ಮಡಿಕೇರಿ: ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರು ನಿವೃತ್ತಿಯಾದ ನಂತರ ಸೇನಾ ಕ್ಯಾಂಟೀನ್‍ನಲ್ಲಿ ಪಡೆಯುವ ರಕ್ಷಣಾ ಮದ್ಯವನ್ನು ಬಳಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕುವುದು ಸರಿಯಲ್ಲವೆಂದು ನಾಪೋಕ್ಲು ಮಾಜಿ ಸೈನಿಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಪಾಡೇಯಂಡ ಶಂಭು ಹಾಗೂ ಉಪಾಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ, ಜಿಲ್ಲಾ ಅಬಕಾರಿ ಅಧಿಕಾರಿಗಳು ಮದ್ಯವರ್ತಕರೊಂದಿಗೆ ಶಾಮೀಲಾಗಿ ವಿವಾಹ ಸಮಾರಂಗಳಲ್ಲಿ ರಕ್ಷಣಾ ಮದ್ಯ ಬಳಸುವಂತಿಲ್ಲ ಎನ್ನುವ ಸುತ್ತೋಲೆ ಹೊರಡಿಸಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು. ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದಿನದ 24 ಗಂಟೆ ದುಡಿದು ನಿವೃತ್ತಿ ಹೊಂದಿದ ಒಬ್ಬ ಮಾಜಿ ಸೈನಿಕನಿಗೆ ಕೇಂದ್ರ ಸರಕಾರ ಒಂದಿಷ್ಟು ಮದ್ಯವನ್ನು ಕ್ಯಾಂಟೀನ್ ಸೌಲಭ್ಯದ ಮೂಲಕ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಅದನ್ನು ಯಾವ ರೀತಿಯಲ್ಲಿ ಬಳಸಬೇಕು, ಬೇಡ ಎನ್ನುವುದು ಮಾಜಿ ಯೋಧನ ಸ್ವಂತ ಅಭಿಪ್ರಾಯವಾಗಿದೆ. ಅಬಕಾರಿ ಇಲಾಖೆ ಇದಕ್ಕೆ ಪ್ರತ್ಯೇಕ ನಿಯಮ ರೂಪಿಸುವ ಅಗತ್ಯವಿಲ್ಲವೆಂದರು.
ಮಾಜಿ ಸೈನಿಕರಿಗೆ ಸೈನಿಕ ಕಲ್ಯಾಣ ಇಲಾಖೆ ನಿಯಮದಂತೆ ಆರ್ಮಿ ಕ್ಯಾಂಟೀನ್ ಸೌಲಭ್ಯದಲ್ಲಿ ತಿಂಗಳಿಗೆ ಇಂತಿಷ್ಟು ಮದ್ಯ ಎಂದು ನೀಡಲಾಗುತ್ತದೆ. ಅದನ್ನು ಶೇಖರಿಸಿಕೊಂಡು ತಮ್ಮ ಮತ್ತು ಸಂಬಂಧಿಕರ ಸಮಾರಂಭಗಳಿಗೆ ಬಹಳ ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಹೊರ ರಾಜ್ಯದ ಮದ್ಯ ಬಳಸಬಾರದೆಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಅಬಕಾರಿ ಇಲಾಖೆ ನಿದ್ರಾವಸ್ಥೆಯಲ್ಲಿದೆಯೇ ಎಂದು ಪ್ರಶ್ನಿಸಬೇಕಾಗಿದೆ. ಜಿಲ್ಲೆಯಲ್ಲಿ ವೈನ್ ಶಾಪ್‍ಗಳಲ್ಲಿ ಲೂಸ್ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಅಬಕಾರಿ ಕಾಯ್ದೆಯಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಆರ್ಮಿ ಕ್ಯಾಂಟೀನ್‍ನ ರೀತಿಯಲ್ಲೇ ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾದರೆ ಅಬಕಾರಿ ಇಲಾಖೆಯ ಸುತ್ತೋಲೆಯನ್ನು ಪಾಲಿಸಬಹುದು ಎಂದು ಪ್ರಮುಖರು ಅಭಿಪ್ರಾಯಪಟ್ಟರು.
ಅರ್ಥಹೀನ ಸುತ್ತೋಲೆಗಳನ್ನು ಹೊರಡಿಸಿ ಕೊಡಗಿನ ಜನರಿಗೆ ಕಿರುಕುಳ ನೀಡಿದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶಂಭು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಅಪ್ಪಚ್ಚು ಹಾಗೂ ಖಜಾಂಚಿ ಕರೀಂ ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…