Advertisement
ಕೃಷಿ

ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಸಂಸ್ಥಾಪನಾ ದಿನಾಚರಣೆ

Share

ಪುತ್ತೂರು: ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ತನ್ನ 33 ನೇ ಸಂಸ್ಥಾಪನಾ ದಿನವನ್ನು  ಆಚರಿಸಿತು.

Advertisement
Advertisement
Advertisement
Advertisement

ಈ ಸಂದರ್ಭ  ಕೇಂದ್ರ ಸರ್ಕಾರದಿಂದ ನಿರ್ದೇಶನಾಲಯಕ್ಕೆ ಮಂಜೂರಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕೊಡುವ ಅನುದಾನದ ಯೋಜನೆಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಸಂಜೀವ ಮಠಂದೂರು ಸಾಂಕೇತಿಕವಾಗಿ ಗಿಡ ಕೊಡುವುದರ ಮೂಲಕ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು , ಭಾರತೀಯ ಸಮಾಜದಲ್ಲಿ ಕೃಷಿಯ ಪಾತ್ರ ಮತ್ತು ಬದಲಾಗುತ್ತಿರುವ ದೇಶದ ಕೃಷಿ ಸನ್ನಿವೇಶದ ಬಗ್ಗೆ ಮಾತನಾಡಿದರು.

Advertisement

ಅತಿಥಿಯಾಗಿ ಭಾಗವಹಿಸಿದ ಕೊಚ್ಚಿಯ ಕೊಕೊ ಮತ್ತು ಗೋಡಂಬಿ ಅಭಿವೃದ್ಧಿ ನಿರ್ದೇಶನಾಲಯದ (ಡಿಸಿಸಿಡಿ) ನಿರ್ದೇಶಕ ವೆಂಕಟೇಶ್ ಹುಬ್ಬಳ್ಳಿ, ಗೋಡಂಬಿ ಜನಪ್ರಿಯಗೊಳಿಸುವಿಕೆ ಮತ್ತು ಸಾಂಪ್ರದಾಯಿಕವಲ್ಲದ ಗೋಡಂಬಿ ಬೆಳೆಯುವ ಪ್ರದೇಶಗಳಿಗೆ ಅದರ ಪ್ರದೇಶ ವಿಸ್ತರಣೆಗಾಗಿ ಡಿಸಿಸಿಡಿಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು.

ಕರ್ನಾಟಕದ ಗೇರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಟೇಲ್ಕರ್ ಮಾತನಾಡಿ ದೇಶದ ಗೋಡಂಬಿ ಕೃಷಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ವರ್ಷಗಳಲ್ಲಿ ಮಾಡಿದ ಸಾಧನೆಗಳಿಗಾಗಿ ನಿರ್ದೇಶನಾಲಯವನ್ನು ಅಭಿನಂದಿಸಿದರು.

Advertisement

ಈ ಸಂದರ್ಭದಲ್ಲಿ ಗೋಡಂಬಿ ಕೃಷಿ ಕುರಿತು ಆರು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಕೋಲಾರ ಜಿಲ್ಲೆಯಲ್ಲಿ ಗೋಡಂಬಿ ಬೆಳೆಯುತ್ತಿರುವ ಪ್ರಗತಿಪರ ರೈತ ಕೆ.ನಾಗರಾಜ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ನಬಾರ್ಡ್ ಬ್ಯಾಂಕಿನ ಸಹಾಯಕ ಪ್ರಬಂಧಕರಾದ ಎಸ್. ರಮೇಶ್,  “ರೈತ ಉತ್ಪಾದಕ ಕಂಪನಿಗಳ ರಚನೆಯಲ್ಲಿ ನಬಾರ್ಡ್ನ ಪಾತ್ರ” ಕುರಿತು ಉಪನ್ಯಾಸ ನೀಡಿದರು.

Advertisement

ವಿಟ್ಲದ ರೈತ ಉತ್ಪಾದಕ ಕಂಪನಿ ‘ಪಿಂಗಾರ’ದ ನಿರ್ದೇಶಕರಾದ ರಾಮ್ ಕಿಶೋರ್ ಮಂಚಿ, ಬಾಳೆಹಣ್ಣು ಮತ್ತು ಜಾಕ್ಫ್ರೂಟ್ನಂತಹ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗಾಗಿ ರೈತ ಉತ್ಪಾದಕ ಕಂಪನಿಗಳ ರಚನೆ ಮತ್ತು ನಡೆಸುತ್ತಿರುವ ಅನುಭವಗಳನ್ನು ಹಂಚಿಕೊಂಡರು.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ  ಶಿವಪ್ರಕಾಶ್,  ರೈತ ಉತ್ಪಾದಕ ಕಂಪನಿ (ಎಫ್ಪಿಒ)ಗಳನ್ನು ರಚಿಸುವುದಕ್ಕಾಗಿ ರೈತರಿಗೆ ನೀಡುವ ಪ್ರೋತ್ಸಾಹದ ಕುರಿತು ಮಾಹಿತಿ ಕೊಟ್ಟರು.

Advertisement

ಈ ಸಂದರ್ಭದಲ್ಲಿ ದೇವಿಪ್ರಸಾದ್ ಕಲ್ಲಾಜೆ, ಪುಣಚದ ಗೇರು ಕೃಷಿಕ ಅವರು ತಮ್ಮ ರೈತ ಸ್ನೇಹಿತರೊಂದಿಗೆ ಎಫ್ಪಿಒ ರಚನೆ ಮಾಡುವಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಗೇರು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಎಂ.ಜಿ.ನಾಯಕ್ ಸ್ವಾಗತಿಸಿ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |

ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ  ಕಾಡ್ಗಿಚ್ಚು ಪ್ರಕರಣ ಇದಾಗಿದೆ.…

1 day ago

ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ

ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…

1 day ago

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |

ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…

2 days ago

ಭಾರತಕ್ಕೆ ಹುರಿದ ಅಡಿಕೆ ಆಮದು | ತಕ್ಷಣವೇ ಕ್ರಮ ಕೈಗೊಳ್ಳಲು ಕ್ಯಾಂಪ್ಕೊ ಒತ್ತಾಯ|

ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…

2 days ago

ಪ್ಲಾಸ್ಟಿಕ್‌ನಿಂದ ಪೇಪರ್‌ ಕಡೆಗೆ ಬದಲಾಯಿಸುವುದು ಪರಿಸರಕ್ಕೆ ಉತ್ತಮವೇ..?

ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…

2 days ago

ಚಿತ್ರದುರ್ಗ | ತುಂಬಿದ ವಾಣಿ ವಿಲಾಸ ಜಲಾಶಯ | 30 ಸಾವಿರ ಎಕರೆಗೆ ನೀರಿನ ಸೌಲಭ್ಯ

115 ವರ್ಷಗಳ ಇತಿಹಾಸ ಇರುವ  ಹಾಗೂ ರಾಜ್ಯದಲ್ಲಿ  ನಿರ್ಮಾಣವಾದ  ಮೊದಲ ಜಲಾಶಯ ವಾಣಿವಿಲಾಸ…

2 days ago