ರಂಜನಿ ಸಂಗೀತ ಸಭಾ ದಶಮಾನೋತ್ಸವ ಸಂಗೀತ ಸಂಭ್ರಮ- ಸಂಗೀತ ಕಲಿಯುವುದು ಜನ್ಮಾಂತರದ ಪುಣ್ಯ: ಕಾಂಚನ ಈಶ್ವರ ಭಟ್

February 10, 2020
9:23 AM

ಸುಳ್ಯ: ಸಂಗೀತ ಕಲಿಯುವುದು ಮತ್ತು ಕಲಿಸುವುದು ಜನ್ಮಾಂತರದ ಪುಣ್ಯ ಎಂದು ಸಂಗೀತ ಗುರು ಕಾಂಚನ ಈಶ್ವರ ಭಟ್ ಹೇಳಿದ್ದಾರೆ.

Advertisement

ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದ ಕದ್ರಿ ಗೋಪಾಲನಾಥ್ ಕಲಾವೇದಿಕೆಯಲ್ಲಿ ನಡೆದ ಎಲಿಮಲೆಯ ರಂಜನಿ ಸಂಗೀತ ಸಭಾದ ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತದ ಉದ್ದೇಶವೇ ಅರ್ಪಣೆ. ಸಂಗೀತದ ಮೂಲಕ ಬದುಕನ್ನು ಸ್ವಾಮಿಗೆ ಅರ್ಪಿಸುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸುನಾದ ಸಂಗೀತ ಶಾಲೆಯ ಸಂಚಾಲಕ, ಸಂಗೀತ ಗುರು ವಿದ್ವಾನ್ ಕಾಂಚನ ಎ.ಈಶ್ವರ ಭಟ್, ವೈದಿಕ ವಿದ್ವಾಂಸ ವೇದ ಮೂರ್ತಿ ಕರುವಜೆ ಕೇಶವ ಜೋಯಿಸ, ಸಂಗೀತ ಕಲಾವಿದ ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಅವರನ್ನು ಸುಳ್ಯದ ಆಯಶಿಲ್ಪದ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಸನ್ಮಾನಿಸಿದರು. ಶಿಕ್ಷಕ ಪದ್ಯಾಣ ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೇಶವ ಹೊಸೊಳಿಕೆ, ಕಾಸರಗೋಡು ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ನಿರ್ದೇಶಕ ಬಿ.ಜಿ.ಈಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು.

ರಂಜನಿ ಸಂಗೀತ ಸಭಾದ ನಿರ್ದೇಶಕಿ ಹಾಗು ಸಂಗೀತ ಶಿಕ್ಷಕಿ ರೇಖಾ ರೇವತಿ ಹೊನ್ನಡಿ, ನಿರ್ದೇಶಕ ಸತ್ಯನಾರಾಯಣ ಹೊನ್ನಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮೀಶ ಗಬ್ಬಲಡ್ಕ ಕಾರ್ಯಕ್ರ‌ಮ ನಿರೂಪಿಸಿದರು.

ಗಾಯತ್ರಿ ವೆಂಕಟರಾಘವನ್ ಸಂಗೀತ ಕಛೇರಿ: ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಗಾಯತ್ರಿ ವೆಂಕಟರಾಘವನ್ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ವಿದ್ವಾನ್ ಮೈಸೂರು ವಿ.ಶ್ರೀಕಾಂತ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಪುತ್ತೂರು, ಘಟಂನಲ್ಲಿ ವಿದ್ವಾನ್ ಉಡುಪಿ ಶ್ರೀಧರ್ ತಿರುವನಂತಪುರ ಸಹಕರಿಸಿದರು‌. ಕಾರ್ಯಕ್ರಮದ ಅಂಗವಾಗಿ ದಿನಪೂರ್ತಿ ಸಂಗೀತ ಕಾರ್ಯಕ್ರಮ ನಡೆಯಿತು‌.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

50 ವರ್ಷಗಳಲ್ಲಿ ಶೇ 8 ರಷ್ಟು ಜನರ ಭಾಷೆಗಳು ಜಗತ್ತಿನ ಮೇಲೆ ಅಧಿಪತ್ಯ ಸಾಧಿಸುವ ಅಪಾಯ | ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ
April 27, 2025
10:39 AM
by: The Rural Mirror ಸುದ್ದಿಜಾಲ
ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2025′
February 13, 2025
8:38 PM
by: The Rural Mirror ಸುದ್ದಿಜಾಲ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group