ಬೆಂಗಳೂರು: ಸನಾತನ ಸಂಸ್ಕೃತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳೀಗೆಯ ಅಭ್ಯುದಯಕ್ಕಾಗಿ ಶ್ರೀರಾಮಚಂದ್ರಾಪುರ ಮಠ ವತಿಯಿಂದ ಗೋಕರ್ಣ ಬಳಿ ಆರಂಭಿಸುತ್ತಿರುವ ಸಾರ್ವಭೌಮ ಗುರುಕುಲ (ಬಾಲಕರಿಗೆ) ಮತ್ತು ರಾಜರಾಜೇಶ್ವರಿ ಗುರುಕುಲ (ಬಾಲಕಿಯರಿಗೆ)ಗಳಿಗೆ ಪ್ರವೇಶ ಪಡೆಯಲು ಸರ್ವ ಸಮಾಜದ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನ ಇದಾಗಿದ್ದು, ನಾಲ್ಕನೇ ತರಗತಿಯಿಂದ ಪಿಯುಸಿ ವರೆಗಿನ ಔಪಚಾರಿಕ ಶಿಕ್ಷಣದ ಜತೆಗೆ ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ ಕಲೆಗಳ ಪರಿಚಯ, ಸಂಸ್ಕೃತ, ಭಗವದ್ಗೀತೆ, ಯೋಗ, ವ್ಯಾಯಾಮಕೀ, ಆಯುರ್ವೇದ, ಸದಾಚಾರ, ಮಹಾಪುರುಷರ ಚರಿತ್ರೆ, ಗಾಯನ, ವಾದನ, ನೃತ್ಯ, ಯಕ್ಷಗಾನ, ಚಿತ್ರಕಲೆ, ಗೃಹವಿಜ್ಞಾನ ಹಾಗೂ ಆತ್ಮರಕ್ಷಣೆಯಂಥ ವಿಷಯಗಳನ್ನು ಬೋಧಿಸಿ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಲಭಿಸಲಿರುವ ಉಚ್ಚ ಶಿಕ್ಷಣದ ಪೀಠಿಕೆಯಾಗಿ ತತ್ಪೂರ್ವ ಶಿಕ್ಷಣ ನೀಡುವುದು ಹಾಗೂ ಸನಾತನ ಭಾರತೀಯ ಸಂಸ್ಕಾರದೊಂದಿಗೆ ಸಮಕಾಲೀನ ಶಿಕ್ಷಣ ಒದಗಿಸುವುದು ಈ ಗುರುಕುಲದ ವೈಶಿಷ್ಟ್ಯ.
ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಶ್ರೇಷ್ಠ ಶಿಕ್ಷಣ ತಜ್ಞರಿಂದ ಆನ್‍ಲೈನ್ ಪಾಠ, ನುರಿತ ಮೆಂಟರ್‍ಗಳು, ವಿಷಯತಜ್ಞರ ಜತೆ ಮಕ್ಕಳ ಸಂವಾದ ಸಂವಾದ, ಭಾರತ ಸರ್ಕಾರದ ಎನ್‍ಐಓಎಸ್ ಪಠ್ಯಕ್ರಮದಂತೆ ಪಾಠ, ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ಅರಿವು- ಸಾಮಥ್ರ್ಯ ವೃದ್ಧಿ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯ, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ, ಭವ್ಯ ಪರಂಪರೆಯ ಬಗ್ಗೆ ಸಮಗ್ರ ಅರಿವು, ಭಾರತೀಯ ವಿದ್ಯೆ, ಕಲೆಗಳ ಸಮಗ್ರ ಪರಿಚಯ, ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಕೆ, ಪ್ರಕೃತಿಗೆ ತೆರೆದುಕೊಂಡ ಮುಕ್ತ ಕುಟೀರಗಳಲ್ಲಿ ಕಲಿಕೆಗೆ ಅವಕಾಶವಿದೆ.
ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸದ ಮಹಾಪುರುಷರ ಚರಿತ್ರೆ ಮೂಲಕ ಭವ್ಯ ವ್ಯಕ್ತಿತ್ವ ನಿರ್ಮಿಸುವ ಜೀವನಪಾಠವನ್ನು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳೇ ಸ್ವತಃ ನೆರವೇರಿಸುವರು.
ಸ್ವಾದಿಷ್ಟ, ಆರೋಗ್ಯಕರ, ದೇಹ- ಮನಸ್ಸುಗಳ ವಿಕಾಸಕ್ಕೆ ಪೂರಕವಾದ ಆಹಾರ, ಸರಳ- ಸುವ್ಯವಸ್ಥಿತ ವಸತಿ ಇರುತ್ತದೆ ಹಾಗೂ ಗೋಸಂಸ್ಕøತಿಯ ಪರಿಜ್ಞಾನಕ್ಕಾಗಿ, ಬೆಳೆಯುವ ಮಕ್ಕಳಿಗೆ ಅಮೃತ ಸಮಾನ ದೇಸಿ ಗೋವಿನ ಹಾಲು ಮತ್ತು ಉತ್ಪನ್ನಗಳನ್ನು ಒದಗಿಸಲು ಪುಟ್ಟ ಗೋಸ್ವರ್ಗವೂ ಗುರುಕುಲದ ಅಂಗವಾಗಿರುತ್ತದೆ ಎಂದು ಪ್ರಕಟಣೆ ವಿವರಿಸಿದೆ.
ಕೈಗೆಟುಕುವ ಶಿಕ್ಷಣ ಹಾಗೂ ಭೋಜನ ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಲಾಗದವರಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆ ಇದೆ. ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿವರಗಳಿಗೆ ಸಾರ್ವಭೌಮ/ ರಾಜರಾಜೇಶ್ವರಿ ಗುರುಕುಲಮ್, ಆಂಜನೇಯ ಜನ್ಮಭೂಮಿ, ಕುಟ್ಲೆ, ಅಂಚೆ: ಗೋಕರ್ಣ, ಕುಮಟಾ ತಾಲೂಕು, ಉ.ಕ- 581326 ಸಂಪರ್ಕಿಸಬಹುದು.
ಇ-ಮೇಲ್:gurukulam@srisamsthana.org
ದೂರವಾಣಿ: +91 9449595247.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…