ಮಡಿಕೇರಿ: ಕರ್ನಾಟಕದ ಗ್ರಾಮೀಣ ಪ್ರದೇಶಗಳ ಹಾಗೂ ಒಳಭಾಗಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವತನ್ನ ಬದ್ಧತೆಯ ಭಾಗವಾಗಿ, ಮೈಸೂರು ವಾರಿಯರ್ಸ್‍ನ ಮಾಲೀಕರಾಗಿರುವ ಎನ್‍ಆರ್ ಸಮೂಹ, ಕ್ರಿಕೆಟ್ ಪ್ರತಿಭಾನ್ವೇಷಣೆಯ ಆರನೇ ಆವೃತ್ತಿಯನ್ನು ಆಯೋಜಿಸಿದೆ. ಜುಲೈ 17 ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಮತ್ತು ಜುಲೈ20 ರಂದು ಮೈಸೂರಿನ ಎಸ್‍ಡಿಎನ್‍ಆರ್ ಮೈದಾನದಲ್ಲಿ ಪ್ರತಿಭಾನ್ವೇಷಣೆ ನಡೆಯಲಿದೆ. ಕರ್ನಾಟಕದ ಯಾವುದೇ ಭಾಗದ ಯುವ, ಪ್ರತಿಭಾವಂತ ಕ್ರಿಕೆಟ್ ಆಟಗಾರರು ಭಾಗವಹಿಸಬಹುದು. ಇಲ್ಲಿ ತಮ್ಮಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್‍ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಪ್ರತಿಭಾ ಅನ್ವೇಷಣೆ ಮುಖ್ಯವಾಗಿ ಕರ್ನಾಟಕದ ಕೆಎಸ್‍ಸಿಎ ನೋಂದಾಯಿತ ಕ್ಲಬ್‍ಗಳ ಕೆಎಸ್‍ಸಿಎ ನೋಂದಾಯಿತ ಸದಸ್ಯರಿಗಾಗಿ ಆಯೋಜಿಸಲಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ಅನೇಕ ಪ್ರತಿಭಾವಂತ ಆಟಗಾರರು ಇದ್ದಾರೆ. ಯುವ ಪ್ರತಿಭಾವಂತ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಜೊತೆಗೆಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ ಪೋಷಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಸ್ಥಳ: ಮೈಸೂರನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಬರುವ ಆಟಗಾರರಿಗೆ
ಸ್ಥಳ: ಬೆಂಗಳೂರು
ದಿನಾಂಕ: ಜುಲೈ 17, 2019
ವಿಳಾಸ ಜಸ್ಟ್ ಕ್ರಿಕೆಟ್‍ಅಕಾಡೆಮಿ
ನಂ. 1/1ಬಿ, ಸಿಂಗನಾಯಕನಹಳ್ಳಿ
ದೊಡ್ಡಬಳ್ಳಾಪುರ ರಸ್ತೆ,
ನಿತ್ಯೋತ್ಸವಕಲ್ಯಾಣ ಮಂಟಪದ ಹಿಂದೆ,
ಯಲಹಂಕ ಬೆಂಗಳೂರು– 560064
ಸಮಯ ಬೆಳಿಗ್ಗೆ 8.00 ಗಂಟೆಯ ನಂತರ
ಸಂಪರ್ಕ ಮಧುಸೂದನ: +91 9986024717
ಸೋಮಶೇಖರ: +91 9900545191
ಸ್ಥಳ: ಮೈಸೂರು ಭಾಗದ ಆಟಗಾರರಿಗೆ
ಸ್ಥಳ : ಮೈಸೂರು
ದಿನಾಂಕ : ಜುಲೈ 20, 2019
ವಿಳಾಸ ಎಸ್‍ಡಿಎನ್‍ಆರ್ ಮೈದಾನ
ಗಂಗೋತ್ರಿಗ್ಲೇಡ್ಸ್, ಅಕಾಡೆಮಿ ನೆಟ್ಸ್
ಮೈಸೂರು ವಿಶ್ವವಿದ್ಯಾಲಯ ಮೈಸೂರು
ಸಮಯ ಬೆಳಿಗ್ಗೆ 8.00 ನಂತರ
ಸಂಪರ್ಕ ಮಧುಸೂಧನ: +91 9986024717
ಸೋಮಶೇಖರ: +91 9900545191
ಹೆಚ್ಚಿನ ಮಾಹಿತಿಗೆ ಮೇಲಿನ ಸಂಖ್ಯೆಯನ್ನು ಸಂಪರ್ಕ ಮಾಡಬಹುದು.