ಮೋದಕ ಪ್ರಿಯ ಗಣೇಶನಿಗೆ ಸಿಹಿ ಎಂದರೆ ಅಚ್ಚುಮೆಚ್ಚು. ಈ ಸಂದರ್ಭ ಕೆಲವೊಂದು ಸಿಹಿಗಳ ಬಗ್ಗೆ ಇಲ್ಲಿದೆ ಮಾಹಿತಿ…
ಅಮೃತ ಫಲ:
ಬೇಕಾಗುವ ಸಾಮಾನು: 1 ಲೋಟ ತೆಂಗಿನ ಹಾಲು, 1 ಲೋಟ ಹಾಲು, 1 ಲೋಟ ಸಕ್ಕರೆ ಎಲಕ್ಕಿಪುಡಿ ಮತ್ತು ತುಪ್ಪ
ವಿಧಾನ : ತೆಂಗಿನ ಹಾಲು, ಸಕ್ಕರೆ, ಹಾಲು ಒಟ್ಟಿಗೆ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕಲಕುತ್ತಿರಬೇಕು. ದಪ್ಪ ಆಗುತ್ತಾ ಬರುವಾಗ ತಳ ಬಿಡುತ್ತದೆ ಆಗ ಎಲಕ್ಕಿ ಪುಡಿ ಹಾಕಿ. ಆನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ. ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.
—————————–
ಪದರು ಪೇಣಿ:
ಬೇಕಾಗುವ ಸಾಮಾನು: 2 ಲೋಟ ಮೈದಾ ಹಿಟ್ಟು, ಎರಡೂವರೆ ಲೋಟ ಸಕ್ಕರೆ, 1 ಲೋಟ ತುಪ್ಪ, ಕೇಸರಿ ಬಣ್ಣ ಚಿಟಿಕೆ.
ವಿಧಾನ : ಮೈದಾ ಹಿಟ್ಟನ್ನು ಒಂದು ಮುಷ್ಠಿ ತೆಗೆದಿಟ್ಟು, ಉಳಿದ ಹಿಟ್ಟಿಗೆ 2ಚ.ತುಪ್ಪ ಹಾಕಿ ಬೆರೆಸಿ ಆನಂತರ ನೀರು ಸೇರಿಸಿ ಪೂರಿ ಹಿಟ್ಟಿನ ಹಾಗೆ ನಾದಿ ಇಟ್ಟುಕೊಳ್ಳಿ. ತೆಳುವಾಗಿ ಚಪಾತಿಯಂತೆ ಲಟ್ಟಿಸಿಕೊಂಡು ಒಂದರ ಮೇಲೆ ಗಟ್ಟಿ ತುಪ್ಪ ಹಚ್ಚಿ ಅದರ ಮೇಲೆ ಮತ್ತೊಂದು ಲಟ್ಟಿಸಿದ ಚಪಾತಿ ಇಟ್ಟು ತುಪ್ಪ ಹಚ್ಚಿ ಹೀಗೆ 3 ಅಥವಾ 4 ಇಟ್ಟು ಚಾಪೆಯಂತೆ ಸುತ್ತಿ 1 ಇಂಚಿನಂತೆ ಕಟ್ ಮಾಡಿ. ನೇರವಾಗಿಟ್ಟು ಪುನಃ ಲಟ್ಟಿಸಿ ತುಪ್ಪದಲ್ಲಿ ಗರಿ ಗರಿಯಾಗಿ ಕರಿಯಬೇಕು. (ಸಕ್ಕರೆಯನ್ನು ಎಳೆ ಪಾಕ ಮಾಡಿಟ್ಟುಕೊಂಡು ಬಣ್ಣ ಹಾಕಿ ಇಡಿ.) ಸಕ್ಕರೆ ಪಾಕಕ್ಕೆ ಹಾಕಿ 5 ನಿಮಿಷದ ನಂತರ ತೆಗೆದಿಡಿ.
————————-
ಕರ್ಜಿಕಾಯಿ
ಬೇಕಾಗುವ ಸಾಮಾನು :ಅರ್ಧ ಕೆ.ಜಿ ಚಿರೋಟಿ ರವೆ, ಮೈದಾ ಕಾಲು ಕೆ.ಜಿ., ಕೊಬ್ಬರಿ 500 ಗ್ರಾಂ., ಸಕ್ಕರೆ 500 ಗ್ರಾಂ. ಕರಿಯಲು ಎಣ್ಣೆ ಅರ್ಧ ಕೆ.ಜಿ, ಎಲಕ್ಕಿ 5
ವಿಧಾನ : ಕೊಬ್ಬರಿಯನ್ನು ತುರಿದು ಅದನ್ನು ಪುಡಿ ಮಾಡಿಕೊಂಡು ಅದಕ್ಕೆ ಎಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿ ಸೇರಿಸಿ ಬೆರೆಸಿ ಇಡಿ.
ಮೈದಾ ಮತ್ತು ರವೆಗೆ ಸ್ವಲ್ಪ ತುಪ್ಪ ಹಾಕಿ, ನೀರು ಸೇರಿಸಿ ಕಲಿಸಿದ ಹಿಟ್ಟನ್ನು ನಿಂಬೆಗಾತ್ರಕ್ಕೆ ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿ ಅದರೊಳಗೆ ಕೊಬ್ಬರಿ ಮಿಶ್ರಣವನ್ನು ಇಟ್ಟು ಅಂಚನ್ನು ಮುಚ್ಚಿ ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವಂತೆ ಕರಿಯಿರಿ.
ಬರಹ:
ಚಿತ್ರಾ ಮಟ್ಟಿ
ಬಿಡಿಒ ಹಿಂಬದಿ ಸುಳ್ಯ
9448461676
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…