Advertisement
ಮಿಡತೆ ದಾಳಿ ಬಗ್ಗೆ ಕೃಷಿ ಇಲಾಖೆ ಹೀಗೆ ಸಲಹೆ ನೀಡುತ್ತದೆ….
ಮಿಡತೆ ಕೀಟ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿರುತ್ತದೆ ಹಾಗೂ ಕಾಣಿಸಿಕೊಂಡ ಮಿಡತೆಗಳು ಮರುಭೂವಿಯಲ್ಲಿ ಕಂಡುಬಂದ ಮಿಡತೆಗಳು ಆಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿ, ಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರಮ್ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸಬಹುದು.
ಬೇವಿನ ಮೂಲದ ಕೀಟನಾಶಕಗಳನ್ನು (0.15% ಇ.ಸಿ @3ಎಂ.ಎಲ್/ಲೀ) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ. ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು.
ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶ ಕನಿಷ್ಟ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್ ಜೆಟ್ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು.ಆದರೆ ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೀಟನಾಶಕ ಕ್ಲೊರೋಪೈರಿಪಾಸ್ 20% ಪ್ರತೀ ಹೆಕ್ಟರ್ ಗೆ 1.2 ಲೀ, ಕೀಟನಾಶಕ ಕ್ಲೊರೋಪೈರಿಪಾಸ್ 50% ಪ್ರತೀ ಹೆಕ್ಟರ್ ಗೆ 480 ಎಂ.ಎಲ್, ಕೀಟನಾಶ ಕಡೆಲ್ಟಮೆಥ್ರಿನ್ 2.8 ಪ್ರತಿ ಹೆಕ್ಟೇರ್ ಗೆ 450 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 5% ಎಸ್.ಸಿ ಪ್ರತಿ ಹೆಕ್ಟೇರ್ ಗೆ 125 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 2.8% ಇ.ಸಿ ಪ್ರತಿ ಹೆಕ್ಟೇರ್ ಗೆ 225 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 5.0% ಇ.ಸಿ.ಪ್ರತಿಹೆಕ್ಟೇರ್ ಗೆ 400 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 10.0% ಡಬ್ಲ್ಯೂಪಿ ಪ್ರತಿ ಹೆಕ್ಟೇರ್ ಗೆ 200 ಗ್ರಾಂ, ಕೀಟನಾಶಕ ಮಲಾಥಿಯಾನ್ 50% ಇ.ಸಿ.ಪ್ರತಿ ಹೆಕ್ಟೇರ್ ಗೆ 1.85 ಲೀ, ಕೀಟನಾಶಕ ಮಲಾಥಿಯಾನ್ 25% ಡಬ್ಲ್ಯೂಪಿ ಪ್ರತಿ ಹೆಕ್ಟೇರ್ ಗೆ 3.7 ಕಿ.ಗ್ರಾಂ ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಪ್ರಕಟಣೆ ತಿಳಿಸುತ್ತದೆ.
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…
ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649