ಸುಳ್ಯ: ಸುಳ್ಯದ ಸಾಂಸ್ಕೃತಿಕ ಕೇಂದ್ರವಾದ ರಂಗಮಯೂರಿ ಕಲಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ತಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಲಾ ಶಾಲೆಯ ಅಧ್ಯಕ್ಷ ವಿಜಯಕುಮಾರ್ ಮಯೂರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ನಿವೃತ್ತ ಯೋಧ ಜೆ.ಕೆ.ವಸಂತ ಗೌಡ ಕಾಳಮ್ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜಯಕುಮಾರ್ ಮಯೂರಿ ಸ್ವಾಗತಿಸಿ, ನಿರ್ದೇಶಕ ಲೊಕೇಶ್ ಊರುಬೈಲು ವಂದಿಸಿದರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು. ಕಲಾ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ಲೊಕೇಶ್ ಊರುಬೈಲು ನಿರ್ದೇಶನದ ಮೇಘ ವೃಕ್ಷ ಮತ್ತು ತುಷಾರ್ ನಿರ್ದೇಶನದ ವೀರ ಭಗತ್ ಸಿಂಗ್ ನಾಟಕ ಪ್ರದರ್ಶನಗೊಂಡವು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel