ಪಂಜ: ಪಂಜ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್ ಹಾಗೂ ಗುತ್ತಿಗಾರು ಮತ್ತು ಕಡಬ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಪಂಜದಲ್ಲಿ ಮೇ.6 ರಿಂದ 10 ರವರೆಗೆ ಅಡಿಕೆ ಮರ ಏರುವ ಕೌಶಲ ತರಬೇತಿ ಶಿಬಿರ ನಡೆಯಲಿದೆ.
Advertisement
ಈ ಶಿಬಿರಕ್ಕೆ ಹೆಸರು ನೋಂದಾಯಿಸಿಸಲು ಕೊನೆಯ 3 ದಿನಗಳ ಕಾಲ ಅವಕಾಶ ಇದೆ. 18ರಿಂದ 40 ವರುಷದ ಒಳಗಿನ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ. ಅಡಿಕೆ ಮರ ಏರುವ ಕೌಶಲ್ಯ ತರಬೇತಿ ಶಿಬಿರ ವಿವಿಧ ಪ್ರೋತ್ಸಾಹ ಸೌಲಭ್ಯ ಗಳೊಂದಿಗೆ ಮೇ 6 ರಿಂದ10 ರ ವರೆಗೆ ಸಿ ಎ ಬ್ಯಾಂಕ್ ಪಂಜದಲ್ಲಿ ನಡೆಯುತ್ತದೆ.
Advertisement
ಈ ಹಿಂದೆ ಕ್ಯಾಂಪ್ಕೋ ವತಿಯಿಂದ ವಿಟ್ಲ ಸಿ ಪಿ ಸಿ ಆರ್ ಐ ವಠಾರದಲ್ಲಿ ಎರಡು ಬಾರಿ ಯಶಸ್ವಿಯಾಗಿ ನಡೆದಿದೆ. ಆ ಬಳಿಕ ಪೆರ್ಲ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಪೆರ್ಲದಲ್ಲಿ ತರಬೇತಿ ಶಿಬಿರ ಯಶಸ್ವಿಯಾಗಿ ನಡೆದಿದೆ. ಇದೀಗ ಪಂಜದಲ್ಲಿ ಶಿಬಿರ ನಡೆಯಲಿದ್ದು ಆಸಕ್ತರನ್ನು ಭಾಗವಹಿಸಲು ಪ್ರೇರೇಪಿಸಿ ಕಳುಹಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ 94489 31106
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement