ಪುತ್ತೂರು: ಕಳೆದ ಎರಡು ಮೂರು ವರುಷಗಳಿಂದ ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಪುತ್ತೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನವು ಈ ಬಾರಿ ಜೈನಭವನದ ಆಸುಪಾಸಿನಲ್ಲಿ ಮತ್ತು ಬೈಪಾಸ್ ರಸ್ತೆಯ ಕೆಲವು ಪ್ರದೇಶಗಳಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ನ ಎ.ಜೆ ರೈ ಮತ್ತು ನಗರಸಭಾ ಸದಸ್ಯೆ ಗೌರಿ ಬನ್ನೂರು ಅವರು ಜಂಟಿಯಾಗಿ ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿದರು. ಸುಮಾರು 50 ಜನ ಭಾಗವಹಿಸಿದ ಈ ಕಾರ್ಯಕ್ರಮವು ಮಳೆಗಾಲದಲ್ಲಿ ಕೂಡ ನಡೆಯುತ್ತಿರುವುದು ಶ್ಲಾಘನೀಯ ಎಂದು ಎ.ಜೆ ರೈ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಗೌರಿ ಬನ್ನೂರು ಅವರು ಮಾತನಾಡಿ “ಪ್ರಧಾನಿಯವರ ಈ ಯೋಜನೆಯು ಅಭೂತಪೂರ್ವವಾಗಿ ಯಶಸ್ವಿಯಾಗಿ ನಡೆಯುತ್ತಿದ್ದು ಸಾಕಷ್ಟು ಜನ ಜಾಗೃತರಾಗಿದ್ದಾರೆ” ಎಂದರು.ನಂತರ ಮಳೆಗಾಲದಲ್ಲಿ ಅವಶ್ಯವಾಗಿ ಬೇಕಾಗಿರುವ ರಸ್ತೆ ಬದಿಯ ಕಾಲುವೆಯನ್ನು ಸರಿಪಡಿಸಲಾಯಿತು.ವಾಹನ ಸವಾರರಿಗೆ ಅಡ್ಡಿಯಾಗುತ್ತಿದ್ದ ಪೊದೆಗಳನ್ನು ಕಡಿಯಲಾಯಿತು.
ಸ್ವಚ್ಛತಾ ಕಾರ್ಯದ ಕೊನೆಯಲ್ಲಿ ಚಹಾ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.ಧನ್ಯಕುಮಾರ್ ಬೆಳಂದೂರು ಅವರು ಟಿಪ್ಪರ್ ವ್ಯವಸ್ಥೆಯನ್ನು ಮಾಡಿದ್ದರು.’ಟೀಮ್ ನರೇಂದ್ರ’ದ ಸಂಚಾಲಕ ಸಂತೋಷ್ ಕುಮಾರ್ ವಾಗ್ಲೆ,ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು,ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಮೂಲ್ಯ,ರಾಜ್ಯಪ್ರಶಸ್ತಿ ವಿಜೇತರಾದ ಸುರೇಶ್ ಶ್ರೀಶಾಂತಿ,ನಗರಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ್ ರಾವ್ ಮತ್ತು ಶಿವರಾಮ ಸಫಲ್ಯ ಮೊದಲಾದವರು ಕಸ ವಿಲೇವಾರಿಯಲ್ಲಿ ತೊಡಗಿಸಿಕೊಂಡಿದ್ದರು.
ರಾಮಕೃಷ್ಣ ಮಿಷನ್ ನ ಕಾರ್ಯಕರ್ತ ಶ್ರೀಕೃಷ್ಣ ಉಪಾಧ್ಯಾಯ ಮತ್ತು ದಿನೇಶ್ ಕುಮಾರ್ ಜೈನ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…