ಮಾದಕ ವಸ್ತು ವ್ಯಸನಿಯನ್ನು ಆರೋಗ್ಯವಂತನಾಗಿ ಮನೆಗೆ ಸೇರಿಸಿದ ದೈಗೋಳಿಯ ಸಾಯಿನಿಕೇತನ ಆಶ್ರಮ

October 22, 2019
7:14 PM
ಇದೊಂದು ಪಾಸಿಟಿವ್ ಸುದ್ದಿ. ಬೆಳಕು ನೀಡಿದ ಸುದ್ದಿ.  ದೈಗೋಳಿಯ ಸಾಯಿನಿಕೇತನ ಆಶ್ರಮದ ಈ ಕಾರ್ಯ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳಕು ನೀಡಿದ ಈ ಸುದ್ದಿ ಇಲ್ಲಿದೆ..
ಕಳೆದ ಜೂನ್‌ ತಿಂಗಳಲ್ಲಿ ಉಡುಪಿ,ಬ್ರಹ್ಮಾವರ ಸುತ್ತ ಮುತ್ತ ಮಾನಸಿಕ ಅಸ್ವಸ್ಥತೆಯಿಂದ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಅಲೆಮಾರಿಯಾಗಿ ತಿರುಗಾಡುತ್ತಿದ್ದ ಸಾಮಾನ್ಯ 20 ವರ್ಷದ ತರುಣನನ್ನು ಉಡುಪಿಯ ಸಮಾಜಸೇವಕ  ವಿಶುಶೆಟ್ಟಿ ಅಂಬಲಪಾಡಿಯವರು ಮಂಜೇಶ್ವರ ದೈಗೋಳಿಯ ಶ್ರೀ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಿದ್ದರು.
 ಆಶ್ರಮದಲ್ಲಿ ಈತನನ್ನು ಮಾನಸಿಕ ತಜ್ಞರು ಪರೀಕ್ಷಿಸಿದ ನಂತರ ಎರಡು ತಿಂಗಳು ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಶ್ರಮದಲ್ಲಿ ಚಿಕಿತ್ಸೆ ಮುಂದುವರಿಸುವುದರೊಂದಿಗೆ ಆಪ್ತ ಸಲಹೆ, ಚಟುವಟಿಕೆ ಹಾಗೂ ಸತ್ಸಂಗಗಳ ಮುಖಾಂತರ ಸಹಜ ಸ್ಥಿತಿಗೆ ತಲುಪಿದ ತರುಣ ತನ್ನ ವಿವರವನ್ನು ತಿಳಿಸುವುದರೊಂದಿಗೆ ಮನೆಗೆ ಹೋಗುವ ಹಂಬಲ ವ್ಯಕ್ತಪಡಿಸಿದ.  ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ  ಕೋಟೂರಿನ ಪೋಲಿಸ್ ಠಾಣೆಯನ್ನು ಸಂಪರ್ಕ  ಮಾಡಿ ಶೈಲೇಂದ್ರನ ಮನೆಯವರೊಡನೆ  ಫೋನ್ ಮುಖಾಂತರ ಮಾತನಾಡಿದಾಗ ಪುತ್ರಶೋಕದಿಂದ ಕಂಗಾಲಾಗಿದ್ದ ಮಾತಾಪಿತರು ಸಂತಸದ ಕಣ್ಣೀರು ಸುರಿಸಿದರು. ಅವರನ್ನು ಇಲ್ಲಿಗೆ ಕರೆಸಿ ಸಂತೋಷದಿಂದ ಬೀಳ್ಕೊಡಲಾಯಿತು.ಶೈಲೇಂದ್ರ ನ ಮನೆಯವರು ಚಿಕಿತ್ಸೆ ನೀಡಿದ ವೈದ್ಯರಿಗೆ, ಆಶ್ರಮದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಶೈಲೇಂದ್ರನ ಕಥೆ ಆರಂಭಗೊಂಡಿದ್ದು ಹೀಗೆ:  20 ವರ್ಷದ ತರುಣ ಶೈಲೇಂದ್ರ ಗಾಂಜಾ, ಮದ್ಯ ಇತ್ಯಾದಿಗಳ ವ್ಯಸನಿಯಾಗಿದ್ದು ಮಾತಾ ಪಿತರು ಆಗಾಗ ಬುದ್ಧಿವಾದ ಹೇಳುತ್ತಿದ್ದರು. ಅದರಿಂದ ಕುಪಿತನಾದ ಆತ ಕಳೆದ ನವೆಂಬರ್ ನಲ್ಲಿ ಮನೆಯಿಂದ ‌ಪರಾರಿಯಾಗಿದ್ದ. ಅಲ್ಲಲ್ಲಿ ಅಲೆದಾಡಿ, ಮುಂಬೈಗೆ ಬಂದು ದಿಕ್ಕುತೋಚದೆ ಯಾವುದೋ ಟ್ರಕ್ ಹತ್ತಿ ಬಂದವನು ಬ್ರಹ್ಮಾವರಕ್ಕೆ ತಲುಪಿದ್ದ. ಮಾನಸಿಕ ವಿಕಲ್ಪಕ್ಕೊಳಗಾಗಿ ಸ್ತ್ರೀ ಯರ ಹಿಂದೆ ತಿರುಗಾಡುವುದು, ಅತ್ತಿಂದಿತ್ತ ಅಲೆದಾಡುವುದು ಮಾಡುತ್ತಿದ್ದ ಶೈಲೇಂದ್ರ ತನ್ನ ಹೆಸರನ್ನೂ ಮರೆತಿದ್ದು ಸಾಯಿನಿಕೇತನ ಸೇವಾಶ್ರಮ ಸೇರಿದಾಗ ತನ್ನ ಹೆಸರನ್ನು ಸಲೀಂ ಎಂದೇ ಹೇಳಿಕೊಳ್ಳುತ್ತಿದ್ದ. ಇದೀಗ ಮಾನಸಿಕ ಸಹಜತೆಗೆ ಬಂದಿದ್ದು ತನ್ನ ಮನೆಯವರೊಂದಿಗೆ ಕೆಲಸ ಮಾಡಿಕೊಂಡು ಸರಿಯಾಗಿ ಇರುವ ಭರವಸೆಯನ್ನು ತೋರಿಸುತ್ತಿದ್ದಾನೆ. ಮಾದಕವ್ಯಸನ  ಜೀವನವನ್ನು ಎಂತಹ ದುರ್ದೆಸೆಗೆ ಕೊಂಡೊಯ್ಯುವುದು ಎಂಬುದರ ಜೊತೆಗೆ ಸರಿಯಾದ ಚಿಕಿತ್ಸೆ, ಹಾಗೂ ಸತ್ಸಂಗಗಳಿಂದ ಹೇಗೆ  ಸಹಜ ಜೀವನಕ್ಕೆ  ಹಿಂದಿರುಗಬಹುದು ಎಂಬುದೆರಡಕ್ಕೂ ಈ ಪ್ರಕರಣ ಮಾರ್ಗದರ್ಶಿಯಾಗಿದೆ.
.
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror