ರಾಜ್ಯದಲ್ಲಿಂದು 63 ಹೊಸ ಕೊರೊನಾ ಕೇಸ್ ಪತ್ತೆ: ಒಟ್ಟು ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆ

May 20, 2020
2:08 PM

ಬೆಂಗಳೂರು: ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್’ಡೌನ್ ಸಡಿಲಗೊಂಡ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸ್ಫೋಟ ಆರಂಭವಾಗಿದೆ. ಕರ್ನಾಟಕದಲ್ಲಿ ಇಂದು 63 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ  1458 ಜನರಿಗೆ ಸೋಂಕು ತಗುಲಿದಂತಾಗಿದೆ.

Advertisement

ಇಂದು ಬೆಂಗಳೂರಿನಲ್ಲಿ 4, ಮಂಡ್ಯದಲ್ಲಿ 8, ಬೀದರ್ ನಲ್ಲಿ 10 , ಕಲಬುರಗಿಯಲ್ಲಿ 7, ಹಾಸನಗದಲ್ಲಿ 21, ಉತ್ತರ ಕನ್ನಡದಲ್ಲಿ 1, ದಕ್ಷಿಣ ಕನ್ನಡದಲ್ಲಿ 1, ತುಮಕೂರಿನಲ್ಲಿ 4, ಉಡುಪಿಯಲ್ಲಿ 6, ಯಾದಗಿರಿಯಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇವತ್ತು ಬೆಳಕಿಗೆ ಬಂದಿರುವ 63 ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆ ಹಾಸನದ್ದೇ ಇದೆ.

ರಾಜ್ಯದಲ್ಲಿ ಇಂದು 10 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.  ಒಟ್ಟಾರೆ ಡಿಸ್​ಚಾರ್ಜ್ ಆದವರ ಪ್ರಮಾಣ 553 ತಲುಪಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 864 ಇದೆ.

ಇಂದು ಆರೋಗ್ಯ ಇಲಾಖೆ ಹೊಸ ರೀತಿಯಲ್ಲಿ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು, ಕೊರೆನಾ ಸೋಂಕು ತಗುಲಿದ್ದು ಹೇಗೆ ಎನ್ನುವುದನ್ನು ತಿಳಿಸಿಲ್ಲ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 5,611 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ.

Advertisement

ಇದೇ ವೇಳೆ ಮಹಾಮಾರಿ ವೈರಸ್’ಗೆ ನಿನ್ನೆ ಒಂದೇ ದಿನ 140 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ ಕೂಡ 3,303ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ 42,298 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |
July 12, 2025
1:52 PM
by: ಸಾಯಿಶೇಖರ್ ಕರಿಕಳ
ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ
July 12, 2025
11:32 AM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ
July 12, 2025
7:56 AM
by: ದ ರೂರಲ್ ಮಿರರ್.ಕಾಂ
ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group