ಸುಳ್ಯ:ಬಿಜೆಪಿ ಕಚೇರಿಗೆ ಪತ್ರಿಕಾಗೋಷ್ಟಿಗೆ ಬರಲು ಹೇಳಿ ಹೀಗೆ ಮಾಡುವುದಾ ?.ಏನದು ಘಟನೆ ? ಇಲ್ಲಿದೆ…
ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನ ಉಂಟಾಗಿರುವ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದಂತೆ ಪತ್ರಿಕಾಗೋಷ್ಠಿಗೆಂದು ಆಗಮಿಸಿದ ಮಾಧ್ಯಮಪ್ರತಿನಿಧಿಗಳಿಗೆ ತಡೆ ಮಾಡಿದ ಕಾರಣ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಪತ್ರಕರ್ತರು ಬಹಿಷ್ಕರಿಸಿದ ಘಟನೆ ಬುಧವಾರ ನಡೆಯಿತು.ಬಳಿಕ ಬಿಜೆಪಿ ನಾಯಕರು ಪ್ರೆಸ್ ಕ್ಲಬ್ ಗೆ ಆಗಮಿಸಿ ಸುದ್ದಿಗೋಷ್ಟಿ ನಡೆಸಿದರು.
ಅಂಗಾರರಿಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಪಕ್ಷದ ತೀರ್ಮಾನಗಳ ಕುರಿತು ವಿವರಿಸಲು ಬುಧವಾರ 12 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸುದ್ದಿಗೋಷ್ಠಿಗೆಂದು ಕೆಲವು ಪತ್ರಕರ್ತರು ಸ್ವಲ್ಪ ಮೊದಲೇ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುತ್ತಿತ್ತು. ಕಚೇರಿಗೆ ಆಗಮಿಸುತ್ತಿದ್ದಂತೆ ಪತ್ರಕರ್ತರನ್ನು ಅಲ್ಲಿದ್ದ ಕೆಲವು ಕಾರ್ಯಕರ್ತರು ತಡೆದರು. ಕೆಲವು ಮಾಧ್ಯಮದವರು ಆಗಮಿಸಿದ ಸಂದರ್ಭದಲ್ಲಿ ಸಭೆಗೆ ಬಾರದಂತೆ ನಾಯಕರು ಧ್ವನಿವರ್ಧಕದ ಮೂಲಕ ಹೇಳಿದ ಪ್ರಸಂಗವೂ ನಡೆಯಿತು. ಇದರಿಂದ ತೀವ್ರ ಅಸಮಾಧಾನಗೊಂಡ ಪತ್ರಕರ್ತರು ಬಿಜೆಪಿ ಕಚೇರಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ ಎಂದು ತೆರಳಿದರು.
ಬಳಿಕ ಬಿಜೆಪಿ ನಾಯಕರು ಪ್ರೆಸ್ ಕ್ಲಬ್ ಗೆ ಆಗಮಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…