Advertisement
ಸುದ್ದಿಗಳು

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5 ಹಂತದ 38ನೇ ವಾರದ ಶ್ರಮದಾನ

Share

ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 38ನೇ ಸ್ವಚ್ಛತಾ ಶ್ರಮದಾನವನ್ನು ಕಾವೂರಿನಲ್ಲಿ ಆಯೋಜನೆ ಮಾಡಲಾಗಿತ್ತು.

Advertisement
Advertisement

ಗಾಂಧಿನಗರದಲ್ಲಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರುಗಳಾದ ಮನೋಜ್ ಲೂಯಿಸ್ ಹಾಗೂ ರೇಖಾ ಎಸ್ ಎನ್ ಜಂಟಿಯಾಗಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ರಂಜನ್ ಬೆಳ್ಳರ್ಪಾಡಿ, ಉಪನ್ಯಾಸಕಿ ಮೋಹಿನಿ ಎಚ್ ಕೆ, ಸುಜಿತ್ ಭಂಡಾರಿ, ಗುರುದತ್ತ ಶೆಣೈ, ಸ್ವಪ್ನಿಲ್ ಚೌಟ, ಶರಣ, ಧನುಶ್ ಡಿ ಬಿ, ಪ್ರವೀಣ ಶೆಟ್ಟಿ ಇನ್ನಿತರ ಸ್ವಯಂ ಸೇವಕರು ಭಾಗವಹಿಸಿದ್ದರು.

Advertisement

ಶ್ರಮದಾನಕ್ಕೆ ಚಾಲನೆ ನೀಡಿದ ಮನೋಜ್ ಲೂಯಿಸ್ ಮಾತನಾಡಿ “ಸ್ವಚ್ಛ ಭಾರತ ಸಾಕಾರವಾಗಬೇಕಾದರೆ ಪ್ರತಿಯೊಬ್ಬರು ಅದಕ್ಕೆ ಯೋಗದಾನ ನೀಡಬೇಕಾಗುತ್ತದೆ. ಕೇವಲ ಒಂದಷ್ಟು ಹಣ ನೀಡಿಯೋ ಅಥವಾ ವಸ್ತುಗಳನ್ನು ನೀಡಿದರೆ ಸ್ವಚ್ಛ ಭಾರತ ಯಶಸ್ವಿಯಾಗುವುದಿಲ್ಲ, ಅದಕ್ಕೆ ಸಮಯವನ್ನು ನೀಡುವುದು ಅತ್ಯಂತ ಪ್ರಮುಖವಾಗುತ್ತದೆ. ಕಳೆದ ಐದು ವರ್ಷಗಳಿಂದ ಅತ್ಯಮೂಲ್ಯ ಸಮಯವನ್ನು ಸ್ವಚ್ಛತೆಗಾಗಿ ನೀಡುತ್ತಿರುವ ರಾಮಕೃಷ್ಣ ಮಿಷನ್ ಕಾರ್ಯಕರ್ತರ ಕೊಡುಗೆ ಸ್ಮರಣೀಯವಾದದು. ಇಂತಹ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಹೆಮ್ಮೆಯ ಹಾಗೂ ಸಂತೋಷದ ಸಂಗತಿ” ಎಂದು ತಿಳಿಸಿದರು.

ಉಪನ್ಯಾಸಕಿ ರೇಖಾ ಎನ್ ಎಸ್ ಮಾತನಾಡಿ ‘ಯಾವುದೇ ನಗರ ಉನ್ನತ ಮಟ್ಟಕ್ಕೆ ಏರಬೇಕಾದರೆ ಮೊದಲು ಆ ನಗರ ಸ್ವಚ್ಛವಾಗಿ ಕಂಗೊಳಿಸಬೇಕಾಗುತ್ತದೆ. ಆದ್ದರಿಂದ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರ ಪ್ರಥಮವಾಗಿ ಸ್ವಚ್ಛತೆಯನ್ನು ಮೈಗೂಡಿಕೊಳ್ಳಬೇಕಾಗುತ್ತದೆ. ಅಂತಹ ಸ್ವಚ್ಛತಾ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ರಾಮಕೃಷ್ಣ ಮಿಶನ್ ಕಾರ್ಯ ಶ್ರೇಷ್ಠ ಮಟ್ಟದ ಸೇವಾಕಾರ್ಯ” ಎಂದು ತಿಳಿಸಿ ಶುಭ ಹಾರೈಸಿದರು.

Advertisement

ಸ್ವಚ್ಛತಾ ಕಾರ್ಯ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸ್ವಯಂಸೇವಕರು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

Advertisement

ಸುಧಾಕರ್ ಕಾವೂರು ನೇತೃತ್ವದಲ್ಲಿ ಕಾರ್ಯಕರ್ತರು ಮೊದಲಿಗೆ ಕಾವೂರು ಜಂಕ್ಷಣ್‍ನತ್ತ ಸಾಗುವ ಮಾರ್ಗ ಬದಿಯಲ್ಲಿದ್ದ ತ್ಯಾಜ್ಯರಾಶಿಯನ್ನು ತೆಗೆದು ಶುಚಿ ಮಾಡಿದರು; ನಂತರ ಸುತ್ತಮುತ್ತಲಿನ ಜಾಗೆಗಳನ್ನು ಹಸನು ಮಾಡಿದರು.

ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಹಾಗೂ ಸಚಿನ್ ಕಾವೂರು ಜೊತೆಗೂಡಿ ಮತ್ತೊಂದು ಗುಂಪು ಗಾಂಧಿನಗರದಿಂದ ಕೂಳೂರಿನತ್ತ ಸಾಗುವ ರಸ್ತೆಯ ಬದಿಯಲ್ಲಿ ಹಾಕುತ್ತಿದ್ದ ಕಸದ ರಾಶಿಯನ್ನು ತೆರವುಗೊಳಿಸಿದರು. ಹಾಗೂ ಅಲ್ಲಿದ್ದ ಹುಲ್ಲು ಗಿಡಗಂಟಿಗಳನ್ನು ಕತ್ತರಿಸಿದರು. ಬಳಿಕ ಜೆಸಿಬಿ ಸಹಾಯದಿಂದ ಅಲ್ಲಿದ್ದ ಮಣ್ಣುರಾಶಿಯನ್ನು ಸಮತಟ್ಟುಗೊಳಿಸಿದರು. ಈ ಎರಡೂ ಸ್ಥಳಗಳಲ್ಲಿ ಅಲಂಕಾರಿಕ ಗಿಡಗಳನ್ನಿರಿಸಲಾಯಿತು.

Advertisement

ಮೂರನೇ ತಂಡ ಹರೀಶ್ ಪ್ರಭು ಹಾಗೂ ಕೋಡಂಗೆ ಬಾಲಕೃಷ್ಣ ನಾೈಕ್ ಜೊತೆಯಾಗಿ ಗಾಂಧಿನಗರ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ತೊಳೆದು ಬಣ್ಣ ಬಳಿದು ಅಂದಗೊಳಿಸಿದರು. ಮಹೇಶ್ ಡಿ. ಜನರಲ್ ಮೆನೇಜರ್. ಮಂಗಳೂರು ಸ್ಮಾರ್ಟ್ ಸಿಟಿ ಇವರ ಜೊತೆಯಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿಜಿಎಸ್ ಶಾಲೆಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಎ ಜೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಪಿ ಎನ್ ಭಟ್ ನೇತೃತ್ವದಲ್ಲಿ ಸ್ಥಳೀಯ ಮನೆಗಳನ್ನು ಸಂಪರ್ಕಿಸಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು.

Advertisement

ಪುನೀತ್ ಪೂಜಾರಿ ಹಾಗೂ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ವೆನ್‍ಲಾಕ್ ಆಸ್ಪತ್ರೆಯ ಮುಂಭಾಗದ ಆವರಣ ಗೋಡೆಗಳ ಚಿತ್ರಕಲಾಕೃತಿಗಳನ್ನು ತೊಳೆದು, ಪಾಚಿ ತೆಗೆದು ಸ್ವಚ್ಛಗೊಳಿಸಿದರು.

Advertisement

ಸುಧೀರ್ ವಾಮಂಜೂರು ಹಾಗೂ ಸ್ವಯಂಸೇವಕರು ಎಕ್ಕೂರ್ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಆಸನಗಳಿಗೆ ಬಣ್ಣ ಬಳಿದು ಸುಂದರಗೊಳಿಸಿದರು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಪಚ್ಚನಾಡಿ ಭೇಟಿ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರಿನ ಸುಮಾರು 30 ಕಾರ್ಯಕರ್ತರು ಅಧ್ಯಯನ ಹಾಗೂ ಪರಿಸ್ಥಿತಿ ಅವಲೋಕನಕ್ಕಾಗಿ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು. ಬಳಿಕ ಇತ್ತೀಚಿಗೆ ತ್ಯಾಜ್ಯ ಹರಿದು ಮನೆ ತೋಟಗಳನ್ನು ಆಹುತಿ ಪಡೆದ ದೃಶ್ಯವನ್ನು ವೀಕ್ಷಣೆ ಮಾಡಲು ಮಂದಾರ ಪರಿಸರಕ್ಕೂ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಗಂಭೀರತೆಯನ್ನು ಅರಿಯಲು ಸ್ವಚ್ಛ ಮಂಗಳೂರು ಕಾರ್ಯಕರ್ತರು ಪ್ರಯತ್ನಿಸಿದರು. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಉದ್ಭವಿಸದಂತೆ ಯಾವೆಲ್ಲ ಕಾರ್ಯಕ್ರಮಗಳನ್ನು ರೂಪಿಸಬಹುದು ಎನ್ನುವುದರ ಕುರಿತು ಸಮಾಲೋಚನೆ ನಡೆಸಲಾಯಿತು. ರಾಮಕೃಷ್ಣ ಮಿಷನ್ನಿನ ಸ್ವಾಮಿ ಏಕಗಮ್ಯಾನಂದಜಿ ಸ್ವಯಂ ಸೇವಕರೊಂದಿಗೆ ಸ್ಥಳಗಳನ್ನು ಭೇಟಿಮಾಡಿ ಸಮಾಲೋಚನೆಯಲ್ಲಿ ಭಾಗಿಯಾದರು.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

6 hours ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

7 hours ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

1 day ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

1 day ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago