ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ವತಿಯಿಂದ ಅಧ್ಯಯನ ಪ್ರವಾಸ

October 21, 2019
12:30 PM

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರಾಯೋಜಿತ ರೇಡಿಯೋ ಪಾಂಚಜನ್ಯ 90.8 ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಹೆಚ್.ಡಿ. ಕೋಟೆಯ ಸರಗೂರಿನ ಜನಧ್ವನಿ ಸಮುದಾಯ ಬಾನುಲಿ ಕೇಂದ್ರಕ್ಕೆ ಅಕ್ಟೋಬರ್ 19ರಂದು ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.

Advertisement
Advertisement

ಅಧ್ಯಯನ ಸಂದರ್ಭದಲ್ಲಿ ಜನಧ್ವನಿ ಬಾನುಲಿ ಕೇಂದ್ರದಲ್ಲಿನ ಕಾರ್ಯಕ್ರಮ ರೂಪುರೇಷೆಗಳ ಬಗೆಗೆ ಚರ್ಚೆ ನಡೆಸಲಾಯಿತು. ಸಮುದಾಯದ ಮಂದಿಯನ್ನು ರೇಡಿಯೋದೆಡೆಗೆ ಕರೆತರುವಲ್ಲಿನ ಆರಂಭಿಕ ದಿನಗಳ ಸವಾಲುಗಳು, ಮಾಧ್ಯಮ ಲೋಕಕ್ಕೆ ತೆರೆದುಕೊಳ್ಳದಿರುವವರನ್ನು ಬಾನುಲಿಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿನ ಪ್ರಾಯೋಗಿಕ ಸಮಸ್ಯೆಗಳ ಬಗೆಗೆ ವಿಶ್ಲೇಷಣೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಹಸಂಯೋಜಕ ಶಿವಕುಮಾರ್ ಸಮುದಾಯ ಬಾನುಲಿ ಎನ್ನುವುದು ಸಮಾಜದ ಅಭಿವೃದ್ಧಿಗೆ ಪೂರಕವಾದದ್ದು. ಜನರ ಒಳಗೊಳ್ಳುವಿಕೆ ಇಲ್ಲಿ ಬಹಳ ಮುಖ್ಯ. ಬಾನುಲಿ ಕೇಂದ್ರದ ಆರಂಭಿಕ ದಿನಗಳಲ್ಲಿ ಕಾರ್ಯಕ್ರಮ ರೂಪಿಸುವಿಕೆ ಬಹುದೊಡ್ಡ ಸವಾಲಾಗಿ ಭಾಸವಾಗುತ್ತದೆ. ಆದರೆ ಕ್ರಮೇಣ ಎಲ್ಲವೂ ಸುಲಭಸಾಧ್ಯವಾಗುತ್ತದೆ ಎಂದು ನುಡಿದರು.

ಅಧ್ಯಯನ ಪ್ರವಾಸದಲ್ಲಿ ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿ ಕಾರ್ಯದರ್ಶಿ ವಿಜಯ ಕೃಷ್ಣ, ಕೋಶಾಧಿಕಾರಿ ಪ್ರಕಾಶ್ ಶೆಣೈ, ಸದಸ್ಯ ನಾ.ಕಾರಂತ ಪೆರಾಜೆ, ಕಾರ್ಯಕ್ರಮ ಸಂಯೋಜಕ ಡಾ.ಶ್ರೀಧರ ಎಚ್.ಜಿ, ನಿಲಯ ಸಂಯೋಜಕಿ ಶಿಲ್ಪ, ನಿಯೋಜಿತ ಸಂಯೋಜಕಿ ತೇಜಸ್ವಿ, ತಾಂತ್ರಿಕ ಸಹಾಯಕ ಪ್ರಶಾಂತ್, ಕಲ್ಲಡ್ಕ ಶ್ರೀರಾಮ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ್ ಕಲ್ಲಡ್ಕ, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಂಯೋಜಕಿ ಡಾ.ವಿಜಯ ಸರಸ್ವತಿ, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕ ಭರತ್‍ರಾಜ್ ಕರ್ತಡ್ಕ, ಇಂಗ್ಲಿಷ್ ಉಪನ್ಯಾಸಕ ಗಣೇಶ್ ಪ್ರಸಾದ್, ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ, ವಿವೇಕಾನಂದ ಕಾನೂನು ಕಾಲೇಜಿನ ಉಪನ್ಯಾಸಕಿ ಸಂಗೀತಾ, ವಿವೇಕಾನಂದ ಬಿ.ಎಡ್ ಕಾಲೇಜಿನ ಉಪನ್ಯಾಸಕಿ ಡಾ.ಶೋಭಿತಾ ಸತೀಶ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಭಾಷ್ ಪಟ್ಟಾಜೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷಾಧಿಕಾರಿ ವೆಂಕಟೇಶ್, ವಿವೇಕಾನಂದ ಕಾಲೇಜಿನ ಎಂ.ಸಿ.ಜೆ ವಿಭಾಗದ ಪ್ರಾಯೋಗಿಕ ಯೂಟ್ಯೂಬ್ ವಾಹಿನಿ ವಿಕಸನ ಟಿವಿ ಹಾಗೂ ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋದ ತಾಂತ್ರಿಕ ಸಹಾಯಕ ಸಂತೋಷ್‍ಕುಮಾರ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ
May 8, 2024
9:54 PM
by: The Rural Mirror ಸುದ್ದಿಜಾಲ
ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |
May 8, 2024
1:55 PM
by: ದ ರೂರಲ್ ಮಿರರ್.ಕಾಂ
Karnataka Weather | 08-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |
May 8, 2024
11:07 AM
by: ಸಾಯಿಶೇಖರ್ ಕರಿಕಳ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror