ಬೆಳ್ಳಾರೆ :ಭಗವಂತನ ಸ್ಮರಣೆಯಂದರೆ ತಾಯಿಯ ಸ್ಮರಣೆಯಂತೆ. ಹಾಗಾಗಿ ಶಾರದೆಯ ಮುಂದೆ ನಿಂತು ಪ್ರಾರ್ಥಿಸುವ ಸಂದರ್ಭ ತಾಯಿಯ ಬಳಿ ನಿವೇದನ ಮಾಡುವಂತಹ ಮನಸ್ಸು ನಮ್ಮದಾಗಿರಬೇಕು ಎಂದು ವಾಗ್ಮಿ, ಪುತ್ತೂರು ಅಂಬಿಕಾ ವಿದ್ಯಾಸಂಸ್ಥೆಯ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ 4 ನೇ ವರ್ಷದ ಶ್ರೀ ಶಾರದೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಧಾರ್ಮಿಕ ಅಂದರೆ ಧರ್ಮ ಕಾರ್ಯ ಎಂದರ್ಥ. ಧರ್ಮ ಕೆಲಸಕ್ಕಿಂತ ಶ್ರೇಷ್ಟ ಬೇರೊಂದಿಲ್ಲ ಎಂದ ಅವರು, ಸಂಸ್ಕಾರ, ಸಂಸ್ಕೃತಿಯನ್ನು ಎಳೆ ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರಂತಹ ಮಹಾತ್ಮರ ಚಿಂತನೆಗಳನ್ನು ತಿಳಿಸುವ ಕಾರ್ಯ ಆಗಬೇಕು. ಈ ಮೂಲಕ ಅವರನ್ನು ಧರ್ಮಮಾರ್ಗದಲ್ಲಿ ಮುನ್ನಡೆಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯೆ ರಾಜೀವಿ ರೈ ಪುಡ್ಕಜೆ ಮಾತನಾಡಿ, ಜಾತಿ, ಮತ, ಪಕ್ಷದ ಬೇಧವಿಲ್ಲದೆ ಸಂಘಟಿತರಾಗಿ ದೇವರ ಕಾರ್ಯ ಮಾಡಿದಾಗ ಅದರಿಂದ ಫಲ ಸಿಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಮುಕ್ಕೂರಿನಲ್ಲಿ ಎಲ್ಲರೂ ಸೇರಿ ಶಾರದೋತ್ಸವವನ್ನು ಆಚರಿಸುವ ಮೂಲಕ ಭಗವಂತನನ್ನು ಸ್ಮರಿಸುವ ಕಾರ್ಯ ನಡೆದಿದೆ ಎಂದರು.
ಮುಕ್ಕೂರು ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಉಪಾಧ್ಯಕ್ಷ ಪ್ರಸಾದ್ ಕುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆ ವಿತರಕ ಪೂವಪ್ಪ ಪೂಜಾರಿ ಮುಕ್ಕೂರು, ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಮುಕ್ಕೂರು ಶಾಲಾ ಎಸ್ ಡಿಎಂಸಿ ಉಪಾಧ್ಯಕ್ಷೆ ಪದ್ಮಾವತಿ ದೇವಿಮೂಲೆ ಶುಭಹಾರೈಸಿದರು. ಐತ್ತ ಪಾಟಾಜೆ ಉಪಸ್ಥಿತರಿದ್ದರು.
ಶಾರದೋತ್ಸವ ಸಮಿತಿಯ ನಾರಾಯಣ ಕೊಂಡೆಪ್ಪಾಡಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸುದೀಪ್ ಕೊಂಡಪ್ಪಾಡಿ ವಂದಿಸಿದರು. ಸಮಿತಿ ಕಾರ್ಯದರ್ಶಿ ಕಿರಣ್ ಚಾಮುಂಡಿಮೂಲೆ ಬಹುಮಾನ ಪಟ್ಟಿ ವಾಚಿಸಿದರು. ಸುಸ್ಮಿತಾ ಕೊಂಡೆಪ್ಪಾಡಿ ನಿರೂಪಿಸಿದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾರಾದೆಯ ಶೋಭಾಯಾತ್ರೆ
ಬೆಳಗ್ಗೆ ಶಾರದಾ ಪ್ರತಿಷ್ಟೆ, ಪೂಜೆ, ಗಣಹೋಮ, ಅಕ್ಷರಾಭ್ಯಾಸ, ಮಹಾಪೂಜೆ, ವಾಹನಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು-ಬೆಳಂದೂರು ಶ್ರೀ ವಿಷ್ಣುಪ್ರಿಯಾ ಭಜನ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಸಂಜೆ ಮುಕ್ಕೂರು ವಠಾರದಿಂದ ಶೋಭಾಯಾತ್ರೆ ಆರಂಭಗೊಂಡು ಗೌರಿ ಹೊಳೆಯಲ್ಲಿ ಜಲಸ್ಥಂಭನ ನಡೆಯಿತು
Advertisement
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…