ಬೆಳ್ಳಾರೆ: ಅನೇಕ ಪ್ರಯತ್ನಗಳ ಬಳಿಕ ಇದೀಗ ಮಾಡಾವು 110 ಕೆವಿ ಸಬ್ ಸ್ಟೇಶನ್ ಗೆ ಪರಿವರ್ತಕ ತಲಪುತ್ತಿದೆ. ಈ ಮೂಲಕ ಬಳಕೆದಾರರ ಹೋರಾಟ ಭಾಗಶ: ಯಶಸ್ಸು ಕಂಡಿದೆ.
ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಕಳೆದ ಹಲವು ವರ್ಷಗಳಿಂದ ನಿಧಾನಗತಿಯಲ್ಲಿತ್ತು. ಪ್ರತೀ ಬಾರಿಯೂ ಅಧಿಕಾರಿಗಳು ಶೇ.80 ರಷ್ಟು ಕೆಲಸವಾಗಿದೆ ಎನ್ನುತ್ತಿದ್ದರು. ಆದರೆ ಬೆಳ್ಳಾರೆಯಲ್ಲಿ ವಿದ್ಯುತ್ ಬಳಕೆದಾರರ ವೇದಿಕೆ ರಚನೆ ಮಾಡಿ ಹೋರಾಟಕ್ಕೆ ಇಳಿದಿದ್ದರು. ಸಮಗ್ರ ಮಾಹಿತಿ ಕಲೆ ಹಾಕಿದ ಬಳಿಕ ಶೇ.50 ರಷ್ಟೂ ಕಾರ್ಯಗಳು ಆಗದೇ ಇರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುಳ್ಯ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಾಸ್ತವಾಂಶ ಬಿಚ್ಚಿಡಲಾಗಿತ್ತು. ಈ ಸಂದರ್ಭ ಕೆಪಿಟಿಸಿಎಲ್ ಅಧಿಕಾರಿಗಳು ವಾಸ್ತವಾಂಶ ಒಪ್ಪಿಕೊಂಡು ತಕ್ಷಣವೇ ಕೆಲಸ ಮಾಡುವುದಾಗಿ ಹೇಳಿದ್ದರು.
ಇದೀಗ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ಮಾಡಾವು ಸಬ್ ಸ್ಟೇಶನ್ ಗೆ ಅಗತ್ಯವಾಗದ ಪರಿವರ್ತಕ ಲಾರಿ ಮೂಲಕ ಆಗಮಿಸಿದೆ. ಟವರ್ ನಿರ್ಮಾಣ ಹಾಗೂ ಸಬ್ ಸ್ಟೇಶನ್ ಒಳಗಿನ ಕೆಲಸ ಕಾರ್ಯಗಳು ನಡೆಯುತ್ತಿದೆ.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…