Advertisement
MIRROR FOCUS

ಮೊದಲು ಕಸ ಎಸೆಯುವ ಗಬ್ಬು ನಾರುವ ಸ್ಥಳ…….. ಇನ್ನು ಮುಂದೆ ನೆರಳಿನ ಜೊತೆ ಹಣ್ಣು ನೀಡುವ ತಾಣ…….

Share

 ಸಮಾಜಮುಖಿಯಾಗಿ ಯೋಚಿಸಿದರೆ, ಜನಪ್ರತಿನಿಧಿಗಳು ಸಹಕಾರ ನೀಡಿದರೆ  ಹೇಗೆ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ.ಕುರಂಜಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಬಿಸಿಎಂ ಹಾಸ್ಟೆಲ್ ಮುಂದುಗಡೆಯಲ್ಲಿ ಕಸದ ರಾಶಿ. ಎಷ್ಟೇ ಪ್ರಯತ್ನ ಮಾಡಿದರೂ ಕಸ ಕಡಿಮೆಯಾಗಲಿಲ್ಲ. ಈ ಸಂದರ್ಭದಲ್ಲಿ ಯೋಚನೆ ಬಂದದ್ದು ಗಿಡ ನೆಡುವ ಐಡಿಯಾ. ಈ ಕುರಿತು ನಮ್ಮ ಬೆಳಕು..

Advertisement
Advertisement
Advertisement
Advertisement

 

Advertisement

ಒಂದು ತಿಂಗಳ ಹಿಂದೆ ಕೋರ್ಟ್ ಬದಿಯಿಂದ ಕುರಂಜಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಬಿಸಿಎಂ ಹಾಸ್ಟೆಲ್ ಮುಂದುಗಡೆಯಲ್ಲಿ ನಡೆಯುವುದೆಂದರೆ ಪಾದಚಾರಿಗಳಿಗೆ ಸಂಕಟ. ರಸ್ತೆಯ ಪಕ್ಕದಲ್ಲಿ ಕಸದ ರಾಶಿ. ಈ ಪರಿಸರದವರಲ್ಲದೆ ನಗರದ ಎಲ್ಲೆಡೆಯವರಿಗೆ, ಹೋಟೆಲ್ ನವರಿಗೆ ಇದು ಡಂಪಿಂಗ್ ಯಾರ್ಡ್. ಹಲವು ಸಮಯದಿಂದ ಈ ಸಮಸ್ಯೆ ಜೀವಂತವಾಗಿತ್ತು.
ನೂತನವಾಗಿ ಆಯ್ಕೆಯಾದ ಸ್ಥಳೀಯ ನಗರ ಪಂಚಾಯತ್ ಸದಸ್ಯ ವಿನಯ್ ಕುಮಾರ್ ಕಂದಡ್ಕ ಇದಕ್ಕೊಂದು ಪರಿಹಾರ ಕಾಣಬಯಸಿದರು. ಚರಂಡಿ ರಿಪೇರಿಯ ಗುತ್ತಿಗೆದಾರರಿಂದ ಎಲ್ಲ ಕಸವನ್ನು ತೆಗೆಸಿದರು. ಬೋರ್ಡ್ ಅಳವಡಿಸಿದರು. ಅಕ್ಕಪಕ್ಕದ ವ್ಯಾಪಾರಸ್ಥರಲ್ಲಿ ಕಸ ಹಾಕದಂತೆ ವಿನಂತಿಸಿದರು ಕಸ ಹಾಕುವುದು ಕಮ್ಮಿಯಾದರೂ ಸಂಪೂರ್ಣ ನಿಲ್ಲಲಿಲ್ಲ. ಸ್ವಚ್ಛ ಸುಳ್ಯ ತಂಡ ಮತ್ತು ನಗರ ಪಂಚಾಯತ್ ಸಹಕಾರದಿಂದ ಸಿಸಿ ಟಿವಿ ಅಳವಡಿಸಿದ್ದೂ ಆಯ್ತು. ಆದರೆ ಕೆಲವರಿಗೆ ಅರ್ಥವಾಗಲಿಲ್ಲ. ಮತ್ತೆ ಅಲ್ಲೇ ತ್ಯಾಜ್ಯ ಎಸೆದರು.

 

Advertisement

 

Advertisement

 

Advertisement

ಈ ಸಂದರ್ಭದಲ್ಲಿ ಯೋಚನೆ ಬಂದಿದ್ದು ಗಿಡ ನೆಡುವ ಕುರಿತು. ನಂತರ ಕೆಲಸ ಸುಲಭವಾಯಿತು. ಸ್ವಚ್ಛ ಸುಳ್ಯ ತಂಡದ ವಿನೋದ್ ಲಸ್ರಾದೊ, ಹಾಗೂ ವಿನಯ್ ಕುಮಾರ್ ಕಂದಡ್ಕ ಅವರ ಯೋಚನೆಗೆ ಸಾತ್ ನೀಡಿದ್ದು ಕೇರ್ಪಳದ ಪಯಸ್ವಿನಿ ಯುವಕ ಮಂಡಲ. ಹೀಗಾಗಿ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ಯುವಜನ ಸಂಯುಕ್ತ ಮಂಡಳಿ., ನಗರ ಪಂಚಾಯತ್, ತೇಜಸ್ವಿನಿ ಮಹಿಳಾ ಮಂಡಲ ಗಳ ಸಹಯೋಗದಲ್ಲಿ ಗಿಡ ನೆಡುವ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಕುಂಣ್ಚ್ ಆಹಮದ್ ಬಂದು ಕಾರ್ಯಕ್ರಮ ಉದ್ಘಾಟಿಸಿ ಪ್ರೋತ್ಸಾಹಿಸಿದರು. ಯುವಕ ಮಂಡಲದ ಸದಸ್ಯರು, ಯುವಜನ ಸಂಯುಕ್ತ ಮಂಡಳಿ ಪದಾಧಿಕಾರಿಗಳು, ಸ್ವಚ್ಛ ಸುಳ್ಯ ತಂಡದ ಸದಸ್ಯರು ಉಪಸ್ಥಿತರಿದ್ದು ಗಿಡ ನೆಟ್ಟು ಬೇಲಿ ಹಾಕಿ ಪರಿಸರ ಸ್ವಚ್ಛಗೊಳಿಸಿದರು. ಸ್ಥಳೀಯ ಹಾಸ್ಟೆಲ್ ವಿದ್ಯಾರ್ಥಿನಿಯರೂ ಸ್ವಚ್ಛತೆಯಲ್ಲಿ ಕೈ ಜೋಡಿಸಿದರು.

Advertisement

ಕಸ್ತೂರಿ ರಬ್ಬರ್ ನರ್ಸರಿಯ ಮಧುಸೂದನ್ ಅವರು ಹಣ್ಣಿನ ಗಿಡಗಳನ್ನು ಉಚಿತವಾಗಿ ನೀಡಿ ಸಹಕರಿಸಿದರೆ ಕೆಲಸ ನೋಡಿದ ದಾನಿಗಳು ಬೇಲಿಗೆ ಬಲೆ ಅಳವಡಿಸಲು ದೇಣಿಗೆ ನೀಡಿದರು. ಇದೆ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿರುವ ಮತ್ತು ಮುಂಭಾಗದಲ್ಲಿರುವ ಶೌಚಾಲಯಗಳನ್ನು ಕೂಡ ಸ್ವಚ್ಛಗೊಳಿಸಲಾಯ್ತು. ಇನ್ನಾದರೂ ಪರಿಸರದ ಕಸದಿಂದ ಮುಕ್ತಿ ದೊರೆತು ಗಿಡದ ತಂಪು ನೆರಳಿನ ಜೊತೆ ಹಣ್ಣುಗಳನ್ನು ಸವಿಯುವ ಭಾಗ್ಯ ಲಭಿಸಲಿ ಎಂಬುವುದೇ ಎಲ್ಲರ ಭಾವವಾಗಿತ್ತು.

ಕಾರ್ಯಕ್ರಮ ದಲ್ಲಿ ನಗರ ಪಂಚಾಯತ್ ಸದಸ್ಯರಾದ ವಿನಯ್ ಕಂದಡ್ಕ, ಸುಧಾಕರ್ , ಪೂಜಿತಾ, ಮಾಜಿ ಸದಸ್ಯರಾದ ಗೋಪಾಲ್ ನಡುಬೈಲ್, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ್ ಪೆರಾಜೆ, ನಿರ್ದೇಶಕರು, ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ವಿನ್ಯಾಸ ಕುರುಂಜಿ , ಸ್ವಚ್ಛ ಸುಳ್ಯ ತಂಡದ ವಿನೋದ್ ಲಸ್ರಾದೊ, ಸುಧಾಕರ್ ರೈ, ಜಯಂತ್ ಶೆಟ್ಟಿ, ಸ್ಥಳೀಯರಾದ ಗುರುಮೂರ್ತಿ, ಶೀನಪ್ಪ ಬಯಂಬು, ಚಂದ್ರಶೇಖರ್ (ಕೆವಿಜಿ ) ಮನೋಜ್ ಕೇರ್ಪಳ, ಶಿವರಾಮ್ ಕೇರ್ಪಳ, ಕಮಲಾಕ್ಷ., ಸುಧಾಕರ್ ಕೇರ್ಪಳ, ದಯಾನಂದ ಕುರುಂಜಿ, ಆರತಿ, ಯತೀಶ್ ಪೂಜಾರಿ, ಯತೀಶ್ ಕೇರ್ಪಳ, ನಾಗರಾಜ್, ಅಜಿತ್ ಕೇರ್ಪಳ, ಕುಮಾರ, ಮಂಜುನಾಥ್, ಅವಿನಾಶ್ ಕುರುಂಜಿ, ಅಜಿತ್ ಕುರುಂಜಿ, ರಘು, ಮೋಹನ್ ಕೇರ್ಪಳ, ಜನಾರ್ಧನ ಮತ್ತಿತರರು ಸಕ್ರಿಯವಾಗಿ ಭಾಗವಹಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

2 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

5 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

19 hours ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

19 hours ago

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ

ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…

19 hours ago

ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ

ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…

19 hours ago