ಸುಳ್ಯ: ಒಂದೊಂದೇ ಮೆಟ್ಟಿಲು ಏರಿ ಕಟ್ಟಡದ ಮೂರನೇ ಮಹಡಿ ತಲುಪಿದ ಶ್ವಾನವೊಂದು ಹಿಂತಿರುಗಿ ಬರಲಾಗದೆ ಪೇಚಿಗೆ ಸಿಲುಕಿ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿ ಶ್ವಾನವನ್ನು ಕೆಳಗಿಳಿಸಿದ ಘಟನೆ ಸುಳ್ಯ ನಗರದ ಕುರಜಿಭಾಗ್ ನಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನದ ವೇಳೆಗೆ ಶ್ವಾನವು ಕಟ್ಟಡವೊಂದರ ಮೂರನೇ ಮಹಡಿಗೆ ಏರಿದೆ. ಆದರೆ ಹೋದ ದಾರಿಯಲ್ಲಿ ಹಿಂತಿರುಗಿ ಬರಲು ಆಗದೆ ಅಲ್ಲೇ ಸಿಲುಕಿಕೊಂಡಿತು. ಕಟ್ಟಡದ ಕೋಣೆಗಳಲ್ಲಿ ವಾಸವಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶ್ವಾನವನ್ನು ಓಡಿಸಲು ಮತ್ತು ಕೆಳಗಿಳಿಸಲು ಎಲ್ಲಾ ವಿದ್ಯೆಯನ್ನು ಪ್ರಯೋಗಿಸಿದರೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಶ್ವಾನವು ಓಡಿ ತಪ್ಪಿಸಲು ಪ್ರಯತ್ನಪಟ್ಟಾಗ ಪಲ್ಟಿ ಹೊಡೆದು ಎರಡನೇ ಮಹಡಿಯ ಗೋಡೆಯ ಬದಿಯಲ್ಲಿ ಸಿಲುಕಿಕೊಂಡಿತು. ಕಟ್ಟದಲ್ಲಿದ್ದ ವಿದ್ಯಾರ್ಥಿಗಳು ಆಹಾರ ಹಾಕಿದರು ಅದನ್ನು ತಿರಸ್ಕರಿಸಿದ ಶ್ವಾನವು ಭಯಗೊಂಡು ಜೋರಾಗಿ ಬೊಗಳುತ್ತಾ ಕೆಲವೊಮ್ಮೆ ಕಿರುಚಿ ನಿಂತಲ್ಲೇ ತಿರುಗುತ್ತಿತ್ತು. ಯಾರನ್ನೂ ಹತ್ತಿರ ಹೋಗಲೂ ಬಿಡುತ್ತಿರಲಿಲ್ಲ. ಬ್ರೆಡ್, ಮೀನು, ಅನ್ನ ಹಾಕಿ ನಾಯಿಯನ್ನು ಹೊರಗೆ ಸೆಳೆಯುವ ಪ್ರಯತ್ನ ನಡೆಸಿದರೂ ಅದು ಕೂಡ ವಿಫಲವಾಯಿತು. ಒಟ್ಟಿನಲ್ಲಿ ಮೂರು ನಾಲ್ಕು ಗಂಟೆಯಿಂದ ಶ್ವಾನ ಕಟ್ಟಡದಲ್ಲಿದ್ದವರಿಗೆ ತಲೆ ನೋವು ಸೃಷ್ಠಿಸಿತು. ಶ್ವಾನದ ಮೇಲೆ ಅಲ್ಲಿದ್ದವರಿಗೆ ಪ್ರೀತಿ ಹೆಚ್ಚಾಯಿತು. ಏನು ಮಾಡಬಹುದು ಎಂಬುದರ ಬಗ್ಗೆ ಗಹನವಾದ ಚರ್ಚೆ ನಡೆದು ಕೊನೆಗೆ ಅಗ್ನಿಶಾಮಕದವರಿಗೆ ಸುದ್ದಿ ಮುಟ್ಟಿಸಲಾಯಿತು. ಅಗ್ನಿಶಾಮಕದ ವಾಹನವೇ ಬಂದು ಕಾರ್ಯಾಚರಣೆ ನಡೆಸಿ ಶ್ವಾನವನ್ನು ಕೆಳಗಿಸಲಾಯಿತು. ಕೋಲಿನ ಸಹಾಯದಿಂದ ಶ್ವಾನದ ಕುತ್ತಿಗೆಗೆ ಬಳ್ಳಿ ಹಾಕಿ ಕೆಳಗೆ ಇಳಿಸಲಾಯಿತು. ಮೇಲಿಂದ ಕೆಳಗೆ ಇಳಿದ ಕೂಡಲೇ ಬದುಕಿದೆ ಬಡ ಜೀವ ಎಂದು ಶ್ಚಾನ ಓಟ ಕಿತ್ತಿತ್ತು. ನಾಯಿಯ ನಾಗಲೋಟ ನೋಡಿದಾಗ ನೆರೆದವರಲ್ಲಿ ನಗು ತರಿಸಿತು...!
ಅಲ್ಲಿನ ಜನರ ಶ್ವಾನ ಪ್ರೀತಿ ಮೆಚ್ಚುಗೆಗೆ ಪಾತ್ರವಾಯಿತು. ಮನುಷ್ಯ ಮಾತ್ರವಲ್ಲ ಪ್ರಾಣಿಯೂ ಈ ನೆಲದಲ್ಲಿ ಬದುಕುಬೇಕು. ಮನುಷ್ಯ ಕಾಲೆಳೆದರೆ, ಮತ್ಸರ ಕಾರಿದರೆ , ವಿಶ್ವಾಸಾರ್ಹತೆಯ ನಾಯಿ ಎಲ್ಲರಿಗೂ ಯಾವಾಗಲೂ ಪ್ರೀತಿಯೇ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…