ಸಂಪಾಜೆ: ಮೊಣ್ಣಂಗೇರಿ ಬಳಿ ಸಾಮಾನ್ಯವಾಗಿ ಬರೆ ಜರಿದಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮೊಣ್ಣಂಗೇರಿ ಒಳರಸ್ತೆಯಲ್ಲಿ ಬರೆ ಜರಿದಿತ್ತು. ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ತಪ್ಪು ಸಂದೇಶ ಈ ಮೂಲಕ ಹೋಗದಂತೆ ಮನವಿ ಮಾಡಲಾಗಿದೆ. ಜನರನ್ನು ಭಯಗೊಳಿಸುವ ಅಥವಾ ತಪ್ಪು ಮಾಹಿತಿ ಹರಡುವ ಉದ್ದೇಶವೂ ಇಲ್ಲ. ಆದರೆ ನಮ್ಮ ನ್ಯೂಸ್ ಲಿಂಕ್ ಉಪಯೋಗಿಸಿ ವಾಸ್ತವನ್ನು ತಿರುಚಿ ತಪ್ಪು ಸಂದೇಶ ರವಾನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸುಳ್ಯನ್ಯೂಸ್.ಕಾಂ ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel