ಮುಸ್ಸಂಜೆಯ ಬಳಿಕ ಆಗಸದಲ್ಲಿ ಕಂಗೊಳಿಸಲಿದೆ “ನಿಯೋವೈಸ್ ಧೂಮಕೇತು”

July 17, 2020
10:01 AM

ಬರಹ : ಪಿ.ಜಿ.ಎಸ್.ಎನ್.ಪ್ರಸಾದ್

Advertisement

ಒಂದೆಡೆ ಕೋವಿಡ್ 19 ತನ್ನ ಅಟ್ಟಹಾಸವನ್ನು ಮೆರೆಯುತ್ತಿರಬೇಕಾದರೆ, ಇನ್ನೊಂದೆಡೆ ನಿಯೋವೈಸ್ ಧೂಮಕೇತು ಆಗಸದಲ್ಲಿ ತನ್ನ ಶೋಭೆಯನ್ನು ಮೆರೆಯಲಿದೆ. ಈ ಅಚ್ಚರಿಯ ವಿದ್ಯಮಾನ ನಮ್ಮನ್ನು ಆಕಾಶದತ್ತ ಮುಖ ಮಾಡುವಂತೆ ಮಾಡಿದೆ.

ಅದೆಷ್ಟೋ ಆಕಾಶಕಾಯಗಳು ನಮ್ಮ ಆಕಾಶಗಂಗೆ(Milkyway) ಯಲ್ಲಿ  ನಕ್ಷತ್ರಗಳು, ಬೆಳಕನ್ನೂ ನುಂಗಬಲ್ಲ ಕಪ್ಪುರಂಧ್ರಗಳು, ಸೌರವ್ಯೂಹಗಳು, ಗ್ರಹಗಳು, ಕ್ಷುದ್ರ ಗ್ರಹಗಳು, ಧೂಮಕೇತುಗಳು. ಇನ್ನು ಹುಲು ಮಾನವನ ಗ್ರಹಿಕೆಗೆ ನಿಲುಕದ್ದು ಅನೇಕ. ಮಾನವ ಈ ಅಗಾಧ ಬ್ರಹ್ಮಾಂಡದಲ್ಲಿ ಒಬ್ಬಂಟಿಯೋ ,ಬೇರೆ ಗ್ರಹಗಳಲ್ಲಿ ಜೀವಿಗಳಿದ್ದಾರೋ ಆದೂ ಗೊತ್ತಿಲ್ಲ. ಸಂಶೋಧನೆಗಳು ನಡೆಯುತ್ತಲೆ ಇವೆ. ಈ ಮಧ್ಯೆ ಆಗಾಗ ನಮ್ಮ ಭೂಮಿಯ ಸಮೀಪ ಬಂದು ಕಣ್ಮರೆಯಾಗುವ ಆಕಾಶಕಾಯಗಳು ಅಚ್ಚರಿಯನ್ನು ಉಂಟುಮಾಡುತ್ತಲೇ ಇರುತ್ತವೆ. ಅವುಗಳಲ್ಲಿ ಪ್ರಮುಖವಾದವು ಧೂಮಕೇತುಗಳು.

ಅಷ್ಟಕ್ಕೂ ಧೂಮಕೇತುಗಳು ಅಂದರೇನು ? : ಸೌರಮಂಡಲವನ್ನು ತನ್ನ ಧೀರ್ಘಪಥದಲ್ಲಿ ಸುತ್ತು ಹಾಕುತ್ತಿರುವ ಘನೀಕೃತ ಅನಿಲ,ಧೂಳಿನಿಂದ ಕೂಡಿದ ಕೆಲವು ನೂರು ಕಿಲೋಮೀಟರ್ ವಿಸ್ತೀರ್ಣವಿರುವ ಆಕಾಶ ಹಿಮಕಾಯ, ತನ್ನ ಪಥದಲ್ಲಿ ಸೂರ್ಯನ ಸಮೀಪ ಬಂದಾಗ ಸೂರ್ಯನ ಶಾಖಕ್ಕೆ ಅದರಲ್ಲಿರುವ ಸಾಂದ್ರೀಕೃತ ಅನಿಲ,ಧೂಳು ಕರಗಿ ವಿರುದ್ಧ ದಿಕ್ಕಿನಲ್ಲಿ ಮಿಲಿಯಗಟ್ಟಲೆ ಕಿಲೋಮೀಟರ್ ದೂರಕ್ಕೆ ಬಾಲದ ರೂಪದಲ್ಲಿ ಹೊರಹೊಮ್ಮುತ್ತದೆ.ಇದನ್ನೇ ಧೂಮಕೇತು ಅನ್ನುತ್ತಾರೆ. ಈಗಿನ ಅಂದಾಜಿನ ಪ್ರಕಾರ 3650 ರಷ್ಟು ಧೂಮಕೇತುಗಳು ಸೌರಮಂಡಲದಲ್ಲಿವೆ. ತನ್ನ ನಿಗದಿತ ಕಕ್ಷೆಯಲ್ಲಿ ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಪರಿಭ್ರಮಿಸುವ ಅತೀ ದೊಡ್ಡ ಎಂದೇ ಗುರುತಿಸಲಾಗಿರುವ ಹ್ಯಾಲಿ ಧೂಮಕೇತುವನ್ನು ಇಲ್ಲಿ ಹೆಸರಿಸಬಹುದು. 1986 ರಲ್ಲಿ ಭೇಟಿ ನೀಡಿದ್ದ ಹ್ಯಾಲಿ ಧೂಮಕೇತು ಮತ್ತೆ 2061ರಲ್ಲಿ ಭೂಮಿಯ ಸಮೀಪ ಹಾದು ಹೋಗಲಿದೆ.ಅದೂ ಜುಲೈ ತಿಂಗಳಲ್ಲೇ.

ಏನಿದು ನಿಯೋವೈಸ್ ಧೂಮಕೇತು? : ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA ದ Near Earth Object Wide – Field Infrared Survey Explorer ( Neowise ) ಈ ಹಿಮಕಾಯವನ್ನು ಪ್ರಥಮ ಬಾರಿಗೆ ಕಳೆದ ಮಾರ್ಚ್ ತಿಂಗಳಲ್ಲೇ ಗುರುತಿಸಿತ್ತು. ಅದಕ್ಕಾಗಿ ಈ ಧೂಮಕೇತುವನ್ನು C/2020F3 “ನಿಯೋವೈಸ್” ಅಂತ ಕರೆಯಲಾಗುತ್ತಿದೆ. ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ವೀಕ್ಷಿಸುವ ಅವಕಾಶ ಸಿಗುವ, ಸುದೀರ್ಘ ಖಗೋಳ ಪಥವನ್ನು ಹೊಂದಿರುವ ಈ ಧೂಮಕೇತು ಜುಲೈ 3 ರಂದು ಸೂರ್ಯನ ಅತ್ಯಂತ ಸಮೀಪ ಬಂದಿದ್ದು,ಇದೀಗ ತನ್ನ ನಿರ್ಗಮನ ಪಥದಲ್ಲಿದೆ. ಭೂಕಕ್ಷೆಯ ಹೊರಭಾಗದಲ್ಲಿ ಸಾಗುತ್ತಿದ್ದು, ಆಗಸ್ಟ್ ಮಧ್ಯದ ವೇಳೆಗೆ ಸೌರಮಂಡಲದಲ್ಲಿ ನಮ್ಮಿಂದ ಕಣ್ಮರೆಯಾಗಲಿದೆ.

Advertisement

ಏನಿದರ ವಿಶೇಷತೆ…? : ಇದು ಈ ಶತಮಾನದಲ್ಲಿ ಈವರೆಗೆ ಗುರುತಿಸಲ್ಪಟ್ಟಿರುವ ದೊಡ್ಡ ಧೂಮಕೇತು. SWAN, ATLAS ಬಳಿಕ ಈ ವರ್ಷ ಗೋಚರಿಸುತ್ತಿರುವ ಮೂರನೇ ಧೂಮಕೇತುವೂ ಹೌದು. ಸೂರ್ಯನ ಸಮೀಪದ ಗ್ರಹವಾದ ಬುಧನ ಕಕ್ಷೆಯನ್ನು ಪ್ರವೇಶಿಸಿದಾಗ, ಸೂರ್ಯನ ಅಗಾಧ ಶಾಖಕ್ಕೆ ಇದರ ಸಾಂದ್ರೀಕೃತ ಹೊರ ಹಿಮಕವಚದಿಂದ ಹೊರಹೊಮ್ಮಿದ ಅನಿಲ ಧೂಳುಗಳ ಅವಶೇಷ ಮಿಲಿಯಗಟ್ಟಲೆ ಮೈಲುಗಳ ಉದ್ದದ ಬಾಲವನ್ನು ಸೃಷ್ಟಿಸಿ, ಖಗೋಳ ವೀಕ್ಷಕರ ಪಾಲಿಗೆ ಸೋಜಿಗವನ್ನು ಉಂಟು ಮಾಡಿದೆ. ಈ ಹಿಮಕಾಯ ದೂರ ಸಾಗುವ ಮೊದಲೇ ಇದರ ವೀಕ್ಷಣೆಗೆ ಖಗೋಳಾಸಕ್ತರು ತುದಿಗಾಲಲ್ಲಿ ನಿಂತಿದ್ದಾರೆ.

ಎಲ್ಲಿ, ಹೇಗೆ ಇದರ ವೀಕ್ಷಣೆ ?: ಈಗಾಗಲೇ ಅನೇಕ ದೇಶಗಳಲ್ಲಿ ಇದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ ಖಗೋಳಾಸಕ್ತರು. ಸೂರ್ಯಾಸ್ತದ ನಂತರ ಮುಸ್ಸಂಜೆಯ ಆಗಸದಲ್ಲಿ ಇದು ಕಾಣಲಾರಂಭಿಸಿದೆ. ಬರಿಗಣ್ಣಿಗೂ ಗೋಚರಿಸಲಿದೆ. ಭಾರತದಲ್ಲಿ ಎತ್ತರದ ಪ್ರದೇಶಕ್ಕೆ ಹೋದರೆ ವಾಯುವ್ಯ ಭಾಗದಲ್ಲಿ ಬಾನಂಚಿನ 20 ಡಿಗ್ರಿ ಮೇಲ್ಭಾಗದಲ್ಲಿ ಗೋಚರಿಸಲು ಆರಂಭಗೊಂಡು ದಿನಕಳೆದಂತೆ ಇನ್ನಷ್ಟು ಎತ್ತರದಲ್ಲಿ 20 ನಿಮಿಷಕ್ಕೂ ಅಧಿಕ ಸಮಯ ಶೋಭಾಯಮಾನವಾಗಿರಲಿದೆ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು. ಜುಲೈ 30 ರ ವೇಳೆಗೆ ಸಪ್ತರ್ಷಿ ಮಂಡಲದ ಸಮೀಪ, ಬಾನಂಚಿನ 40 ಡಿಗ್ರಿಗಳಷ್ಟು ಮೇಲ್ಭಾಗದಲ್ಲಿ ಒಂದು ಗಂಟೆಗಳಷ್ಟು ಕಾಲ ವಿರಾಜಮಾನವಾಗಿ ಕಂಗೊಳಿಸಲಿದ್ದು ನಂತರ ನಿಧಾನವಾಗಿ ದೂರಸರಿಯಲಿದೆ ಅನ್ನುತ್ತಾರೆ ದೇಶದ ವಿಜ್ಞಾನಿಗಳು. ವರುಣ ಅವಕಾಶ ಕೊಟ್ಟರೆ ಬರಿಗಣ್ಣಿನಲ್ಲೂ, ಇನ್ನಷ್ಟು ಅಂದವನ್ನು ಆಸ್ವಾದಿಸಬೇಕಾದರೆ ದೂರದರ್ಶಕದಲ್ಲಿಯೂ ವೀಕ್ಷಿಸಬಹುದು.

ಈ ಬಾರಿ ನೋಡುವ ಅವಕಾಶ ತಪ್ಪಿದರೆ ನಿರಾಶರಾಗದಿರಿ. ಈ ಧೂಮಕೇತು 6800 ವರ್ಷಗಳ ಬಳಿಕ ಕಾಣಸಿಗಲಿದೆ…ಆಗ ನೋಡೋಣ….!

# ಪಿ.ಜಿ.ಎಸ್.ಎನ್.ಪ್ರಸಾದ್

ಪಿ.ಜಿ.ಎಸ್.ಎನ್.ಪ್ರಸಾದ್

 

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ
July 13, 2025
9:37 PM
by: The Rural Mirror ಸುದ್ದಿಜಾಲ
ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group