ಬೆಳ್ಳಾರೆ: ಸುನ್ನೀ ಸೌಹಾರ್ದ ವೇದಿಕೆ ಬೆಳ್ಳಾರೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ರಿ) ಇವರ ಸಹಯೋಗದಲ್ಲಿ ಮರ್ಹೂಂ ಸಂಶುದ್ದೀನ್ ಸ್ಮರಣಾರ್ಥ ಬೆಳ್ಳಾರೆ ದೇವಿ ಹೈಟ್ಸ್ ಹೊರಾಂಗಣದಲ್ಲಿ ಬ್ರಹತ್ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನಿ ಸೌಹಾರ್ದ ವೇಧಿಕೆಯ ಅಧ್ಯಕ್ಷರಾದ ಹಸೈನಾರ್ ಹಾಜಿ ವಹಿಸಿದ್ದು, ಬಹು ಹಸ್ಸನ್ ಸಖಾಫಿಯವರ ದುಃವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
2019 ನೇ ಸಾಲಿನಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿ ಹಲವಾರು ಜೀವಿಗಳಿಗೆ ಆಸರೆಯಾದ ಸುಧಾಕರ ರೈಯವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ನಾಡಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಾದಂತೆ ನಾಡಿನ ಐಕ್ಯತೆಗೆ ಸುಲಭ ದಾರಿ, ರಕ್ತದಾನ ಮಾಡುವುದರಿಂದ ಸೌಹಾರ್ದತೆಯ ಪತಾಕೆಯನ್ನು ಹಾರಿಸಬಹುದು, ಈ ನಿಟ್ಟಿನಲ್ಲಿ ನಾವೆಲ್ಲ ಸೌಹರ್ದತೆಯಿಂದ ಬಾಳೋಣ, ಒಳಿತಿನ ಕಡೆಗೆ ಹೆಜ್ಜೆ ಇಡೋಣ ಎಂದರು. ನಾಡಿನ ಒಳಿತಿಗಾಗಿ ಹಗಲಿರುಲು ದುಡಿಯುತ್ತಿರು ಹಲವು ಸಂಘಟನೆಗಳನ್ನು ಪ್ರಶಂಸಿಸಿದರು.
ರಕ್ತದಾನ ಮತ್ತು ಅನ್ನದಾನಕ್ಕಿಂತ ಮಹಾದಾನ ಬೇರೊಂದಿಲ್ಲ, ಆತ್ಮೀಯ ಗೆಳೆಯ ಸಂಶುದ್ದೀನ್ ರವರು ನಮ್ನನ್ನು ಅಗಲಿ ಏಳು ವರುಷ ಸಂದಿವೆ. ಆದರೂ ಅವರ ನೆನಪು ಮಾತ್ರ ಸದಾ ಅಮರವಾಗಿದೆ. ಮರ್ಹೂಂ ಸಂಶುದ್ದೀನ್ ಅವರ ನೆನಪಲ್ಲಿ ಪ್ರತೀ ವರ್ಷವೂ ಕುಟುಂಬಸ್ತರು ಸಾರ್ವಜನಿಕ ಅನ್ನದಾನ ಮಾಡುತ್ತಿದ್ದಾರೆ. ಇಂದು ರಕ್ತದಾನವನ್ನ ಅವರ ನೆನಪಿನಲ್ಲಿ ಸುನ್ನೀ ಸೌಹಾರ್ದ ವೇದಿಕೆ ಆಯೊಜಿಸಿದ್ದು ಸಂತಸದ ವಿಷಯವಾಗಿದೆ ಎಂದು ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು 74 ಯುನಿಟ್ ರಕ್ತವನ್ನು ಸಂಗ್ರಹಿಸಿ ಬೆಳ್ಳಾರೆಯಲ್ಲಿ ಇತಿಹಾಸವನ್ನು ನಿರ್ಮಿಸಿದರು. ಮರ್ಹೂಂ ಸಂಶುದ್ದಿನ್ ಅವರ ಸಹೋದರ ಕಾಪು ಸರಕಾರಿ ಕಾಲೇಜಿನ ದೈಹಿಕ ಶಿಕ್ಷಕ ಅಬ್ದುಲ್ ರಝಾಕ್ ರವರು ಮೊದಲು ರಕ್ತದಾನ ಮಾಡಿದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮುಸ್ತಫಾ ಬೆಳ್ಳಾರೆ, ಜಮಾಅತ್ ಅಧ್ಯಕ್ಷರಾದ ಕೆ.ಎಂ ಮಹಮ್ಮದ್ ಹಾಜಿ, ಮರ್ಹೂಂ ಸಂಶುದ್ದಿನ್ ರವರ ಸಹೋದರ ಅಬ್ದುಲ್ ರಝಾಕ್, ಸುನ್ನೀ ಸೌಹಾರ್ದ ವೇದಿಕೆ ಉಪಾಧ್ಯಕ್ಷರಾದ ಹಮೀದ್ ಆಲ್ಫಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ಳಾರೆಯ ಪೋಲಿಸ್ ಠಾಣಾಧಿಕಾರಿ ಡಿ.ಎನ್ ಈರಯ್ಯ, ಡಾ.ತಿಲಕ್, ಗ್ರಾಮ ಪಂಚಾಯತ್ ಸದಸ್ಯರೂ, ದೇವಿ ಹೈಟ್ಸ್ ಮಾಲಕರೂ ಆದ ನವೀನ್ ರೈ ತಂಬಿನಮಕ್ಕಿ, ಪಂಚಾಯತ್ ಸದಸ್ಯರಾದ ಆರೀಫ್ ಬೆಳ್ಳಾರೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ಸಮಿತಿಯ ಸದಸ್ಯರಾದ ಬಶೀರ್ ಕೆ.ಎ ಸ್ವಾಗತಿಸಿ ಕಾರ್ಯದರ್ಶಿ ಜಲೀಲ್ ಎ.ಆರ್ ರವರು ವಂದಿಸಿ, ಇಕ್ಬಾಲ್ ಪಾಲ್ತಾಡ್ ನಿರೂಪಿಸಿದರು.