ಸುಳ್ಯ: ಅರಂತೋಡು ಆರ್ಟ್ಸ್ &ಸ್ಪೊರ್ಟ್ಸ್ ಕ್ಲಬ್ ಇದರ ಅಶ್ರಯದಲ್ಲಿ 3 ನೇ ವರ್ಷದ 30 ಗಜಗಳ 7 ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ ಮಾರ್ಚ್ 22 ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಮಾರ್ಚ್ 22ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸಮಾರಂಭವನ್ನು ಅರಂತೋಡು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಉದ್ಘಾಟಿಸಲಿದ್ದಾರೆ. ಅರಂತೋಡು ಸ್ಪೊರ್ಟ್ಸ್ ಕ್ಲಬ್ ಅಧ್ಯಕ್ಷ ರಿಯಾಝ್ ಸಣ್ಣಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಆತಿಥಿಯಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ, ಸುಳ್ಯ ತಾಲ್ಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಅರಂತೋಡು ಕೃಷಿ ಪತ್ತಿನ ಸಹಕಾರಿ ಉಪಾಧ್ಯಕ್ಷ ದಯಾನಂದ ಕುರುಂಜಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವಿನೋದ್ ಕುಮಾರ್ , ಕುಸುಮಾಧರ ಅಡ್ಕಬಳೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಬನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ .ಡಿ.ಎಮ್ .ಸಿ.ಅಧ್ಯಕ್ಷ ಬಿ.ಹೆಚ್.ಪದ್ಮಯ್ಯ, ಅರಂತೋಡು ಸ್ಪೊರ್ಟ್ಸ್ ಕ್ಲಬ್ ಗೌರವಧ್ಯಕ್ಷ ಅನ್ವರ್ ಕೆ.ಎಮ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾ ಪಟು ಸಾತ್ವಿ ಮೇರ್ಕಜೆ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಮತ್ತು ಕೊಕ್ಕೋ ಕ್ರೀಡಾಪಟು ವರ್ಷ ಯು.ವಿ ಮತ್ತು ಜಿಲ್ಲಾ ಮಟ್ಟದ ಕ್ರೀಡಾ ಪಟು ಮಹಮ್ಮದ್ ಅರ್ಷಾದ್ ಗುಂಡಿ ಇವರನ್ನು ಸನ್ಮಾನಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಅರಂತೋಡು ಸ್ಪೊರ್ಟ್ಸ್ ಕ್ಲಬ್ ಅಧ್ಯಕ್ಷ ರಿಯಾಝ್ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರಾಜೀವ್ ಯೂತ್ ಪೌಂಡೇಶನ್ ರಾಜ್ಯಾಧ್ಯಕ್ಷರಾದ ಟಿ.ಎಮ್ .ಶಹೀದ್ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಆತಿಥಿಯಾಗಿ ಕ್ಯಾನ್ಸರ್ ತಜ್ಞ ಡಾ ರಘು, ಸುಳ್ಯ ಪಠೇಲ್ ಮೆಡಿಕಲ್ ಮಾಲಕ ಬದುರುದ್ದೀನ್ ಪಠೇಲ್, ತಾಜುದ್ದೀನ್ ಅರಂತೋಡು , ಅಬ್ದುಲ್ ಖಾದರ್ ಪಠೇಲ್, ದ.ಕ.ಎನ್ .ಎಸ್.ಯು.ಐ.ಉಪಾಧ್ಯಕ್ಷ ಶವಾದ್ ಗೂನಡ್ಕ, ಮಾಜಿ ಸೈನಿಕ ಫಸೀಲು ಅರಂತೋಡು, ಸುಳ್ಯ ತಾಲ್ಲೂಕು ಅಲ್ಪಸಂಖ್ಯಾತ ಸಹಕಾರಿ ಸಂಘದ ನಿರ್ದೇಶಕ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಭಾಗವಹಿಸಲಿದ್ದಾರೆ.
ಪ್ರಥಮ ಬಹುಮಾನ 8080 ನಗದು ಮತ್ತು ಸೌಹಾರ್ದ ಟ್ರೋಫಿ ದ್ವಿತೀಯ ಬಹುಮಾನ 5050 ನಗದು ಮತ್ತು ಸೌಹಾರ್ದ ಟ್ರೋಫಿ ನೀಡಲಾಗುವುದು ಎಂದು ಸಂಘಟಕರಾದ ಶರಫುದ್ದೀನ್, ಮುನೀರ್ ಸಂಟ್ಯಾರ್, ರಿಯಾಝ್ ಸಣ್ಣಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…