ಸುಬ್ರಹ್ಮಣ್ಯ: ರಾಜಧಾನಿ ಬೆಂಗಳೂರಿನಿಂದ ಗ್ರಾಮೀಣ ಭಾಗವಾದ ಏನೆಕಲ್ಲು ಸರಕಾರಿ ಶಾಲೆಗೆ ಬಂದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಬೆಂಗಳೂರಿನ ಡೆವಿಲ್ಸ್ ಆಫ್ ಹೆವನ್ ಕ್ಲಬ್ ಸದಸ್ಯರು.
ಏನೆಕಲ್ಲು ಸರಕಾರಿ ಪ್ರೌಡಶಾಲೆಯಲ್ಲಿ ಗುರುವಾರ ನಡೆದ 73 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಯುವಕ ಯವತಿಯರನ್ನು ಒಳಗೊಂಡ 11 ಮಂದಿಯ ಡೆವಲ್ಸ್ ಹೆವನ್ ಕ್ಲಬ್ ಸದಸ್ಯರು ಅತಿಥಿಗಳಾಗಿದ್ದರು. ಕ್ಲಬ್ ಸದಸ್ಯರನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಹೂಗುಚ್ಚ ನೀಡಿ ಸ್ವಾಗತಿಸಿದರು.
ಬೆಂಗಳೂರು, ಕೊಡಗು, ದಕ್ಷಿಣ ಭಾರತ ಮೂಲದವರಾಗಿರುವ ಇವರುಗಳು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬೈಕು ರೈಡರುಗಳಾಗಿದ್ದಾರೆ.ಡೆವಿಲ್ಸ್ ಆಫ್ ಹೆವನ್ ಕ್ಲಬ್ ರಚಿಸಿಕೊಂಡು ಸಮಾಜ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅದರಂತೆ ತಂಡದ ಸದಸ್ಯರು ಬೆಂಗಳೂರಿನಿಂದ ಮಡಿಕೇರಿ ಮೂಲಕ ಬೈಕುಗಳಲ್ಲಿ ಆಗಮಿಸಿದ್ದರು. ಏನೆಕಲ್ಲು ಶಾಲೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೆಳಗ್ಗೆ 8.30ಕ್ಕೆ ಶಾಲೆಗೆ ತಲುಪಿದ ಅವರೆಲ್ಲರೂ ಬಳಿಕ ಶಾಲೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲು ಕಲರ್ ಪ್ರಿಂಟರ್ , ಕ್ರೀಡಾ ಸಾಮಾಗ್ರಿ ಹಾಗೂ ಶಾಲೆಯ 60 ಮಂದಿ ವಿದ್ಯಾರ್ಥಿಗಳಿಗೆ ಕಂಪಾಸು ಬಾಕ್ಸ್ ವಿತರಿಸಿದರು. ಮಕ್ಕಳಿಗೆ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾಸ್ಪರ್ಧೆಯಲ್ಲಿ ಅವರೂ ಪಾಲ್ಗೊಂಡು ಸಂಭ್ರಮಿಸಿದರು. ದಿನವಿಡಿ ಮಕ್ಕಳ ಜತೆಗೆ ಕಳೆದರು.
ನಾವೆಲ್ಲರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದೇವೆ. ಗ್ರಾಮೀಣ ಭಾಗದಲ್ಲಿ ಕಲಿತು ಉದ್ಯೋಗ ಪಡೆದವರು. ನಗರದಲ್ಲಿ ವಾಸವಿದ್ದರೂ ಗ್ರಾಮೀಣ ಭಾಗದ ನಂಟು ಜೀವಂತವಾಗಿರಬೇಕು. ಹಳ್ಳಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಮತ್ತು ಗಳಿಕೆಯ ಒಂದಷ್ಟು ಅಂಶವನ್ನು ಹಳ್ಳಿಗಳ ಶಾಲೆಗಳಿಗೆ ದಾನ ಮಾಡಬೇಕು ಈ ಉದ್ದೇಶದಿಂದ ಈ ಭಾರಿ ದ.ಕ ಜಿಲ್ಲೆಗೆ ಆಗಮಿಸಿದ್ದೇವೆ. ಭಾರತ ದೇಶದ ಬಹುತೇಕ ಹಳ್ಳಿಗಳಿಗೂ ತೆರಳುತ್ತೇವೆ. ಬೈಕು ರೈಡ್ ಹವ್ಯಾಸ ಮಾತ್ರವಲ್ಲ. ಸಾಮಾಜಿಕ ಕಾಳಜಿಗೂ ಅದು ಬಳಕೆಯಾಗಬೇಕು ಎನ್ನುತ್ತಾರೆ ಕ್ಲಬ್ ಮುಖ್ಯಸ್ಥ ಗೌತಮ್ ಕೊಡಗು.
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…
ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತದ ಮೇಲೆ ನೈಋತ್ಯ ಮಾನ್ಸೂನ್ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…