ ಪ್ರಭಾವ ಇದೆ ಎಂಬ ಹವಾಮಾನ ಇಲಾಖೆಯ ವರದಿಯ ವಿಶ್ಲೇಷಣೆ ಇಲ್ಲಿದೆ…
ಕರಾವಳಿಯಲ್ಲಿ “ಕ್ಯಾರ್” ಚಂಡಮಾರುತಕ್ಕೆ “ಕೇರ್” : ಬೆನ್ನುಬೆನ್ನಿಗೇ 3 ಚಂಡಮಾರುತದ ಸುಳಿಯಲ್ಲಿ ಕರಾವಳಿ…!
Advertisement