Advertisement
ಸುದ್ದಿಗಳು

ರಾಜ್ಯ ಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್: ‘ಕೃಷಿ ಉದ್ಯಮಶೀಲತಾ ಅಭಿವೃದ್ಧಿ’ ಕುರಿತು ಕೃಷಿ ವಿಚಾರ ಗೋಷ್ಠಿ

Share

ಪುತ್ತೂರು: ಹಿಂದೆ ಉತ್ತಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುವುದೇ ಕನಸಾಗಿತ್ತು. ಆದರೆ ಅದು ಬದಲಾಗಿದೆ. ಉತ್ತಮ ಶಿಕ್ಷಣಸಂಸ್ಥೆಯೊಂದಿಗೆ ಯಾವ ವಿಷಯದಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗ ದೊರಕುತ್ತದೋ ಅದನ್ನು ಹರಸಿ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಇದರ ಬದಲಾಗಿ ವಿದ್ಯಾರ್ಥಿಗಳು ತಮಗಿಷ್ಟ ಬಂದ ಕ್ಷೇತ್ರದಲ್ಲಿ ಉದ್ಯಮಶೀಲರಾಗುವಂತೆ ಪ್ರೇರೇಪಿಸಬೇಕು ಇವರ ಮುಖಾಂತರ ಹಲವಾರು ಉದ್ಯೋಗವನ್ನು ಸೃಷ್ಟಿಸಿ ನೀಡುವಂತರಾಗಬೇಕು ಎಂದು ಬೆಂಗಳೂರಿನ ಸೋನಾ ಗ್ರೂಪ್ ಆಫ್ ಕಂಪೆನಿಯ ಮುಖ್ಯಸ್ಥ ಯಜ್ಞ ನಾರಾಯಣ ಕಮ್ಮಾಜೆ ತಿಳಿಸಿದರು.

ಅವರು ಇಲ್ಲಿನ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಅನ್ವೇಷಣಾ- 2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನ ಕೊನೆಯ ದಿನದ ತೃತೀಯ ಕೃಷಿ ವಿಚಾರ ಗೋಷ್ಠಿಯಲ್ಲಿ ‘ಕೃಷಿ ಉದ್ಯಮಶೀಲನಾ ಅಭಿವೃದ್ಧಿ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರವಿವಾರ ಮಾತನಾಡಿದರು.  ಪ್ರತಿಯೊಬ್ಬ ಯುವಕರು ಪಂಚಸೂತ್ರಗಳನ್ನು ಅಳವಡಿಕೊಂಡರೆ ಉದ್ಯಮಶೀಲರಾಗಲು ಸಾಧ್ಯ. ಈ ಪಂಚಸೂತ್ರಗಳು ಕೇವಲ ಇಂಜಿನಿಯರಿಂಗ್ ಅಥವಾ ಇಂತದ್ದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಇದು ಕೃಷಿಯಿಂದ ಹಿಡಿದು ಎಲ್ಲಾ ಉದ್ಯೋಗಕ್ಕೆ ಅಥವಾ ವ್ಯವಹಾರಕ್ಕೆ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಧರ್ಮ ಟೆಕ್ನಾಲಜೀಸ್ ಪ್ರೈವೇಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ವಿಠಲ್ ಮಾತನಾಡಿ, ಅನ್ವೇಷಣಾ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಮಾತ್ರ ಮೀಸಲಾಗದೆ ಅದನ್ನು ಬೆಳೆಸುವ ಹಾಗೂ ಅಭಿವೃದ್ಧಿ ಪಡಿಸುವ ಕರ್ತವ್ಯ ನಮ್ಮಮೇಲಿದೆ ಎಂದರಲ್ಲದೆ ನೂತನ ಅನ್ವೇಷಣಾಕಾರರು ಗೆಲುವಿನ ಪಥವನ್ನು ಕಾಣಲಿ ಎಂದು ಹಾರೈಸಿದರು.

ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಇಸಿ ಸದಸ್ಯ ರವೀಂದ್ರನಾಥ್ ಕೌಶಿಕ್ ಮಾತನಾಡಿ, ನಿರುದ್ಯೋಗ ದೇಶದ ಸಮಸ್ಯೆಯಾಗಿರುವುದರಿಂದ ಅದರ ನಿವಾರಣೆಗೆ ಉತ್ತಮ ಕೆಲಸದ ಕೌಶಲ್ಯಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಜೀವನದ ಪ್ರಗತಿಗೆ ಗೆಲುವು ಎಂಬುದು ನಮ್ಮ ತಲೆಯನ್ನು ತುಂಬಬಾರದು ಹಾಗೆಯೆ ಸೋಲು ನಮ್ಮ ಮನಸ್ಸನ್ನು ತುಂಬಬಾರದು ಎಂದು ಹೇಳಿದರು.  ದಿನಕರ ಮೂರ್ತಿ ಕೃಷ್ಣ ಮಾತನಾಡಿ, ಯಾವುದೇ ಸಂದರ್ಭಗಳನ್ನು ಅದರ ಪೂರ್ಣ ಅರಿವಾಗದೆ ಮತ್ತು ಒಪ್ಪಿಕೊಳ್ಳದೆ ಅದನ್ನು ಯಾಕೆ ಎಂಬ ಪ್ರಶ್ನೆಯೊಂದಿಗೆ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು, ಹಾಗೆಯೇ ಪ್ರಗತಿಯ ಜೀವನಕ್ಕೆ ಶ್ರಮ ಅತ್ಯಗತ್ಯ ಎಂದು ತಿಳಿಸಿದರು.

ಲಘು ಉದ್ಯೋಗ ಭಾರತಿ ಕರ್ನಾಟಕದ ಕಾರ್ಯದರ್ಶಿ ನಾರಾಯಣ ಪ್ರಸನ್ನ ಅವರು ಮಾತನಾಡಿ, ಸಮಯವು ಮೌಲ್ಯಯುತವಾದದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆಗೆ ಬದ್ಧರಾದರೆ ಉದ್ಯಮಶೀಲರಾಗಬಹುದು ಎಂದು ತಿಳಿಸಿದರು. ಶಿವಾನಂದ ಅವತಿಮಾರ್ ಮಾತನಾಡಿ, ಸಾರ್ಥಕ ಜೀವನ ನಡೆಸುವುದೇ ಜೀವನದ ಗುರಿಯಾಗಿರಲಿ, ಉದ್ಯಮಶೀಲರು ಸರಿಯಾದ ಮಾರ್ಗವನ್ನು ಆಯ್ದುಕೊಂಡು ಉದ್ಯಮವನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷ ಪಿ.ಎಸ್. ಶ್ರೀಕಂಠದತ್ತ ಅವರು ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಆಶಾ ಕೆ. ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯ ಚಂದಶೇಖರ ವಂದಿಸಿದರು. ಶಿಕ್ಷಕಿ ಸುಪ್ರೀತಾ ರೈ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

9 hours ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

12 hours ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

15 hours ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

1 day ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago