ಸುಳ್ಯ: ವಾಸ್ತವಿಕ ಸತ್ಯದ ಪ್ರಚಾರಕ್ಕೆ ಒತ್ತು ನೀಡಬೇಕು. ವಾಸ್ತವವನ್ನು ಮಾತ್ರ ಬಿಂಬಿಸಿದರೆ ಮಾಧ್ಯಮಗಳ ಬಗ್ಗೆ ಜನರಿಗೆ ನಂಬಿಕೆ ಬರುತ್ತದೆ. ಜನರ ನಂಬಿಕೆ ಗಳಿಸಿದ ಮಾಧ್ಯಮಗಳು ಎತ್ತರಕ್ಕೆ ಬೆಳೆಯುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದಲ್ಲಿ ಆರಂಭಗೊಂಡ ‘ಫಾರ್ಚ್ಯೂನ್ ಟಿವಿ’ ಲೋಕಾರ್ಪಣೆ ಸಮಾರಂಭದಲ್ಲಿ ಟಿವಿಯ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು. ಬೆಳವಣಿಗೆಯ ಪ್ರತಿ ಹಂತದಲ್ಲಿ ಟೀಕೆಗಳು, ವಿರೋಧಗಳು, ಸ್ಪರ್ಧೆಗಳು ಸಹಜ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಬೆಳೆಯಬೇಕು. ಸುಂದರ ಸುಳ್ಯ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.
ಮಾಧ್ಯಮಗಳು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಲಿ- ಭಾರದ್ವಾಜ್: ಮಾಧ್ಯಮಗಳು ಜನರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಹೇಳಿದರು. ನೈಜತೆಯನ್ನು ಬಿಂಬಿಸುವುದರ ಜೊತೆಗೆ ಮಾನವ ಪ್ರೀತಿಯನ್ನು ಬೆಳೆಸಲು ಮಾಧ್ಯಮಗಳು ಸೇತುವೆಯಾಗಬೇಕು ಎಂದರು.
ವಿಶ್ವಾಸಾರ್ಹತೆ ಜೀವಾಳ-ಶ್ರಿನಿವಾಸ್ ಇಂದಾಜೆ: ಪ್ರತಿಯೊಂದು ಮಾಧ್ಯಮಕ್ಕೂ ವಿಶ್ವಾಸಾರ್ಹತೆಯೇ ಜೀವಾಳ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹೇಳಿದ್ದಾರೆ ನವ ಮಾಧ್ಯಮಗಳ ಯುಗದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿ ಬೆಳೆಯುವುದು ಪ್ರತಿಯೊಂದು ಮಾಧ್ಯಮಕ್ಕೂ ದೊಡ್ಡ ಸವಾಲು. ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಜವಾಬ್ದಾರಿ ದೊಡ್ಡದು ಎಂದರು.
ನಾಡಿನ ಪ್ರಗತಿಯ ಸಂಕೇತ-ಖಾದರ್ ಶಾ: ಮಾಧ್ಯಮಗಳು ಆರಂಭವಾಗುವುದು ಒಂದು ನಾಡಿನ ಬೆಳವಣಿಗೆಯ ಸಂಕೇತ ಎಂದು ವಾರ್ತಾಧಿಕಾರಿ ಖಾದರ್ ಶಾ ಅಭಿಪ್ರಾಯಪಟ್ಟರು. ಊರಿನ ಬೆಳವಣಿಗೆಯ ಜೊತೆಗೆ ಮಾಧ್ಯಮಗಳೂ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ಜಯರಾಮ ಶೆಟ್ಟಿ ಕಂಬಳಪದವು ದೀಪ ಬೆಳಗಿಸಿ ಫಾರ್ಚ್ಯೂನ್ ಟಿವಿಯನ್ನು ಲೋಕಾರ್ಪಣೆ ಮಾಡಿದರು. ಸುಳ್ಯ ಪೊಲೀಸ್ ಉಪನಿರೀಕ್ಷಕ ಎಂ.ಆರ್.ಹರೀಶ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ ಪೆರಾಜೆ, ಪ್ರಗತಿಪರ ಕೃಷಿಕ ಸೀತಾರಾಮ ಕೊಲ್ಲರಮೂಲೆ, ಆರ್ ಜೆ ತ್ರಿಶೂಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾರ್ಚ್ಯೂನ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಆಭಿಲಾಷ್ ಕಂಬಳಪದವು ಉಪಸ್ಥಿತರಿದ್ದರು. ಪ್ರಧಾನ ಸಂಪಾದಕ ವಿಖ್ಯಾತ್ ಬಾರ್ಪಣೆ ಸ್ಚಾಗತಿಸಿ, ಪ್ರಸ್ತಾವನೆಗೈದರು.
ಪ್ರಸಾದ್ ಕಾಟೂರು ಮತ್ತು ಸುಶ್ಮಿತ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಗುಡ್ಡೆಮನೆ ಸಹಕರಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…