ಮಾಧ್ಯಮ ಲೋಕದಲ್ಲಿ ಪ್ರಶಾಂತವಾಗಿ ಮಿಂಚುತ್ತಿರುವ ನಮ್ಮೂರ ಹುಡುಗ “ಶಿವಪ್ರಶಾಂತ್ ಭಟ್”

November 19, 2019
10:42 AM
ಮಾಧ್ಯಮ ಲೋಕವೆಂಬುದು ವಿಶೇಷ ಸೆಳೆತವುಳ್ಳದ್ದು. ಅಲ್ಲಿ ಸ್ಪರ್ಧೆಯಿದೆ , ಗೌರವವಿದೆ, ವಿಶೇಷ ಸ್ಥಾನ ಮಾನಗಳಿವೆ.  ಅಲ್ಲಿ ಗ್ಲಾಮರ್ ಇದೆ,ಗಾಸಿಪ್ ಇದೆ, ಸ್ವಚ್ಛಂದವಿದೆ,. ಸಿನೆಮಾ ಕ್ಷೇತ್ರಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಹತ್ತಿರದ ನಂಟು. ಜನಸಾಮಾನ್ಯರ ಕಣ್ಣಿಗೆ ಕಾಣದ ಲೋಕದ ಅನಾವರಣ ಪತ್ರಿಕೋದ್ಯಮಿಗಳಿಗೆ ಸುಲಭ ಸಾಧ್ಯ. ಹಾಗಾಗಿ ಯುವಜನತೆಯ ನೆಚ್ಚಿನ ಆಯ್ಕೆ ಪತ್ರಿಕೋದ್ಯಮ. ಮಾದ್ಯಮ ಕ್ಷೇತ್ರವೆಂದರೆ ಒಂದು ತೂಕವೇ ಜಾಸ್ತಿ. ಅದರಲ್ಲೂ ಕ್ಯಾಮಾರಾ ಮುಂದೆ ನಿಂತವರಂತೂ ಒಂದು ಗತ್ತು ಬೇರೆಯೇ. ಆದರೆ ಕ್ಯಾಮಾರ ಹಿಂದಿನ ಶಕ್ತಿಯೂ ಅಷ್ಟೇ ಪ್ರಬಲ.
ಮಾದ್ಯಮ ಲೋಕದಲ್ಲಿ, ಛಾಯಾಚಿತ್ರ ಹಾಗೂ ವಿಡಿಯೋ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿದ್ದರೂ ಆ ಬಗ್ಗೆ ಅರಿವು ಕಡಿಮೆ. ಅಲ್ಲಿ ವಿಪುಲ ಅವಕಾಶಗಳಿವೆ. ಸಾವಿರ ಶಬ್ದಗಳಲ್ಲಿ  ವರ್ಣಿಸಲಾಗದ್ದನ್ನು ಒಂದು ಛಾಯಾಚಿತ್ರ ಹೇಳಿ ಬಿಡುತ್ತದೆ.  ಒಂದು 50 ಸೆಕುಂಡಿನ ವಿಡಿಯೋ ಸಂದರ್ಭವನ್ನೇ ಪುನರಾವರ್ತಿಸುತ್ತದೆ.  ಈ ಪ್ರಬಲ ಮಾಧ್ಯಮದ ಆಕರ್ಷಣೆಗೆ ಒಳಗಾಗಿ ಮುಂಬೈ ಸೇರಿ ಯಶಸ್ವಿಯಾದ  ನಮ್ಮೂರ ಯುವಕ ಶಿವಪ್ರಶಾಂತ್ ಭಟ್.
ಶಿವ ಪ್ರಶಾಂತ, ತಿಪ್ಪನಕಜೆ
ಸುಳ್ಯ ತಾಲೂಕಿನ ಕಲ್ಮಡ್ಕದ  ತಿಪ್ಪನಕಜೆ ಶಂಕರನಾರಾಯಣ ಭಟ್ ಹಾಗೂ ಮಹಾಲಕ್ಷ್ಮಿ ಭಟ್ ಅವರ ಮೂವರು ಮಕ್ಕಳಲ್ಲಿ ಕೊನೆಯವರು ಶಿವ ಪ್ರಶಾಂತ್ ಭಟ್.  ಕಲ್ಮಡ್ಕದಲ್ಲಿ ಪ್ರಾಥಮಿಕ ಶಿಕ್ಷಣ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ  ಪ್ರೌಢಶಾಲಾ ಶಿಕ್ಷಣವನ್ನು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ  ಮುಂದಿನ ಶಿಕ್ಷಣವನ್ನು ಪಡೆದರು. ಕ್ಯಾಮರಾದ ಮೇಲಿನ ಆಪಾರವಾದ ಪ್ರೀತಿ ಮುಂಬೈಯತ್ತ ಪ್ರಶಾಂತ್ ರನ್ನು ಸೆಳೆಯಿತು. ವಿಧ್ಯಾಭ್ಯಾಸ‌ದ ಮೊದಲ ಹಂತದ ಶಿಕ್ಷಣವನ್ನು ಮುಗಿಸಿ ಮುಂಬೈಗೆ ಚಿಕ್ಕಪ್ಪನ ಮನೆಸೇರಿದ ಹುಡುಗನನ್ನು ಆಕರ್ಷಸಿದ್ದು ಕ್ಯಾಮಾರಾ. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಒಳ್ಳೆಯ ಪ್ರೊಡಕ್ಷನ್ ಹೌಸ್‌ನಲ್ಲಿ‌ ಸೇರಿ ತರಬೇತಿ ಪಡೆದು ,ಇಂದು ಇಂಡಿಯಾ ಟುಡೇ ಗುಂಪಿನ ಆಜ್ ತಕ್ ಚ್ಯಾನೆಲ್ ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಶಿವಪ್ರಶಾಂತ್ ಭಟ್ ತಿಪ್ಪನಕಜೆ . ಸುಮಾರು ಹದಿನೈದು ವರ್ಷಗಳಿಂದ ವಿವಿಧ  ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.   ಹೆಸರಿಗೆ ಅನ್ವರ್ಥವಾಗಿರುವವರು . ಬಾಲ್ಯದಲ್ಲಿ ಹೇಗಿದ್ದರೋ ಹಾಗೇ ಈಗಲೂ ತಮ್ಮ ನಡೆ ನುಡಿಯಲ್ಲಿ ಅದೇ ಸೌಜನ್ಯ ವನ್ನು ಉಳಿಸಿಕೊಂಡಿದ್ದಾರೆ. ದೇಶದ ನಂಬರ್ ಒನ್  ಹಿಂದಿ ಚಾನಲ್ ನಲ್ಲಿ ಉನ್ನತ ಹುದ್ದೆಗೇರುವುದು  ಸುಲಭದ ಮಾತಲ್ಲ. ಇಂದು ಆ ಸ್ಥಾನವನ್ನು ಪಡೆಯಬೇಕಾದರೆ ಅವರ ಅಪಾರ ಶ್ರದ್ಧೆ, ಪರಿಶ್ರಮ, ಕೆಲಸದ ಮೇಲಿನ  ಆಸಕ್ತಿಯೇ ಕಾರಣ. ದಕ್ಷಿಣ ಭಾರತದಿಂದ ಉತ್ತರಕ್ಕೆ ಭಾರತಕ್ಕೆ ಹೋದರೆ  ಕಾಡುವುದು ಭಾಷೆ. ಅಲೆಲ್ಲ ಹಿಂದಿ ಮುುಖ್ಯ ಆಡು  ಭಾಷೆ . ಮೊದಲ ದಿನಗಳಲ್ಲಿ  ಕೆಲಸದೊಂದಿಗೆ ಭಾಷೆಕಲಿಯುುವ ಸವಾಲುಗಳನ್ನು ಎದುರಿಸ ಬೇಕಾಯಿತು.
ನಾವು ಮಾಡುತ್ತಿರುವ ಕೆಲಸವನ್ನು ಕೆಲಸವೆಂದು ತಿಳಿದರೆ ಬೋರ್ ಎನಿಸಿಬಿಡುತ್ತದೆ.. ನಿಜವಾಗಿಯೂ ಆಸಕ್ತಿ ಇದ್ದಾಗ ಮಾತ್ರ ಮಾದ್ಯಮ ಕ್ಷೇತ್ರವನ್ನು ಆಯ್ದು ಕೊಳ್ಳಬೇಕು. ಹಾಗಿದ್ದಾಗ ಹೊಸತನ್ನು ಕಲಿಯಲು ಸಿಗುವ ಅವಕಾಶದ ಸದುಪಯೋಗವಾಗುತ್ತದೆ ಎಂಬುದು ಪ್ರಶಾಂತ್ ರವರ ಅನುಭವದ ಮಾತು.
ಕ್ಯಾಮರಾ ಒಂದು ಶಕ್ತಿಯುತ ಸಾಧನ, ಆದರೆ ಸರಿಯಾಗಿ ಬಳಸುವ ಚಾಕಚಕ್ಯತೆಯನ್ನು ಹೊಂದಿರಬೇಕು.   ಸಿಕ್ಕುವ ಸಣ್ಣ ಸಣ್ಣ ಅವಕಾಶದ ಸದುಪಯೋಗ ಮಾಡುವ ಮನಸಿರಬೇಕು  .  ಪ್ರಶಾಂತ್ ರವರು ಕ್ಯಾಮರಾ ಹಿಡಿದು ಸುಮ್ಮನೆ ಫೋಟೋ ಕ್ಲಿಕ್ ಮಾಡುತ್ತಾ ಸಮಯ ಕಳೆಯಲಿಲ್ಲ. ಅಲ್ಲಿನ ಎಲ್ಲಾ ಕೆಲಸಗಳಲ್ಲಿ ಪರಿಣತರಾದರು. ಪತ್ರಿಕೋದ್ಯಮದೆಲ್ಲಾ ಮಜಲುಗಳನ್ನು ಶ್ರದ್ಧೆ ಯಿಂದ ಕಲಿತು ಒಂದೊಂದು ಹೆಜ್ಜೆ ಮುಂದಡಿಯಿಟ್ಟರು. ಕ್ಯಾಮರಾ,  ಎಡಿಟಿಂಗ್, ಗ್ರಾಫಿಕ್ಸ್, ಸೆಟ್ಟಿಂಗ್, ಸ್ಟುಡಿಯೋದ ಒಳಾಂಗಣ ಹಾಗೂ ಹೊರಗಿನ ಚಿತ್ರೀಕರಣಗಳಲ್ಲಿ  ಪರಿಣತರಾದರು.
 ದೇಶದೊಳಗೆ ಮಾತ್ರವಲ್ಲ ,ವಿದೇಶಗಳಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. IIFA(ಅಂತರಾಷ್ಟ್ರೀಯ ಇಂಡಿಯನ್  ಫಿಲ್ಮ್ ಅಕಾಡೆಮಿ ಅವಾರ್ಡ್ಸ್) ಚಲನಚಿತ್ರೋತ್ಸವಗಳಲ್ಲಿ ವರದಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು. ದುಬೈ, ಸಿಂಗಾಪುರ, ಮಾಸ್ಕೋ, ಕೆನಡಾ, ಶ್ರೀ ಲಂಕಾಗಳಲ್ಲಿ ಆಜ್ ತಕ್ ತಂಡವನ್ನು ಪ್ರತಿನಿಧಿಸಿ ಭೇಷ್ ಎನಿಸಿಕೊಂಡವರು.
2015-2016 ರಲ್ಲಿ ‌ಭಾರತ , ಪಾಕಿಸ್ತಾನ ಗಡಿ ಪ್ರದೇಶಗಳಿಗೆ ವರದಿಗಾಗಿ ಹೋಗಿದ್ದಾರೆ. ಆ ದಿನಗಳಲ್ಲಿ ವಿಪರೀತ ಶೆಲ್ ದಾಳಿಗಳಾಗುತ್ತಿತ್ತು. ನೆನಪಿಸಿ ಕೊಂಡಾಗ ಈಗಲೂ‌ ಮೈಝಮ್ಮೆನಿಸುತ್ತದೆಂದು ಅನುಭವಗಳನ್ನು ಹಂಚಿಕೊಳ್ಳುತ್ತಾರೆ.   ವಿದೇಶಗಳ  ಹಿಮಾಚ್ಛಾದಿತ ಪ್ರದೇಶಗಳಲ್ಲಿ ವರದಿಗಾಗಿ ತೆರಳಿದ್ದೂ ಇದೆ. ಅವುಗಳಲ್ಲಿ ಜೀವನ ಶ್ರೇಷ್ಠ ಅವಕಾಶವೆಂದರೆ ಟ್ರಾನ್ಸ್- ಕೆನಡಾ- ಹೈವೇ ಡ್ರೈವ್ (Transcontinental Federal- Provincial Highway system ) 2018ರಲ್ಲಿ ಕೆನಡಾ ಪ್ರವಾಸೋದ್ಯಮದ ಪ್ರಾಯೋಜಕತ್ವ ದಲ್ಲಿ  ಇವರೂ ಸೇರಿ  6 ಜನರ ತಂಡ ಎರಡು ಕಾರುಗಳಲ್ಲಿ   12 ದಿನಗಳ ಪ್ರಯಾಣ ಕೈಗೊಂಡರು.   ಇದೊಂದು ಅಧ್ಯಯನ ಪ್ರವಾಸವಾಗಿತ್ತು.  ಕೆನಡಾದ 10 ಪ್ರಾಂತ್ಯಗಳ ಮೂಲಕ ಈ ಹೆದ್ದಾರಿಯು ಸಾಗುತ್ತದೆ. 7821  ಕಿಮೀ ನಷ್ಟು ಉದ್ದ ವಾಗಿರುವ ಈ ಹೆದ್ದಾರಿ ಪಶ್ಚಿಮ ಫೆಸಿಫಿಕ್ ಮಹಾಸಾಗರದಿಂದ ಅಟ್ಲಾಂಟಿಕ್ ಸಾಗರದವರೆಗಿದೆ. ಹಲವು ಕಡಿದಾದ , ಸಾಹಸಮಯ ಪ್ರಯಾಣದ ಅನುಭವ ಇಲ್ಲಿನದು.
ಒಳಾಂಗಣ ಹಾಗೂ ಹೊರಾಂಗಣ ಎರಡು ಕಡೆಯ ಚಿತ್ರೀಕರಣ, ವರದಿಗಳಲ್ಲಿ ಇಂದು ಪ್ರಶಾಂತ್ ಅವರು ಎತ್ತಿದ ಕೈ. ವೃತ್ತಿಯ ಕುರಿತು ಕಲಿಕೆಯಲ್ಲಿ ಒಂದು ಕುತೂಹಲವನ್ನು ಯಾವಾಗಲೂ ಉಳಿಸಿಕೊಂಡು ಯುವಜನತೆಗೆ ಮಾದರಿ ಪೋಟೋ ಜರ್ನಲಿಸ್ಟ್ ಆಗಿದ್ದಾರೆ. ಈ ವೃತ್ತಿ ಯನ್ನು ಆಯ್ದುಕೊಳ್ಳುವವರಿಗೆ ಮಾರ್ಗದರ್ಶನಕ್ಕೆ ಇವರು ಸದಾ ಸಿದ್ಧ.
ಪ್ರಶಾಂತ್ ರವರು ನೋಡಲು ಯಾವ  ರೂಪದರ್ಶಿಗಳಿಗೂ ಕಮ್ಮಿಯಿಲ್ಲ. ನಟನೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಕೃತಿ ರಕ್ಷಣೆಯ ಕುರಿತು ( save earth)ಇತ್ತೀಚೆಗೆ ಒಂದು ವಿಡಿಯೋದಲ್ಲಿ ಅಭಿನಯಿಸಿ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ  ಇವರು ಪತ್ನಿ ಶ್ವೇತ ಜೊತೆ ಮುಂಬಯಿಯಲ್ಲಿ ನೆಲೆಸಿದ್ದಾರೆ.
ತನ್ನ ವೃತ್ತಿಯನ್ನು ಬಹು ಪ್ರೀತಿಸುವ, ಗೌರವಿಸುವ  ಇವರು ಜೀವನ ನೆಮ್ಮದಿ , ಸುಖಶಾಂತಿಯಿಂದ ಕೂಡಿರಲಿ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror