ಪುತ್ತೂರು: ಪುತ್ತೂರಿನ ಹೆಸರಾಂತ ಜ್ಯುವೆಲ್ಲರಿಯಾದ ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಬೆಂಕಿ ಸಂರಕ್ಷಣೆ ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕತೆಯನ್ನು ನಡೆಸಲಾಯಿತು. Malsi Tech – Fire safety solutionನ ನವೀನ್ ಶೆಣೈಯವರು ಮಾಹಿತಿ ತಿಳಿಸಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗವನ್ನು ಒಟ್ಟು 3 ತಂಡಗಳನ್ನಾಗಿಸಿ ಎಲ್ಲರಿಗೂ ಇದರ ಮಾಹಿತಿ ಕೊಡಲಾಯಿತು.
ಬೆಂಕಿ ಅವಘಡದ ಸಾಧ್ಯತೆಗೆ ಕಾರಣಗಳೇನು, ಅದು ದೊಡ್ಡ ಮಟ್ಟಕ್ಕೆ ಹೋಗದಂತೆ ಏನೆಲ್ಲಾ ಮಾಡಬಹುದು, ಯಾವ ಮಾದರಿಯ ಬೆಂಕಿಗೆ ಯಾವ ಎಸ್ಟಿಂಗ್ವಿಷರ್ ಬಳಸಬೇಕು, ಬಳಸುವ ಕ್ರಮ, ಬೆಂಕಿ ಅವಘಡವಾದಲ್ಲಿ ಯಾವ ರೀತಿ ರೋಲ್ ಕಾಲ್ ಮಾಡಬೇಕು ಮತ್ತು ಎಸ್ಟಿಂಗ್ವಿಷರ್ ಬಳಕೆಯ ಪ್ರಾತ್ಯಕ್ಷಿಕತೆಯನ್ನು ತಿಳಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಅವರು ಅವಘಡಗಳು ಹೇಳಿ ಬರುವುದಿಲ್ಲ. ಅವಘಡವಾದಲ್ಲಿ ನಾವು ಯಾವ ರೀತಿ ಅದನ್ನು ಎದುರಿಸಬೇಕು ಎಂಬುದನ್ನು ತಿಳಿದುಕೊಂಡಿರುವುದು ಅತ್ಯಗತ್ಯ ಎಂದರು.
ಸಂಸ್ಥೆಯ ಚೇರ್‍ಮೇನ್‍ರಾದ ಕೇಶವ ಪ್ರಸಾದ್ ಅವರು ಮಾತನಾಡಿ ಅವಘಡವಾದಲ್ಲಿ ನಾವು ಮಾನಸಿಕವಾಗಿ ಕುಗ್ಗದೆ, ನಮ್ಮನ್ನು ನಾವು ಹೇಗೆ ಸಂರಕ್ಷಿಸುವುದು, ನಮ್ಮೊಂದಿಗಿರುವವರನ್ನು ಹೇಗೆ ರಕ್ಷಿಸುವುದು ಮತ್ತು ಅದನ್ನು ಮಾಡಬೇಕಾದಲ್ಲಿ ನಮಗೆ ಬೇಕಾಗುವ ಜ್ಞಾನವನ್ನು ಈ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು. ಸಂಸ್ಥೆಯ ಸುದರ್ಶನ್ ಎಮ್ ಸ್ವಾಗತಿಸಿದರು, ಲೋಕೇಶ್ ಎಮ್.ಎಸ್ ನಿರೂಪಿಸಿದರು ಹಾಗೂ ಶ್ಯಾಮ ಮೂರ್ತಿಯವರು ವಂದಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…