ಸುಳ್ಯ: ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಅಂಗಾರ ಚಾಲನೆ ನೀಡಿದರು. ಕಲ್ಲುಮುಟ್ಲುವಿನಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಕೇರ್ಪಳ 11ನೇ ನೆಲ್ಲಿ ಬಂಗಾರಡ್ಕದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ರಸ್ತೆ, 9ನೇ ವಾರ್ಡ್‍ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, 12 ಲಕ್ಷ ವೆಚ್ಚದಲ್ಲಿ ಕುರುಂಜಿ ಗುಡ್ಡೆ ಒಳಾಂಗಣ ಕ್ರೀಡಾಂಗಣದ ಬಳಿ ರಸ್ತೆ ಅಭಿವೃದ್ಧಿ, 10 ಲಕ್ಷ ವೆಚ್ಚದಲ್ಲಿ ಕೇರ್ಪಳ ಕೆ ಇ ಬಿ ಕ್ವಾರ್ಟರ್ಸ್ ಹಿಂಬದಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ಸೇರಿ 70 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಸದಸ್ಯರಾದ ಸುಶೀಲ, ಕಿಶೋರಿ ಶೇಟ್, ಸುಧಾಕರ್, ವಿನಯ ಕುಮಾರ್ ಕಂದಡ್ಕ, ಪೂಜಿತ ಕೆ.ಯು, ಶೀಲಾ ಕುರುಂಜಿ, ರಿಯಾಜ್ ಕಟ್ಟೆಕ್ಕಾರ್, ಮಾಜಿ ನ ಪಂ ಸದಸ್ಯರಾದ ಕಿರಣ್ ಕುರುಂಜಿ, ಗೋಪಾಲ್ ನಡುಬೈಲ್, ನ.ಪಂ.ಇಂಜಿನಿಯರ್ ಶಿವಕುಮಾರ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಚಂದ್ರಶೇಖರ್, ಸ್ಥಳೀಯ ಪ್ರಮುಖರಾದ ಜಿನ್ನಪ್ಪ ಪೂಜಾರಿ, ಆನಂದ ಗೌಡ, ಬಿನು, ರಂಜಿತ್ ಪೂಜಾರಿ, ಶಿವರಾಮ್ ಕೇರ್ಪಳ, ಸುನಿಲ್ ಕೇರ್ಪಳ, ಬಾಲಕೃಷ್ಣ ನೆಡ್ಚಿಲ್, ಮನೀಶ್ ಬಾಬು ಗೌಡ, ಶೀನಪ್ಪ ಬಯಂಬು, ದಯಾನಂದ ಕೇರ್ಪಳ, ಮನೀಶ್ ಬಾಬು ಗೌಡ, ಶೀನಪ್ಪ ಬಯಂಬು, ಬೂಡು ರಾಧಾಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…