“ಮುಂಗಾರು ಮಳೆ” ಇನ್ನೂ 2 ದಿನ ವಿಳಂಬ

June 5, 2019
9:41 PM

ಸುಳ್ಯ: ನೈರುತ್ಯ ಮುಂಗಾರು ಶ್ರೀಲಂಕಾ ತಲಪಿದ ಬಳಿಕ ಇದೀಗ ಮತ್ತೆ ವಿಳಂಬವಾಗಿದೆ. ಮಧ್ಯ ಶ್ರೀಲಂಕಾ ತಲಪಿದ ನೈರುತ್ಯ ಮುಂಗಾರು ಇದೀಗ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ವಿಳಂಬವಾಗುತ್ತಿದೆ. ಈಗಿನ ಪ್ರಕಾರ 2 ದಿನ ವಿಳಂಬವಾಗುವ ಸಾಧ್ಯತೆ ಇದೆ. ನಿರೀಕ್ಷೆ ಪ್ರಕಾರ ಜೂ.6 ರಂದು ಕೇರಳ ಪ್ರವೇಶವಾಗಬೇಕಿದ್ದ ಮುಂಗಾರು ಇದೀಗ ವಿಳಂಬವಾಗಿದೆ. ಹವಾಮಾನ ಇಲಾಖೆ  ಪ್ರಕಾರ ಕೇರಳಕ್ಕೆ ಜೂನ್ 8 ರ ಸುಮಾರಿಗೆ ತಲುಪಬಹುದಾದ ಮುನ್ಸೂಚನೆ ನೀಡಿದೆ.

Advertisement
Advertisement
Advertisement
Advertisement

ನಿರೀಕ್ಷೆ ಪ್ರಕಾರ ಜೂ.6 ರಂದು  ನೈರುತ್ಯ ಮುಂಗಾರು ಕೇರಳ ಪ್ರವೇಶ ಮಾಡಬೇಕಾಗಿತ್ತು. 3 ದಿನಗಳ ಹಿಂದೆಯೇ ನಿರೀಕ್ಷೆ ಪ್ರಕಾರ ಶ್ರೀಲಂಕಾ ಪ್ರವೇಶ ಮಾಡಿತ್ತು. ಆದರೆ ಅರಬೀ ಸಮುದ್ರದಲ್ಲಿ  ಉಂಟಾದ ವಾಯುಭಾರ ಕುಸಿತ ಮುಂಗಾರು ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಶ್ರೀಲಂಕಾದಿಂದ 2 ದಿನಗಳಲ್ಲಿ  ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಆದರೆ ಇದೀಗ ಮತ್ತೆ ವಿಳಂಬವಾಗಿದೆ.  ಲಕ್ಷದ್ವೀಪದಲ್ಲಿ  ಸುಳಿಗಳು ಇರುವುದರಿಂದ ಮುಂಗಾರು ಮಾರುತವನ್ನು  ದುರ್ಬಲಗೊಳಿಸಿದೆ ಎಂದು ಹವಾಮಾನ ವಿಶ್ಲೇಷಣೆ ತಿಳಿಸಿದೆ. ಈ ಎಲ್ಲಾ ಕಾರಣದಿಂದ ಜೂ.8 ಸುಮಾರಿಗೆ ಕೇರಳಕ್ಕೆ ಪ್ರವೇಶವಾಗಿ ನಂತರ 2-3  ದಿನಗಳಲ್ಲಿ  ಕರಾವಳಿ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ.

Advertisement

ಪ್ರತೀ ವರ್ಷ ಜೂ.5 ರ ಹೊತ್ತಿಗೆ ಮುಂಗಾರು ಮಾರುತ ಕೇರಳ ಪ್ರವೇಶವಾಗುತ್ತಿತ್ತು. ಅಪರೂಪ ಎಂಬಂತೆ ಈ ಬಾರಿ ವಿಳಂಬವಾಗಿದೆ. 1972 ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ವಿಳಂಬವಾಗಿದೆ. 1972 ರಲ್ಲಿ  ಜೂ.18 ಕ್ಕೆ ಮುಂಗಾರು ಕೇರಳವನ್ನು  ಪ್ರವೇಶ ಮಾಡಿತ್ತು. ಅದಕ್ಕೂ ಮೊದಲು 1918 ಹಾಗೂ 1955 ರಲ್ಲಿ  ಜೂ.11 ರಂದು ಮುಂಗಾರು ಪ್ರವೇಶವಾಗಿತ್ತು. ಉಳಿದೆಲ್ಲಾ ವರ್ಷ ಸಾಮಾನ್ಯವಾಗಿ ಜೂ.5 ರೊಳಗಾಗಿ ಮುಂಗಾರು ಮಾರುತ ಕೇರಳ ಪ್ರವೇಶ ಮಾಡುತ್ತಿತ್ತು.

ಈ ನಡುವೆ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ರಾಜ್ಯದ ಕೆಲವು ಕಡೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಅದರ ಬೆನ್ನಿಗೇ ನೈರುತ್ಯ ಮುಂಗಾರು ಪ್ರವೇಶವಾದರೆ ರಾಜ್ಯದಲ್ಲಿ ಮಳೆಗಾಲ ಆರಂಭ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ
January 31, 2025
10:08 PM
by: The Rural Mirror ಸುದ್ದಿಜಾಲ
ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ
January 31, 2025
10:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror