ರುಚಿಯ ವೈವಿಧ್ಯತೆ ಉಣ ಬಡಿಸಿದ ತಿಂಡಿಮೇಳ

July 22, 2019
9:00 AM

ಸುಳ್ಯ: ಎಡೆ ಬಿಟ್ಟು ಎಡೆ ಬಿಟ್ಟು `ಧೋ’ ಎಂದು ಸುರಿಯುವ ಮಳೆಯ  ನಡುವೆ ರುಚಿಯ ವೈವಿಧ್ಯತೆಯನ್ನು ಉಣಬಡಿಸಿದ ಬಿಸಿ ಬಿಸಿ ತಿಂಡಿ ತಿನಿಸುಗಳು ನೆರೆದ ನೂರಾರು ಮಂದಿಯ ಬಾಯಿಯನ್ನು ಸಿಹಿಯಾಗಿಸಿತು….!

Advertisement

ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಹಮ್ಮಿಕೊಂಡ ತಿಂಡಿ ಮೇಳವು ಸುಳ್ಯದ ಜನತೆಗೆ ವೈವಿದ್ಯಮಯ ಖಾದ್ಯಗಳ ರುಚಿಯ ವಿನೂತನ ಅನುಭವವನ್ನು ಕೊಡ ಮಾಡಿತ್ತು. ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಮಾಡುವ ವೈವಿಧ್ಯಮಯ ತಿಂಡಿಗಳ ರುಚಿಗಳು ಎಲ್ಲರ ಬಾಯನ್ನೂ ಸಿಹಿಯಾಗಿಸಿ ತಮ್ಮ ಅಡುಗೆಯ ನೈಪುಣ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಮತ್ತು ಕಲಿಸಿಕೊಡಬೇಕು ಎಂಬ ಉದ್ದೇಶದಿಂದ ತಿಂಡಿ ಮೇಳವನ್ನು ಏರ್ಪಡಿಸಲಾಗಿತ್ತು. ಶಿವಳ್ಳಿ ಸಂಪನ್ನವು ಪ್ರತಿ ವರ್ಷ ತಿಂಡಿ ಮೇಳವನ್ನು ಏರ್ಪಡಿಸುವುದರ ಮೂಲಕ ಸಾರ್ವಜನಿಕರ ಬಾಯಿಗೆ ರುಚಿಯ ವೈವಿಧ್ಯತೆಯನ್ನು ಉಣ ಬಡಿಸುತ್ತಾರೆ. ಸುಳ್ಯದ ಪಯಸ್ವಿನಿ ತೀರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಏರ್ಪಡಿಸಿದ ತಿಂಡಿ ಮೇಳದಲ್ಲಿ ಸುಮಾರು 26 ಕ್ಕೂ ಅಧಿಕ ಕೌಂಟರ್ ಗಳ ಮೂಲಕ 32 ವಿಧದ ತಿಂಡಿಗಳನ್ನು ಪ್ರದರ್ಶಿಸಿ ವಿತರಿಸಲಾಯಿತು. ಒಂದೊಂದು ಕೌಂಟರ್ ನಲ್ಲಿಯೂ ಒಂದೊಂದು ಕುಟುಂಬದವರು ತಮ್ಮದೇ ಆದ ವಿಶೇಷ ತಿಂಡಿಗಳನ್ನು ಮಾಡಿ ಪ್ರದರ್ಶಿಸಿ ಉಣ ಬಡಿಸಿದರು. ಅದರ ತಯಾರಿಗೆ ಬಳಸುವ ವಸ್ತುಗಳು ಮತ್ತು ವಿಧಾನವನ್ನು ವಿವರಿಸಿ ಹೇಳುತ್ತಿದ್ದರು. ಪ್ರಾಕೃತಿಕವಾಗಿ ಸಿಗುವ ಫಲವಸ್ತುಗಳಾದ ಹಲಸು, ಬಾಳೆ ಹಣ್ಣು ಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದ ಹೈಲೈಟ್ಸ್ ಆಗಿತ್ತು.

ಹಲಸಿನ ಹಣ್ಣು ಮತ್ತು ಕಾಯಿಯಿಂದ ಮಾಡಲಾದ ತಿಂಡಿಗಳು, ಕರಿದ ತಿನಿಸುಗಳು, ಹೆಸರು ಬೇಳೆ ಪಂಚಕಜ್ಜಾಯ, ಮೆಂತೆ ಸೊಪ್ಪು ಫಲವು, ರಾಗಿ ಹಾಲು ಬಾಯಿ, ಮಾವಿನಕಾಯಿ ಪಾನಕ, ಎಲೆ ವಡೆ, ಮರಕೆಸು ಪತ್ರೊಡೆ, ಕಾರಕಡ್ಡಿ, ಕಾರ ಪೊಂಗಲ್, ಪತ್ರೊಡೆ, ಕಸಿ ಹಲಸು, ಗೋಬಿ ಮಂಚೂರಿ, ಬೀಟ್‍ರೋಟ್ ಹಲ್ವಾ, ಮಸಾಲೆ ಪುರಿ, ಬೇಲ್ ಪುರಿ, ಪಾನಿ ಪೂರಿ, ಬಿಸಿ ಬೇಳೆ ಬಾತ್, ಬೇಬಿ ಕಾರ್ನ್ ಮಂಚೂರಿ, ನುಚ್ಚಿನ ಉಂಡೆ, ಹಲಸಿನ ಅಪ್ಪ, ಪುಳಿಯೊಗರೆ, ಗೋಳಿಬಜೆ, ಕೋಡುಬಳೆ ಅವಲಕ್ಕಿ, ಮೊಸರನ್ನ, ವಡೆ, ಕ್ಯಾಬೇಜ್ ಬಜೆ, ಈರುಳ್ಳಿ ಬಜೆ, ವಿವಿಧ ರೀತಿಯ ಫಲವುಗಳು, ಐಟಂಗಳು, ಪೋಡಿ ಮತ್ತಿತರರ ತಿಂಡಿ ತಿನಿಸುಗಳು ಜನರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತ್ತು. ಕೆಲವು ಕೌಂಟರ್ ಗಳಲ್ಲಿ ಸ್ಥಳದಲ್ಲಿಯೇ ತಯಾರಿಸಿದ ಬಿಸಿ ಬಿಸಿ ತಿಂಡಿಗಳನ್ನು ವಿತರಿಸಲಾಯಿತು. ಒಂದೊಂದು ಕುಟುಂಬದವರೂ ಒಂದೊಂದು ಕೌಂಟರ್ ನಲ್ಲಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡಿ ತಮ್ಮ `ಕೈಚಳ’ಕವನ್ನು ತೋರ್ಪಡಿಸಿದರು. ತಿಂಡಿಯ ಹೆಸರನ್ನು ಮತ್ತು ತಯಾರಿಸಲು ಬಳಸುವ ವಸ್ತುಗಳ ಹೆಸರನ್ನು ಪ್ರದರ್ಶಿಸಲಾಗಿತ್ತು. ತಿಂಡಿ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು. ಶಿವಳ್ಳಿ ಸಂಪನ್ನದ ವತಿಯಿಂದ ಪ್ರತಿ ವರ್ಷವೂ ವೈವಿಧ್ಯಮಯ ತಿಂಡಿಮೇಳಗಳನ್ನು ಸಂಘಟಿಸುವ ಮೂಲಕ ಶಿವಳ್ಳಿ ಸಂಪನ್ನದ ಎಲ್ಲಾ ಕುಟುಂಬಗಳು ಒಟ್ಟು ಸೇರಿ ಸಂಭ್ರಮಿಸುತ್ತಾರೆ. ವಸಂತಿ ಪಡ್ಡಿಲ್ಲಾಯ ತಿಂಡಿ ಮೇಳವನ್ನು ಉದ್ಘಾಟಿಸಿದರು.

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ
ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |
March 26, 2025
7:06 AM
by: The Rural Mirror ಸುದ್ದಿಜಾಲ
ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
March 26, 2025
6:49 AM
by: The Rural Mirror ಸುದ್ದಿಜಾಲ
ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ
March 26, 2025
6:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group