ಮಾವಿನಕಟ್ಟೆ: ಬೆನ್ನು ಮೂಳೆಯ ವಕ್ರತೆ ಎಂಬ ವಿರಳವಾದ ಕಾಯಿಲೆಯಿಂದ ಬಳಲುತ್ತಿರುವ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಮೃತಾಳಿಗೆ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ ಸಹಾಯಧನ ಹಾಗೂ ಬರೆಯುವ ಪುಸ್ತಕ ನೀಡಿ ನೆರವಾಗಿದೆ.
ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸಹಾಯಧನ ಹಾಗೂ ಬರೆಯುವ ಪುಸ್ತಕವನ್ನು ಹಸ್ತಾಂತರಿಸಿದರು. ಉಪನ್ಯಾಸಕ ಗಣೇಶ್ ನಾಯಕ್, ಮಾವಿನಕಟ್ಟೆ ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ, ಅಮೃತಾಳ ಅಜ್ಜಿ ಜಾನಕಿ ಉಪಸ್ಥಿತರಿದ್ದರು. ಅಮೃತಾಳ ಚಿಕಿತ್ಸೆಗೆ ರೂಪಾಯಿ 4 ಲಕ್ಷ ವ್ಯಯಿಸಬೇಕಾಗಿದ್ದು, ಬಡತನದಿಂದ ಬಳಲುತ್ತಿರುವ ಕುಟುಂಬಕ್ಕೆ ಸಹೃದಯಿಗಳ ನೆರವಿನ ಅಗತ್ಯವಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel