ಸುಳ್ಯ : ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಉದ್ದಂತಡ್ಕ ದ.ಕ.ಜಿ.ಪಂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಚಿಗುರು ಕ್ರೀಡಾ ಕಲಾ ಸಂಘ ಉದ್ದಂತಡ್ಕ ಸಹಯೋಗದೊಂದಿಗೆ ನಡೆದ ಉದ್ದಂತಡ್ಕ ಶಾಲೆಯ ವಿಂಶತಿ ಉತ್ಸವ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಮಂಡೆಕೋಲು ಅವರನ್ನು ಶಾಲು, ಹಾರ, ಸ್ಮರಣಿಕೆ, ಬೆಳ್ಳಿಯ ಲೋಟ ನೀಡಿ ಸನ್ಮಾನಿಸಲಾಯಿತು.
ಯಕ್ಷಗಾನ ಗುರು, ಭಾಗವತರಾದ ವಿಶ್ವವಿನೋದ ಬನಾರಿ, ಚಿಗುರು ಕ್ರೀಡಾ ಕಲಾ ಸಂಘ ಅಧ್ಯಕ್ಷ ನಾರಾಯಣ ಕೆದ್ಕಾರ್, ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ಓಬಯ್ಯ ಕೆದ್ಕಾರ್, ಸದಸ್ಯರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel