ಬೆಳ್ಳಾರೆ : ಪೆರುವಾಜೆ ಗ್ರಾಮದ ಮುಕ್ಕೂರು ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ನೀಡದೆ ಏಕಾಏಕಿಯಾಗಿ ಸ್ಥಳಾಂತರಿಸಿದ್ದು, ಇದನ್ನು ಪುನಃ ಮುಕ್ಕೂರಿನಲ್ಲಿ ಆರಂಭಿಸುವ ತನಕ ವಿರಮಿಸದೆ ಹೋರಾಟ ನಡೆಸಲು ಮುಕ್ಕೂರಿನಲ್ಲಿ ಮಂಗಳವಾರ ಸ್ಥಳಾಂತರ ವಿರೋಧಿಸಿ ನಡೆದ ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ, ಗ್ರಾಮಸ್ಥರ ಸಭೆಯಲ್ಲಿ ನಿರ್ಧರಿಸಲಾಯಿತು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, 55 ವರ್ಷಕ್ಕೂ ಅಧಿಕ ಕಾಲ ಮುಕ್ಕೂರಿನಲ್ಲಿದ್ದ ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ಕೊಡದೆ ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಇಲ್ಲಿನ ಗ್ರಾಮಸ್ಥರ ವಿರೋಧವಿದೆ. ಅಂಚೆ ಕಚೇರಿ ಪುನಾರರಂಭದ ತನಕ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ತಿರುಮಲೇಶ್ವರ ಭಟ್ ಕಾನಾವು, ಮುಕ್ಕೂರಿನಲ್ಲಿ ಇರುವ ಸೌಲಭ್ಯಗಳನ್ನು ಕಸಿದುಕೊಳ್ಳಲಾಗುತ್ತಿದೆ. ಹಿಂದೆ ಸೊಸೈಟಿ, ಈಗ ಅಂಚೆ ಕಚೇರಿ ಸ್ಥಳಾಂತರಿಸುವ ಮೂಲಕ ಊರನ್ನು ಸೌಲಭ್ಯ ರಹಿತವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಮುಕ್ಕೂರಿನಲ್ಲಿ ಅಂಚೆ ಕಚೇರಿ ಮರು ಸ್ಥಾಪಿಸಬೇಕು ಎಂಬ ನಮ್ಮ ಬೇಡಿಕೆ ಈಡೇರಲೆಬೇಕು ಎಂದು ಅವರು ಆಗ್ರಹಿಸಿದರು.
ಪೆರುವಾಜೆ ಗ್ರಾ.ಪಂ.ಸದಸ್ಯ, ಹೋರಾಟ ಸಮಿತಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ನಾನು ಈ ಭಾಗದ ಗ್ರಾ.ಪಂ.ಸದಸ್ಯನಾಗಿದ್ದು, ಅಂಚೆ ಕಚೇರಿಯನ್ನು ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ನನಗೆ ಯಾರು ಕೂಡ ಮಾಹಿತಿ ನೀಡಿಲ್ಲ. ಉದ್ದೇಶಪೂರ್ವಕವಾಗಿಯೇ ದಿಢೀರ್ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಪುತ್ತೂರು ಅಂಚೆ ಕಚೇರಿಗೆ ನಿಯೋಗದ ಮೂಲಕ ತೆರಳಿ ಮನವಿ ಮಾಡಲಾಗಿದೆ. ಸಂಸದರು ಕೂಡ ಮುಕ್ಕೂರಿನಲ್ಲಿ ಅಂಚೆ ಕಚೇರಿ ಮರು ಆರಂಬಿಸುವಂತೆ ಅ„ಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೀಘ್ರವಾಗಿ ಆರಂಭಿಸದಿದ್ದರೆ ಮುಂದೆ ಯಾವುದೇ ಹೋರಾಟಕ್ಕೆ ಸಿದ್ದ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ ಶೆಟ್ಟಿ ಕುಂಜಾಡಿ, ಒಗ್ಗಟ್ಟಿನ ಹೋರಾಟದ ಆವಶ್ಯಕತೆ ಇದೆ. ಇಂತಹ ಸಂದರ್ಭ ಬಂದಾಗ ಪ್ರತಿಯೊಬ್ಬರು ಸೇರಿ ಧ್ವನಿ ಎತ್ತಬೇಕು. ಇಲ್ಲಿ ಸೌಲಭ್ಯ ಉಳಿಸುವುದಕ್ಕೂ, ಸ್ಥಳಾಂತರಿಸುವುದಕ್ಕೂ ನಾವೇ ಜವಬ್ದಾರರು. ಅಂಚೆ ಕಚೇರಿ, ಸೊಸೈಟಿ, ಶಾಲೆ ಉಳಿಸುವಲ್ಲಿ ಗ್ರಾಮಸ್ಥರ ಪಾತ್ರ ಏನು ಎನ್ನುವ ಬಗ್ಗೆ ಅರ್ಥೈಸಿಕೊಂಡು ಸಹಕಾರ ನೀಡಬೇಕು. ಅಂಚೆ ಕಚೇರಿ ಮರಳಿ ಆರಂಭಿಸುವ ಹೋರಾಟಕ್ಕೆ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಜೂ.7 : ನಿಯೋಗ ತೆರಳಲು ನಿರ್ಧಾರ:
ಪುತ್ತೂರು ಅಂಚೆ ವಿಭಾಗದಲ್ಲಿ ಜೂ.7 ರಂದು ನಡೆಯಲಿರುವ ಅಂಚೆ ಅದಾಲತ್‍ನಲ್ಲಿ ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಿಯೋಗ ತೆರಳಿ ಮುಕ್ಕೂರಿನಲ್ಲಿ ಅಂಚೆ ಕಚೇರಿ ಪುನಾರರಂಭಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮುಂದಿನ ಹೋರಾಟಕ್ಕಾಗಿ ಸಮಿತಿ ರಚಿಸಲಾಯಿತು.
ಅರ್ಧ ಶತಮಾನಕ್ಕೂ ಅಧಿಕ ಕಾಲ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿದ್ದ ಅಂಚೆ ಕಚೇರಿಯನ್ನು ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸಿರುವುದಕ್ಕೆ ಎಲ್ಲರ ವಿರೋಧವಿದೆ. ಪೆರುವಾಜೆಯಲ್ಲಿ ಹೊಸ ಅಂಚೆ ಕಚೇರಿ ತೆರಯಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಮುಕ್ಕೂರಿನಿಂದ ಸ್ಥಳಾಂತಿರಿಸಿರುವುದು ಈ ಊರನ್ನು ಮೂಲ ಸೌಲಭ್ಯ ರಹಿತವನ್ನಾಗಿಸಬೇಕು ಎಂಬ ಷಡ್ಯಂತ್ರ ಎಂಬ ಅನುಮಾನ ಇದೆ ಸಭೆಯಲ್ಲಿ ಪಾಲ್ಗೊಂಡ ಹೋರಾಟ ಸಮಿತಿ ಪದಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ಕಾನಾವು, ಕಾರ್ಯದರ್ಶಿ ಸತ್ಯಪ್ರಸಾದ್ ಕಂಡಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ ರೈ ಕುಂಜಾಡಿ, ದಾಮೋದರ ಗೌಡ ಕಂಡಿಪ್ಪಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…