ಯುಗ ಧರ್ಮಕ್ಕನುಗುಣವಾಗಿ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದು ಕುಮಾರವ್ಯಾಸ

July 12, 2019
12:00 PM

ಸುಳ್ಯ: ಕುಮಾರವ್ಯಾಸ ಮಹಾ ಕವಿ ವ್ಯಾಸ ಭಾರತದಿಂದ ವಸ್ತುವನ್ನು ಸ್ವೀಕರಿಸಿದರೂ ಬರವಣಿಗೆಯಲ್ಲಿ ಸ್ವತಂತ್ರತೆಯನ್ನು ರೂಢಿಸಿಕೊಂಡ ಪ್ರತಿಭಾಶಾಲಿ. ಯುಗ ಧರ್ಮಕ್ಕನುಗುಣವಾಗಿ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದಾನೆ. ಪಾತ್ರದ ವಿಶೇಷತೆಗೆ ತಕ್ಕಂತೆ ವಸ್ತುವಿನ ವೈವಿಧ್ಯಕ್ಕೆ ಹೊಂದುವಂತೆ ಮಹತ್ವದ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ” ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಶ್ರೀ ವೆಂಕಟ್ರಾಮ ಭಟ್ ಸುಳ್ಯ ಅವರು ಹೇಳಿದರು.

ಅವರು ನೆಹರು ಮೆಮೋರಿಯಲ್ ಪಿ. ಯು ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾದ ಕುಮಾರ ವ್ಯಾಸ ಭಾರತ ಕೃತಿಯ ಆಯ್ದ ಭಾಗದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ  ಹರಿಣಿ ಪುತ್ತೂರಾಯ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕರಾದ ಲಕ್ಷ್ಮಣ್ ಏನೆಕಲ್ ಅವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಕು. ಬೇಬಿ ವಿದ್ಯಾ ಪ್ರಸ್ತಾವನೆ ಗೈದು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಾಯಿ ಸಜನ್ ಸ್ವಾಗತಿಸಿ, ಶ್ರವಣ್ ವಂದಿಸಿದರು. ಯಜ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror