ಸುಳ್ಯ: ಕ್ರೀಡಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಹಲವಾರು ಉದ್ದೇಶಗಳನ್ನಿಟ್ಟು ರಾಜ್ಯಮಟ್ಟದಲ್ಲಿ ಸ್ಥಾಪನೆಗೊಂಡ ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸುಳ್ಯ ಜಿಲ್ಲಾ ಘಟಕವನ್ನು ನ.29 ರಂದು ಅಸ್ತಿತ್ವಕ್ಕೆ ತರಲಾಯಿತು.

ನಗರದ ಮೆಕ್ಸಿಕೊ ಸಭಾಂಗಣದಲ್ಲಿ ಯುನೈಟೆಡ್ ಎಂಪವರ್ಮೆಂಟ್ ಎಸೋಸಿಯೇಶನ್ ಸುಳ್ಯ ಜಿಲ್ಲಾ ಘಟಕದ ಅದ್ಯಕ್ಷರಾಗಿ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಯಾದ ಎಂ ಫ್ರೆಂಡ್ಸ್ ಸದಸ್ಯರು, ಪ್ರಮುಖ ಸಂಘಟಕರು, ನ್ಯೂ ಫ್ಲಾಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಬೆಳ್ಳಾರೆ ಮತ್ತು ಜೈ ಭಾರತ್ ಸ್ಪೋರ್ಟ್ಸ್ ಕ್ಲಬ್ ಬೆಳ್ಳಾರೆ ಇದರ ಸಕ್ರಿಯ ಸದಸ್ಯರೂ, ಬರಹಗಾರರೂ , ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯರೂ ಆಗಿರುವ ಅನ್ಸಾರ್ ಬೆಳ್ಳಾರೆಯವರನ್ನು ನೇಮಿಸಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಗೊಳ್ತಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಧ್ಯೇಯ ಉದ್ದೇಶದ ಸಂಪೂರ್ಣ ಮಾಹಿತಿಯನ್ನು ನೀಡಿದರು.
ರಾಜ್ಯ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಪ್ರಸ್ತಾವಿಕ ಮಾತನಾಡಿದರು. ಸುಳ್ಯ ಸಮಿತಿ ರಚನೆ ಉಸ್ತುವಾರಿ ಸಿರಾಜ್, ಇಕ್ಬಾಲ್ ಹಸನ್, ಪಾರೂಕ್ ಪುತ್ತೂರು, ಶರೀಫ್ ಪುತ್ತೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಘಟಕಕ್ಕೆ ಅಧ್ಯಕ್ಷರಾಗಿ ಅನ್ಸಾರ್ ಬೆಳ್ಳಾರೆ, ಉಪಾಧ್ಯಕ್ಷರಾಗಿ ಆರ್ ಬಿ ಬಶೀರ್, ರಶೀದ್ ಜಟ್ಟಿಪಳ್ಳ ಕೋಶಾಧಿಕಾರಿಯಾಗಿ ಹಂಝ ಕಾತೂನ್ , ಪ್ರ. ಕಾರ್ಯದರ್ಶಿಯಾಗಿ ಕಲಂದರ್ ಎಲಿಮಲೆ, ಜೊತೆ ಕಾರ್ಯದರ್ಶಿ ಶಫೀಕ್ ಕೊಂಯಿಗಾಜೆ, ಬಶೀರ್ ಬೆಳ್ಳಾರೆಯವರನ್ನು ನೇಮಿಸಲಾಯಿತು. ಕ್ರೀಡಾ ಕನ್ವವಿನರಾಗಿ ಝಾಕೀರ್ ಡಿ ಎಂ, ಕ್ರೀಡಾ ಕಾರ್ಯದರ್ಶಿ ಉಸ್ಮಾನ್ ಜಯನಗರ, ಬಾತೀಶ ಗಾಂಧಿನಗರ, ಕ್ರಿಕೆಟ್ ಸಂಯೋಜಕರಾಗಿ ಅನ್ಸಾಫ್ ಬೆಳ್ಳಾರೆ, ವಾಲಿಬಾಲ್ ತಾಜುದ್ದೀನ್ ಅಜ್ಜಾವರ, ಪುಟ್ಬಾಲ್ ಮುನಾಫರ್, ಫರೀದ್ ಶಿಲ್ಪಾ, ಕಬಡ್ಡಿ ಸಿರಾಜುದ್ದೀನ್ ಪೈಚಾರ್, ಸಂಶುದ್ದೀನ್ ಕೆ.ಎಂ, ಶಟ್ಲ್ ಬ್ಯಾಡ್ಮಿಂಟನ್ ಅಬ್ದುಲ್ ಖಾದರ್ ಜನಪ್ರಿಯ ಇವರನ್ನು ನೇಮಿಸಿದರೆ, ಇತರ ಕ್ರೀಡೆಗಳಿಗೆ ರಫೀಕ್ ಬಿಎಂಎ, ಯಹ್ಯಾ ಬೆಳ್ಳಾರೆ, ನಾಸೀರ್ ಬಾರ್ಪಣೆಯವರನ್ನುಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ತಾಜುದ್ದೀನ್ ಸ್ವಾಗತಿಸಿ ಶರೀಫ್ ಕಂಠಿ ವಂದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.