ವಿಶೇಷ ವರದಿಗಳು

ಮಾಡಾವು 110 ಕೆ.ವಿ. ವಿದ್ಯುತ್ ಸ್ಟೇಷನ್ ಚಾಲನೆಗೆ ಇನ್ನೂ ವಿಳಂಬ ಏಕೆ ? | ಇದೂ ಒಂದು ಜನಪರ ಕಾಳಜಿಯೇ…..? | ಸುಳ್ಯದ 110 ಕೆವಿ ಕತೆ ಏನಾಯ್ತು ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇದೂ ಒಂದು ಜನಪರ ಕಾಳಜಿ…!.

Advertisement

ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಮಸ್ಯೆಯಿಂದ ಕೃಷಿಕರೂ ಸೇರಿದಂತೆ ಸಣ್ಣ ಕೈಗಾರಿಕೆಗಳು ವಿಶೇಷವಾಗಿ ಸುಳ್ಯ ತಾಲೂಕಿನಲ್ಲಿ ಕಂಗೆಟ್ಟಿವೆ. ಆದರೆ ಈಗ ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವಾದ ಮಾಡಾವು 110 ಕೆ.ವಿ. ವಿದ್ಯುತ್  ಸ್ಟೇಷನ್ ನ ಕಾಮಗಾರಿಗಳು   ಅಂತಿಮವಾಗಿದೆ. ಅಂತೂ ಸುದೀರ್ಘ ಪ್ರಯತ್ನದ ಬಳಿಕ  14 ವರ್ಷದ  “ಮಹಾ”ಯೋಜನೆಯೊಂದು ಪೂರ್ತಿಯಾಗಿದೆ.

ಆದರೆ ಈಗ ಚಾಲನೆಯಾಗಲು ಮಂತ್ರಿ, ಜನಪ್ರತಿನಿಧಿಗಳ ಸಮಯಕ್ಕೆ ಕಾಯಬೇಕಾ ? ಇದೂ ಒಂದು ಜನಪರ ಕಾಳಜಿಯೇ ? ಅಧಿಕೃತ ಉದ್ಘಾಟನೆ ನೀವು ಯಾವಾಗ ಬೇಕಾದರೂ ಮಾಡಿ. ಆದರೆ ಇಷ್ಟೂ ವರ್ಷಗಳ ನಂತರ ಆಗಿರುವ ಯೋಜನೆಯೊಂದನ್ನು  ಚಾಲನೆ ಮಾಡಿ, ವಿದ್ಯುತ್ ನೀಡಿ. ಇದು ಜನರಿಗೆ ನೀಡಬೇಕಾದ ಮೊದಲ ಸೇವಾ ಕಾರ್ಯ. ಹೆಸರುಗಳು ಶಿಲೆಯ ಮೇಲೆ ಶಾಶ್ವತವಾಗಿರುವ ಮೊದಲು ಜನರ ಹೃದಯದಲ್ಲಿ  ಸ್ಥಾಪನೆಯಾಗಲಿ. ಅಂದ ಹಾಗೆ ಸುಳ್ಯದ 110 ಕೆವಿ ಕತೆ ಏನಾಯ್ತು ? ಇಲ್ಲೂ ಶಿಲೆಯ ಮೇಲೆ ಹೆಸರುಗಳಷ್ಟೇ ಸ್ಥಾಪನೆಯಾಗಿದೆ. ಜನರ ಹೃದಯದಲ್ಲಿ  ಇನ್ನೂ ದಾಖಲಾಗಿಲ್ಲ…!

ಇಷ್ಟು ಹೇಳಿದ ತಕ್ಷಣವೇ ಬರುವ ಉತ್ತರ ಇಷ್ಟೇ,  ” ಬರೆದಷ್ಟು ಸುಲಭ ಇಲ್ಲ , ಯಾರೇ ಹೇಳಲಿ ಇಲ್ಲಿ ನಾವೇ ಮಾಡುವುದು, ಅಭಿವೃದ್ಧಿ ನಾವೇ ಮಾಡಬೇಕು, ಟೀಕಿಸುವ ಮೊದಲು ತಿಳಿದುಕೊಳ್ಳಿ, ಮಾಡಾವು 110 ಕೆವಿ ಕೆಲಸ ಪೂರ್ತಿಯಾಗಿಲ್ಲ…….. ” ಹೀಗೇ ಅನೇಕ ಉತ್ತರಗಳು  ಬರುತ್ತದೆ. 

ಇರಲಿ, ಈಗ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಮಾಡಾವು  110 ಕೆ.ವಿ. ವಿದ್ಯುತ್  ಸ್ಟೇಷನ್ ನ ಕಾಮಗಾರಿಗಳು  ಪೂರ್ತಿಯಾದ ಬಳಿಕವೂ ಏಕೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇತ್ತೀಚೆಗೆ ಪತ್ರಿಕೆಗಳಲ್ಲಿ  ಜಾಹೀರಾತುಗಳನ್ನು ಕೆಪಿಟಿಸಿಎಲ್ ನೀಡಿದೆ, ಮೆಸ್ಕಾಂ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದೆ. ಆದರೆ ಚಾಲೂ ಆಗಲು, ಅಧಿಕೃತ ಉದ್ಘಾಟನೆ ಆಗಲು ಸಚಿವರು, ಜನಪ್ರತಿನಿಧಿಗಳ ಸಮಯಕ್ಕೆ ಕಾಯಬೇಕಾ ? . ಉದ್ಘಾಟನೆಗೆ ಸಚಿವರ, ಜನಪ್ರತಿನಿಧಿಗಳ ಸಮಯ ಪಡೆದು  ಅದಕ್ಕೆ ಬೇಕಾದ ಎಲ್ಲಾ ಪ್ರೊಟೋಕಾಲ್ ಸಿದ್ಧಮಾಡಿ ಯಾವಾಗ ಬೇಕಾದರೂ ಅದ್ದೂರಿಯಿಂದ ಕಾರ್ಯಕ್ರಮ ಮಾಡಿಕೊಳ್ಳಿ, ಆದರೆ ಕೆಲಸವಾದ ಬಳಿಕ ವಿಳಂಬ ಸರಿಯೇ ? ಇದೂ ಒಂದು ಕಾಳಜಿಯಾ ? ಬಳಕೆದಾರರೇ ಪ್ರಯತ್ನಿಸಿ ಪೂರ್ಣ ಆದರೂ ಬಳಕೆಗೆ ಬರದೇ ಇರುವುದು  ವಿಷಾದನೀಯವಾಗಿದೆ.

ಹಾಗೆ ನೀಡಿದರೆ 14 ವರ್ಷದ ಕಾಮಗಾರಿ ಇದು. ಇಲ್ಲಿ  14 ವರ್ಷ ವಿಳಂಬ ಏಕಾಯಿತು ಹಾಗೂ ಅಷ್ಟೂ ವರ್ಷ ಫಾಲೋಅಪ್ ಏಕೆ ವಿಳಂಬವಾಯಿತು ? ಸುಳ್ಯದ 110 ಕೆವಿ ಸಬ್ ಸ್ಟೇಶನ್ ಏಕೆ ಇಂದಿಗೂ ಸಭೆ ನಡೆಯಲಿಲ್ಲ ? ಇತ್ಯಾದಿ ಪ್ರಶ್ನೆ ಕೇಳಬೇಕಾಗಿದೆ, ಏಕೆಂದರೆ ಅಭಿವೃದ್ಧಿ ನಾವೇ ಮಾಡಬೇಕು ಎನ್ನುವವರು ಇದಕ್ಕೆ ಉತ್ತರಿಸಬೇಕು.

ಮಾಡಾವು 110 ಕೆವಿ ವಿದ್ಯುತ್ ಕೇಂದ್ರದ ಪ್ಲಾಶ್ ಬ್ಯಾಕ್ :

ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವೆಂದು ಹೇಳಲಾದ ಪುತ್ತೂರು ತಾಲೂಕು ಮಾಡಾವಿನಲ್ಲಿ ಪ್ರಸ್ತಾವಿತ 110 ಕೆ.ವಿ. ವಿದ್ಯುತ್ ಕೇಂದ್ರ 14 ವರ್ಷದ ಹಿಂದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೈಗೆತ್ತಿಕೊಂಡಿದ್ದರೂ ಹತ್ತು ಹಲವು ಅನುಮತಿ ಸಿಗದೆ, ವಿವಾದಗಳು, ಕೋರ್ಟ್ ಕೇಸುಗಳು, ಇಲಾಖಾಧಿಕಾರಿಗಳ ಅಸಡ್ಡೆ , ಫಾಲೋಅಪ್ ಕೊರತೆ  ಇತ್ಯಾದಿಗಳಿಂದ
ನೆನೆಗುದಿಗೆಯಲ್ಲಿತ್ತು. ಇದೀಗ ಈ ಕಾಮಗಾರಿ ಮುಗಿದಿದೆ.

ಅನೇಕ  ವರ್ಷಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ  ಹಾಗೂ ಯಾವೊಬ್ಬ ನಾಯಕರೂ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ವರ್ಷದಿಂದ ವರ್ಷಕ್ಕೆ  ವಿದ್ಯುತ್ ಪರಿಸ್ಥಿತಿ ಹದಗೆಡುತ್ತಿರುವುದು , ಕೃಷಿಕರ ಸಂಕಷ್ಟ ಗಮನಿಸಿ ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ಫಾಲೋಅಪ್ ಗೆ ಇಳಿದರು. ಬಳಿಕ ಅರಣ್ಯ ಇಲಾಖೆ ಇತ್ಯಾದಿ ಅನುಮತಿ ದೊರಕಿಸಿಕೊಟ್ಟುದಲ್ಲದೆ ಲೈನ್ ವಿಚಾರವಾಗಿ ಆರ್ಯಾಪು, ಕೆಯ್ಯೂರು, ಕುಂಜೂರು ಪಂಜ  ಹಲವು ಸ್ಥಳಗಳಲ್ಲಿ ಇದ್ದ ತಕರಾರು ವಿವಾದಗಳನ್ನು ಸಮಿತಿ ಮಾತುಕತೆಯಿಂದ ಪರಿಹರಿಸಿ ಹಾಲಿ ಸ್ಟೇಷನ್ ಕಾಮಗಾರಿ ಸಂಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಇಂದಲ್ಲ  ಕಳೆದ ಹಲವು ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಸುಳ್ಯದ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿವೆ, ಕೃಷಿಕ ಪರ ಸಂಘಟನೆಗಳೂ ಹೋರಾಟ ಮಾಡಿವೆ, ಜನರು ಸಾಮಾಜಿಕ ಜಾಲತಾಣಗಳ ಮೂಲಕವೂ ಎಚ್ಚರಿಸಿದ್ದಾರೆ, ಈಚೆಗೆ ವಿದ್ಯುತ್ ಸಮಸ್ಯೆ ಬಗ್ಗೆ ಟ್ರೋಲ್ ಕೂಡಾ ಆಗಿತ್ತು. ಆದರೂ ಸುಳ್ಯದ 110 ಕೆವಿ ಸಬ್ ಸ್ಟೇಶನ್ ವಿಚಾರ ಕದಲಲಿಲ್ಲ..! .

ಇಂದಿಗೂ ಸುಳ್ಯ ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದರೆ ಅನೇಕ ಜನಪ್ರತಿನಿಧಿಗಳು ಉರಿದು ಬೀಳುತ್ತಾರೆ. ಆಗುತ್ತದೆ… ಅಡೆತಡೆ ಇದೆ ಅದೆಲ್ಲಾ ನಿವಾರಣೆಯಾದ ಬಳಿಕ ಆಗುತ್ತದೆ ಎನ್ನುತ್ತಾರೆ. ಡಿ ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರ ಮಾಡಿ ಎಂದು ಒತ್ತಾಯ ಮಾಡಲಾಗಿತ್ತು. ಮಾಡಾವು ಆದರೂ ಆಗಲಿ ಎನ್ನಲಾಗಿತ್ತು. ಆದರು ಆಗಿರಲಿಲ್ಲ. ಸುಳ್ಯ ತಾಲೂಕಿನ ಅಭಿವೃದ್ಧಿ, ಇಲ್ಲಿನ ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಯೋಚಿಸಿದರೆ ವಿದ್ಯುತ್ ಮಾತು ಹೆಚ್ಚಾಗಲೇಬೇಕಾದ ಅನಿವಾರ್ಯತೆ ಇದೆ.

ಕಳೆದ ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿಗೆ ವಿದ್ಯುತ್ ಸಮಸ್ಯೆ ಇದೆ. ಪ್ರತೀ ಬಾರಿ ಮಾತನಾಡುವಾಗಲೂ ಸುಳ್ಯಕ್ಕೆ 110 ಕೆವಿ ಲೈನ್ ಬಂದರೆ ಎಲ್ಲವೂ ಸರಿಯಾಗುತ್ತದೆ ಎಂಬುದು ಒಂದು ಉತ್ತರವಾದರೆ, ಮಾಡಾವು ಸಬ್ ಸ್ಟೇಶನ್ ಆದರೆ ಸರಿಯಾಗುತ್ತದೆ ಎಂಬುದು ಇನ್ನೊಂದು ಉತ್ತರ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೊಂದು ಇಶ್ಯೂ ಆಗಿತ್ತು. ಹೋರಾಟದ ಹಂತದವರೆಗೂ ಹೋಗಿತ್ತು. ಆದರೆ ಚುನಾವಣೆಯ ನಂತರ ವಿದ್ಯುತ್ ಕೆಲಸ ಆಗುತ್ತದೆ ಎನ್ನಲಾಗಿತ್ತು.  ಯಾವುದೇ ನಿರೀಕ್ಷಿತ ಪ್ರಗತಿ ಆಗಿಲ್ಲ. ಈಗ ಮಾಡಾವು ಪೂರ್ತಿಯಾದರೂ ಸಂಪರ್ಕಕ್ಕೆ ವಿಳಂಬ ಮಾಡಲಾಗುತ್ತಿದೆ.

 

ಸುಮಾರು 15 ವರ್ಷದಿಂದ ಸುಳ್ಯದಲ್ಲಿ  ವಿದ್ಯುತ್ ಸಮಸ್ಯೆ ಇದ್ದರೂ  ವರ್ಷದ ಪ್ಲಾಶ್ ಬ್ಯಾಕ್ ಇಲ್ಲಿದೆ….! ಈ ಕೆಳಗಿನ ವರದಿಗಳನ್ನು  ಗಮನಿಸಿ, ಇದೆಲ್ಲಾ ಆಗಿದೆಯೇ ? 

 

ಶಾಸಕ ಅಂಗಾರ ಅವರಿಂದ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ

 

ಮಾಡಾವು ಸಬ್ ಸ್ಟೇಶನ್ ಆದರೆ ಏನು ಲಾಭ..

ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಆದರೆ ಏನು ಪ್ರಯೋಜನ ?

 

 

ಜನರೇ ಮಾತನಾಡಿದರು, ಚರ್ಚೆ ನಡೆಸಿದರು 

 

ಕಳೆದ ವರ್ಷ ಜೂನ್ ವೇಳೆ ಮಾಡಿದ ಒತ್ತಾಯ

 

ಜನರ ಒತ್ತಾಯ-ಪ್ರಯತ್ನ: 

 

ಜನರ ಪ್ರಯತ್ನದ ಫಲ….. ಹಾಗಿದ್ದರೂ ಪ್ರಯೋಜನ… ತೆಗೆದುಕೊಂಡ ಕ್ರಮ…?

 

 ಪತ್ರಕರ್ತರ ಪ್ರಶ್ನೆಗೆ ಸಚಿವರು ಹೇಳಿದ್ದು…

 

ಕಳೆದ ವರ್ಷ ಹೇಳಿದ್ದು…!

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |

ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

1 day ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

1 day ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 day ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 days ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

2 days ago