ಬರಹ : ಈರಯ್ಯ ದೂಂತೂರು.
ಈಗ ತಾನೆ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಯುವರಾಜ್ ಸಿಂಗ್ ಎಂಬ ಅದ್ಭುತ ಕ್ರಿಕೆಟ್ ಆಟಗಾರನ ಬಗ್ಗೆ ಮಾತನಾಡುತ್ತಾ ಬಂದು ಟಿ.ವಿ. ಆನ್ ಮಾಡಿದರೆ ಯೂವಿ ಕ್ರಿಕೆಟ್ ನಿಂದ ನಿವೃತ್ತಿ ಎಂಬ ಸುದ್ದಿ ಬರುತ್ತಿತ್ತು.. ಯುವಿ ಎಂಬ ಅದ್ಭುತ ಕ್ರಿಕೆಟ್ ಆಟಗಾರನ ಬದುಕು, ನಮ್ಮ ಬಾಲ್ಯದ ಕ್ರಿಕೆಟ್ ಆಟದ ನೆನಪುಗಳು ಮನಸ್ಸಿನಲ್ಲಿ ಹಾದು ಹೋದವು..
ಯುವರಾಜ್ ಸಿಂಗ್ ಎಂಬ ಕ್ರಿಕೆಟ್ ನ ಮಹಾಕಾವ್ಯದ ಬಗ್ಗೆ ಬರೆಯುವ ಮುಂಚೆ ..
ನಮ್ ಕೆಂಗೇರಿ ಟೀಮ್ ಬಗ್ಗೆ ಪ್ರಸ್ತಾಪಿಸಲೇಬೇಕು…ನಮಗೆ ಭಾನುವಾರವೆಂದರೆ ಕ್ರಿಕೆಟ್ ಹಬ್ಬ..
ಆಗ ಕಾಲೇಜು, ಮನೆ ಈಗ ವೃತ್ತಿ ಒತ್ತಡ ಮತ್ತು ಸಾಂಸಾರಿಕ ಒತ್ತಡದ ನಡುವೆಯೂ ಎಲ್ಲ ಮರೆತು ಆಡುತ್ತಿದ್ದೆವು.. ಮತ್ತು ಈಗಲೂ ಸಹ ಆಡುತ್ತಿದ್ದಾರೆ….
ಇಂದಿಗೂ ಚೆನ್ನಾಗಿ ನೆನಪಿದೆ ಬರೀ ಕ್ರಿಕೆಟ್ ಆಡುವುದಕ್ಕೆ ಒಟ್ಟು ಸೇರಲು ಬಾಡಿಗೆ ಮನೆ ಮಾಡಿದ್ದಂತ ಗ್ಯಾಂಗ್ ನಮ್ದು…ಇಂಗ್ಲೆಂಡ್ ವಿರುದ್ದ ಮುನ್ನೂರಕ್ಕೂ ಹೆಚ್ಚು ರನ್ ಹೊಡೆಸಿಕೊಂಡು ನಮ್ಮವರು ಟಪಟಪನೆ ನಾಲ್ಕು ವಿಕೆಟ್ ಬಿದ್ದಾಗ ಬೈಕೊಂಡು ಟಿವಿ ಆಫ್ ಮಾಡಿ ಮಲಗಿದ್ದವರಿಗೆ ಬೆಳಿಗ್ಗೆ ಪೇಪರ್ ನಲ್ಲಿ ಯುವರಾಜ್ ಸಿಂಗ್ ಮತ್ತು ಕೈಫ್ ರ ಆಟದಿಂದ ಮ್ಯಾಚ್ ಗೆದ್ದಿರೋದನ್ನ ನೋಡಿ ಮತ್ತೆ ಮತ್ತೆ ರಿಪೀಟ್ ಟೆಲಿಕಾಸ್ಟ್ ನಲ್ಲಿ ನೋಡಿದ್ದಿದೆ.
ಯುವರಾಜ್ ಎಂದರೆ ಫೀಲ್ಡಿಂಗ್, ಯುವರಾಜ್ ಎಂದರೆ ಸಿಕ್ಸರ್,ಯುವರಾಜ್ ಎಂದರೆ ಎಂಟರ್ಟೈನ್ಮೆಂಟ್, ಯುವರಾಜ್ ಎಂದರೆ ಟೀಂ ಇಂಡಿಯಾ ಎಂತಹಾ ದಿನಗಳು ಅವು.. ವಾಹ್ ಎಂತಹ ಆಟಗಾರ..2011 ರ ವರ್ಲ್ಡ್ ಕಪ್ ನ ದಿನಗಳು ಮರೆಯಲು ಸಾಧ್ಯವೇ ಇಲ್ಲ.
ಇಂದಿಗೂ ನೆನಪಿದೆ 2011 ವರ್ಲ್ಡ್ ಕಪ್ ಇಂಗ್ಲೆಂಡ್ ವಿರುದ್ಧದ ಮ್ಯಾಚ್ ಗೆ ಟಿಕೆಟ್ ಸಿಗದೆ ಕಾಲ್ತುಳಿತವಾದಾಗ ಯಾಕ್ ಹಿಂಗ್ ಸಾಯ್ತಾರೋ ಈ ಜನ ಅಂತ ಬೈಕೊಂಡು ಕರ್ತವ್ಯ ನಿರ್ವಹಿಸಿದ ನಮಗೆ ವರ್ಲ್ಡ್ ಕಪ್ ಗೆದ್ದಾಗ ಆದ ರೋಮಾಂಚನವೇ ಬೇರೆ.
ಹೌದು ಈ ಕಾರಣಕ್ಕೆ ಕ್ರಿಕೆಟ್ ಅಂದ್ರೆ ಹಿಂಗೇ ಇರಬೇಕು ಅಂತ ನನಗೇ ಅನ್ನಿಸಿದ್ದಿದೆ. ಎಲ್ಲಕ್ಕೂ ಮಿಗಿಲು ಯುವಿ ತಾನೇ ಹೇಳುವಂತೆ “ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿ ಇದ್ದಕ್ಕಿದ್ದಂತೆ ರೆಕ್ಕೆ ಮುರಿದು ಪಾತಾಳಕ್ಕೆ ಬೀಳುವಂತೆ ಎರಗಿದ ಕ್ಯಾನ್ಸರ್ ಎಂಬ ನರಕದಿಂದ ಮತ್ತೆ ವಾಪಸ್ ಬಂದಿದ್ದು ನನ್ನಮ್ಮನ ಹಾರೈಕೆ ಯಿಂದ” ಎಂದು ತನ್ನಲ್ಲಾ ಯಶಸ್ಸು, ಸಾಧನೆಯನ್ನು ಅಮ್ಮನಿಗರ್ಪಿಸಿದ …
ಯುವಿ….ನಿಮಗೆ ಒಳಿತಾಗಲಿ..
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …