ರೈತರಿಗೆ ಕಡಿಮೆ ದರದಲ್ಲಿ ರಸ ಗೊಬ್ಬರ ಪೂರೈಕೆಗೆ ಕಾಂಗ್ರೆಸ್ ಒತ್ತಾಯ

June 20, 2019
3:00 PM

ಸುಳ್ಯ: ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದರೂ ರಸಗೊಬ್ಬರ ದರವನ್ನು ದುಪ್ಪಟ್ಟು ಏರಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ಸಾಧನೆ. ರೈತರ ಬಗ್ಗೆ ಸರಕಾರಕ್ಕೆ ನಿಜವಾದ ಕಾಳಜಿಯಿದ್ದರೆ ರಸಗೊಬ್ಬರಗಳ ದರ ಕಡಿಮೆ ಮಾಡಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Advertisement
Advertisement
Advertisement
Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಕರಾವಳಿ ಭಾಗದವರೇ ಆದ ರಸಗೊಬ್ಬರ ಸಚಿವರು ರೈತರಿಗೆ ಅತೀ ಅಗತ್ಯವಾಗಿರುವ ರಸಗೊಬ್ಬರವನ್ನು ಕಡಿಮೆ ದರದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿದೇಶಿ ಅಡಿಕೆ ಆಮದಾಗುತ್ತಿರುವ ಕಾರಣ ದೇಶದ ಅಡಿಕೆಗೆ ನಿರೀಕ್ಷಿತ ದರ ದೊರೆಯುತ್ತಾ ಇಲ್ಲ. ಅಡಕೆ ಬೆಲೆ ಕುಸಿತದಿಂದ, ಹಳದಿ ರೋಗದ ಬಾದೆಯಿಂದ ಅಡಿಕೆ ಕೃಷಿಕರು ಸಂಪೂರ್ಣ ಧೃತಿಗೆಟ್ಟಿದ್ದಾರೆ. ಆದುದರಿಂದ ಕರಾವಳಿಯ ಸಂಸದರು ಅಡಿಕೆ ಕೃಷಿಕರ ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಂತೆ ರೈತರ ಖಾತೆಗೆ ಹಣ ಸಂದಾಯ ಆಗುತ್ತಾ ಇದ್ದರೂ ಹಣ ಬರುತ್ತಾ ಇಲ್ಲ ಎಂದು ಅಪಪ್ರಚಾರ ಮಾಡುವ ಬಿಜೆಪಿಗರಿಗೆ ಮನುಷ್ಯತ್ವ ಇಲ್ಲ ಎಂದು ಅವರು ಟೀಕಿಸಿದರು.
ರೈಲ್ವೇ, ಬಿ ಎಸ್ ಎನ್ ಎಲ್, ಆಸ್ಪತ್ರೆಗಳ ಖಾಸಗೀಕರಣ ಮಾಡುವ ಹುನ್ನಾರ ನಡೆಯುತಿದೆ. ಕಾಂಗ್ರೆಸ್ ಇದನ್ನು ವಿರೋಧಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ನ.ಪಂ‌.ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕೇರಿ, ಶರೀಫ್ ಕಂಠಿ, ಧೀರಾ ಕ್ರಾಸ್ತಾ  , ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಂಭಮೇಳ | ಯಮುನೆಯ ತಟದಲ್ಲಿ ಸಾಗಿದಾಗ ಖುಷಿಯಾಯಿತು…!
March 7, 2025
11:26 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಹೋಳಿ ಹಬ್ಬದ ದಿನಗಳಲ್ಲಿ ಹೆಚ್ಚು ಪ್ರಭಾವಿತವಾಗುವ ರಾಶಿಗಳು ಯಾವುವು..?
March 7, 2025
7:00 AM
by: The Rural Mirror ಸುದ್ದಿಜಾಲ
ಭೂಮಿ,ಕಾವೇರಿ 2.0 ತಂತ್ರಾಂಶ ಲೋಪದೋಷ ನಿವಾರಣೆಗೆ ಕ್ರಮ
March 6, 2025
11:05 PM
by: The Rural Mirror
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿ
March 6, 2025
10:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...