ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಬೆಂಕಿ – ಸಂರಕ್ಷಣೆ ಮಾಹಿತಿ ಕಾರ್ಯಾಗಾರ

December 18, 2019
7:26 PM

ಪುತ್ತೂರು: ಪುತ್ತೂರಿನ ಹೆಸರಾಂತ ಜ್ಯುವೆಲ್ಲರಿಯಾದ ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಬೆಂಕಿ ಸಂರಕ್ಷಣೆ ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕತೆಯನ್ನು ನಡೆಸಲಾಯಿತು. Malsi Tech – Fire safety solutionನ ನವೀನ್ ಶೆಣೈಯವರು ಮಾಹಿತಿ ತಿಳಿಸಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗವನ್ನು ಒಟ್ಟು 3 ತಂಡಗಳನ್ನಾಗಿಸಿ ಎಲ್ಲರಿಗೂ ಇದರ ಮಾಹಿತಿ ಕೊಡಲಾಯಿತು.

Advertisement

ಬೆಂಕಿ ಅವಘಡದ ಸಾಧ್ಯತೆಗೆ ಕಾರಣಗಳೇನು, ಅದು ದೊಡ್ಡ ಮಟ್ಟಕ್ಕೆ ಹೋಗದಂತೆ ಏನೆಲ್ಲಾ ಮಾಡಬಹುದು, ಯಾವ ಮಾದರಿಯ ಬೆಂಕಿಗೆ ಯಾವ ಎಸ್ಟಿಂಗ್ವಿಷರ್ ಬಳಸಬೇಕು, ಬಳಸುವ ಕ್ರಮ, ಬೆಂಕಿ ಅವಘಡವಾದಲ್ಲಿ ಯಾವ ರೀತಿ ರೋಲ್ ಕಾಲ್ ಮಾಡಬೇಕು ಮತ್ತು ಎಸ್ಟಿಂಗ್ವಿಷರ್ ಬಳಕೆಯ ಪ್ರಾತ್ಯಕ್ಷಿಕತೆಯನ್ನು ತಿಳಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಅವರು ಅವಘಡಗಳು ಹೇಳಿ ಬರುವುದಿಲ್ಲ. ಅವಘಡವಾದಲ್ಲಿ ನಾವು ಯಾವ ರೀತಿ ಅದನ್ನು ಎದುರಿಸಬೇಕು ಎಂಬುದನ್ನು ತಿಳಿದುಕೊಂಡಿರುವುದು ಅತ್ಯಗತ್ಯ ಎಂದರು.

ಸಂಸ್ಥೆಯ ಚೇರ್‍ಮೇನ್‍ರಾದ ಕೇಶವ ಪ್ರಸಾದ್ ಅವರು ಮಾತನಾಡಿ ಅವಘಡವಾದಲ್ಲಿ ನಾವು ಮಾನಸಿಕವಾಗಿ ಕುಗ್ಗದೆ, ನಮ್ಮನ್ನು ನಾವು ಹೇಗೆ ಸಂರಕ್ಷಿಸುವುದು, ನಮ್ಮೊಂದಿಗಿರುವವರನ್ನು ಹೇಗೆ ರಕ್ಷಿಸುವುದು ಮತ್ತು ಅದನ್ನು ಮಾಡಬೇಕಾದಲ್ಲಿ ನಮಗೆ ಬೇಕಾಗುವ ಜ್ಞಾನವನ್ನು ಈ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು. ಸಂಸ್ಥೆಯ ಸುದರ್ಶನ್ ಎಮ್ ಸ್ವಾಗತಿಸಿದರು, ಲೋಕೇಶ್ ಎಮ್.ಎಸ್ ನಿರೂಪಿಸಿದರು ಹಾಗೂ ಶ್ಯಾಮ ಮೂರ್ತಿಯವರು ವಂದಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group