ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5 ಹಂತದ ಕಾರ್ಯಕ್ರಮ

June 24, 2019
2:00 PM

ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 29ನೇ ವಾರದ ಶ್ರಮದಾನದ ಕುಲಶೇಖರದಲ್ಲಿ ಕೈಗೊಳ್ಳಲಾಯಿತು.  ಕೊರ್ಡೆಲ್ ಹೋಲಿ ಚರ್ಚ್ ಮುಂಭಾಗದಲ್ಲಿ  ಫಾದರ್ ವಿಕ್ಟರ್ ಮಚಾದೋ ಶ್ರಮದಾನಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು.

Advertisement

ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ “ಯಾವುದೇ ಮಹಾನ್ ಕಾರ್ಯವಾಗಬೇಕಿದ್ದರೆ ಅದರ ಹಿಂದೆ ಶಕ್ತಿಯೊಂದು ಇರಲೇಬೇಕು. ಮಂಗಳೂರಿನ ಬೀದಿಗಳು ಇಂದು ಸ್ವಚ್ಛ ಸುಂದರವಾಗಿ ಕಂಗೊಳಿಸುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್ ಕಾರ್ಯಕರ್ತರ ಶಕ್ತಿಯೇ ಕಾರಣವಾಗಿದೆ. ಮಳೆಗಾಲದ ಭಾನುವಾರದ ಈ ಮುಂಜಾವಿನ ಸಮಯದಲ್ಲೂ ಇಷ್ಟೊಂದು ಕಾರ್ಯಕರ್ತರು ಜಾತಿ-ಮತ, ಮೇಲು-ಕೀಳು ಬಡವ-ಬಲ್ಲಿದ ಎಂಬ ಯಾವುದೇ ಭಾವವಿಲ್ಲದೇ ಕೇವಲ ಸ್ವಚ್ಛತೆಗಾಗಿ ಕಂಕಣಬದ್ಧರಾಗಿರುವುದನ್ನು ನೋಡಿದಾಗ ಇದು ಭಾರತ ಬದಲಾಗುತ್ತಿರುವ ಸಂಕೇತದಂತೆ ತೋರುತ್ತದೆ. ಇದಕ್ಕೆ ಕಾರಣೀಕರ್ತರಾದ ಹಾಗೂ ಕಾರ್ಯಕರ್ತರಿಗೆ ನಿರಂತರವಾಗಿ ಸ್ಥೂರ್ತಿಯನ್ನು ನೀಡುತ್ತಿರುವ ರಾಮಕೃಷ್ಣ ಮಠದ ಸ್ವಾಮಿಜಿಗಳ ಶ್ರಮಕ್ಕೆ ಮಂಗಳೂರಿನ ನಾಗರಿಕ ಸಮಾಜದ ಪರವಾಗಿ ಅಭಿನಂದನೆ ಸಲ್ಲಬೇಕು.” ಎಂದು ತಿಳಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿದರು.

ನಂತರ ಮಾತನಾಡಿದ ಫಾದರ್ ವಿಕ್ಟರ್ ಮಚಾದೋ “ಸಮಾಜದಲ್ಲಿರುವ ಜನರ ಭಾವನೆಗಳು ಸ್ವಚ್ಛವಾಗಬೇಕು. ಭಾವಶುದ್ಧಿಯಾದರೇ ಬಾಹ್ಯ ಸಮಾಜದ ಶುದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಕಸದ ವಿಚಾರದಲ್ಲಿ ಜನರ ಮನಸ್ಸುಗಳಲ್ಲಿ ಜಾಗೃತಿಯನ್ನುಂಟುಮಾಡುವಲ್ಲಿ ಸಫಲರಾದರೆ ನಮ್ಮ ಪರಿಸರ ತನ್ನಿಂದತಾನೇ ಸ್ವಚ್ಛವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಪರಿಸರ ಶುಚಿಯಾಗಿದ್ದರೆ ಆರೋಗ್ಯವಂತ ಬದುಕು ನಮ್ಮದಾಗುತ್ತದೆ ಎಂದರು.

ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಶುಭೋದಯ ಆಳ್ವ , ಸತೀಶ್ ಭಟ್ , ರಂಜನ್ ಬೆಳ್ಳರ್ಪಾಡಿ, ಮೆಹಬೂಬ್ ಖಾನ್, ಸತ್ಯನಾರಾಯಣ ಭಟ್, ತಾರಾನಾಥ್ ಆಳ್ವ, ಶಿವರಾಜ್ ಪೂಜಾರಿ, ಲೋಕೇಶ್ ಕೊಟ್ಟಾರ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

 

Advertisement

ಕುಲಶೇಖರ್ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಭಿಯಾನದ ಪ್ರಧಾನ ಸಂಯೊಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ನಾಲ್ಕು ತಂಡಗಳು ಶ್ರಮದಾನವನ್ನು ಕೈಗೊಂಡವು. ಕೊರ್ಡೆಲ್ ಚರ್ಚ್ ಮುಂಭಾದಲ್ಲಿರುವ ಬಸ್ ತಂಗುದಾಣದ ಬಳಿ ಇದ್ದ ತ್ಯಾಜ್ಯಗಳ ರಾಶಿಯನ್ನು ಸಚಿನ್ ಕಾಮತ್ ಹಾಗೂ ಕಾರ್ಯಕರ್ತರು ತೆರವುಗೊಳಿಸಿ ಅಲ್ಲಿ ಹೂಗಿಡಗಳನ್ನಿಟ್ಟರು.

ಮತ್ತೊಂದೆಡೆ ಅದೇ ಮಾರ್ಗದಲ್ಲಿದ್ದ ಕಟ್ಟಡತ್ಯಾಜ್ಯ ಹಾಗೂ ತೋಡುಗಳ ತ್ಯಾಜ್ಯದ ರಾಶಿಗಳನ್ನು  ಶೇಷಪ್ಪ ಅಮೀನ್ ಹಾಗೂ ಕಾರ್ಯಕರ್ತರು ಜೆಸಿಬಿ ಬಳಸಿಕೊಂಡು ಸ್ವಚ್ಛಗೊಳಿಸಿದರು.

ಮೂರನೇ ತಂಡ ಶಕ್ತಿನಗರಕ್ಕೆ ಹೋಗುವ ಅಡ್ಡರಸ್ತೆಯಲ್ಲಿ ಬಸ್ ತಂಗುದಾಣದ ಬಳಿಯಿರುವ ತ್ಯಾಜ್ಯವನ್ನು ತೆಗೆದು ಶುದ್ಧಗೊಳಿಸಿದರು.ಹಿರಿಯರಾದ ಕಮಲಾಕ್ಷ ಪೈ ನೇತೃತ್ವ ವಹಿಸಿದ್ದರು.

ಕುಲಶೇಖರ್ ಮಾರುಕಟ್ಟೆ ಬಳಿಯಿರುವ ಮರದ ಸುತ್ತಮುತ್ತಲಿನ ಪರಿಸರ ಅತ್ಯಂತ ಗಲೀಜಾಗಿ ಹೇಸಿಗೆ ಹುಟ್ಟಿಸುತ್ತಿತ್ತು. ಸುಧೀರ್ ನರೋನ್ಹ ಹಾಗೂ ಉಮಾಕಾಂತ ಮಾರ್ನಮಿಕಟ್ಟೆ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸಿ ಅಲ್ಲಿಯೂ ಅಲಂಕಾರಿಕ ಗಿಡಗಳನ್ನಿಡಲಾಗಿದೆ. ಕೊನೆಯಲ್ಲಿ ಬಿಕರ್ನಕಟ್ಟೆ, ನಂತೂರು, ಕದ್ರಿ, ಹಂಪನಕಟ್ಟೆ,  ಪಾಂಡೇಶ್ವರ, ಮಂಗಳಾದೇವಿ ಪರಿಸರದಲ್ಲಿದ್ದ ಅನಧಿಕೃತ ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ.

Advertisement

 

 

 

ತೋಡುಗಳ ಸ್ವಚ್ಛತೆ:

Advertisement

ಕೊರ್ಡೆಲ್ ಹಾಲ್ ಮುಂಭಾದಲ್ಲಿರುವ ತೋಡುಗಳಲ್ಲಿ ಕಸಕಡ್ಡಿ ಹಾಗೂ ತ್ಯಾಜ್ಯ ತುಂಬಿದ್ದರಿಂದ ಮಳೆಯ ನೀರು ತೋಡುಗಳಲ್ಲಿ ತುಂಬಿತ್ತು. ಇದೀಗ ಅಲ್ಲಿದ್ದ ತ್ಯಾಜ್ಯ, ಮಣ್ಣು ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ವಿಠಲದಾಸ್ ಪ್ರಭು, ಪುನೀತ್ ಕುಮಾರ್ ಶೆಟ್ಟಿ ಹಾಗೂ ಸ್ವಯಂಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

 

 


ಜಾಗೃತಿ ಕಾರ್ಯಕ್ರಮ: ಕುಲಶೇಖರದಲ್ಲಿರುವ ಅಂಗಡಿಮುಂಗಟ್ಟುಗಳಿಗೆ ತೆರಳಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಜೊತೆಗೆ ಸ್ವಚ್ಛ ಮಂಗಳೂರು ಜಾಗೃತಿ ಕೈಪಿಡಿಯನ್ನು ಹಂಚಲಾಯಿತು. ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ ಹಾಗೂ ಸ್ಮಿತಾ ಹೆಬ್ಬಾರ್ ಮಾರ್ಗದರ್ಶನದಲ್ಲಿ ಜಾಗೃತಿ ಕಾರ್ಯವನ್ನು ನಿರ್ವಹಿಸಿದರು.

ಮತ್ತೊಂದೆಡೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕೋರಿಕೆಯ ಮೇರೆಗೆ ಅಭಿಯಾನದ ಪ್ರಮುಖರಾದ ದಿಲ್‍ರಾಜ್ ಆಳ್ವ ನೇತೃತ್ವದಲ್ಲಿ ಗೋರಕ್ಷದಂಡು ಹಾಗೂ ಅರೆಕೆರೆಬೈಲ್ ಪ್ರದೇಶದಲ್ಲಿ ಮಲೇರಿಯಾ-ಡೆಂಗ್ಯೂ ಕುರಿತಂತೆ ಜನರಿಗೆ ತಿಳುವಳಿಕೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಹೇಳಲಾಯಿತು.

Advertisement

ಶ್ರಮದಾನದ ಬಳಿಕ ಎಲ್ಲ ಸ್ವಯಂಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ
August 12, 2025
8:47 PM
by: The Rural Mirror ಸುದ್ದಿಜಾಲ
ದ ಕ ಜಿಲ್ಲೆ ಬೆಳೆವಿಮೆ ಯೋಜನೆ | ರೈತರ ನೋಂದಣಿಗೆ ಆಗಸ್ಟ್  14 ಕೊನೆಯ ದಿನ
August 12, 2025
7:34 AM
by: The Rural Mirror ಸುದ್ದಿಜಾಲ
ಗಣೇಶ ಚತುರ್ಥಿ | ರಾಸಾಯನಿಕ ಬಣ್ಣಗಳಿಂದ ಕೂಡಿದ ವಿಗ್ರಹ ವಿಸರ್ಜನೆ ನಿಷೇಧ
August 12, 2025
7:29 AM
by: The Rural Mirror ಸುದ್ದಿಜಾಲ
ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌

ಪ್ರಮುಖ ಸುದ್ದಿ

MIRROR FOCUS

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ
15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು
August 13, 2025
7:38 AM
by: The Rural Mirror ಸುದ್ದಿಜಾಲ

Editorial pick

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ
15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?
August 13, 2025
2:02 PM
by: ಸಾಯಿಶೇಖರ್ ಕರಿಕಳ
ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು
August 13, 2025
7:38 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
August 13, 2025
7:26 AM
by: The Rural Mirror ಸುದ್ದಿಜಾಲ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ
ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ
August 12, 2025
8:47 PM
by: The Rural Mirror ಸುದ್ದಿಜಾಲ
ಅರಣ್ಯ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ | ಅರಣ್ಯ ಸಚಿವ ಈಶ್ವರ ಖಂಡ್ರೆ
August 12, 2025
8:09 AM
by: The Rural Mirror ಸುದ್ದಿಜಾಲ
ರಾಜಸ್ಥಾನದ 30 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ | ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮೆ
August 12, 2025
7:56 AM
by: The Rural Mirror ಸುದ್ದಿಜಾಲ

ವಿಶೇಷ ವರದಿ

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |
August 6, 2025
7:16 AM
by: ವಿಶೇಷ ಪ್ರತಿನಿಧಿ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

OPINION

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group