ಸುಳ್ಯ: ರೈತರ ಕೃಷಿ ಭೂಮಿಗೆ ಸಂಬಂಧ ಪಟ್ಟಂತೆ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದಾಗಿದ್ದರೆ ಮಾತ್ರ ಸರಕಾರದ ಸೌಲಭ್ಯಗಳು ರೈತರಿಗೆ ದೊರೆಯುತ್ತದೆ. ಸರ್ಕಾರದ ಇಲಾಖೆಗಳಾದ ತೋಟಗಾರಿಕೆ, ಕೃಷಿ ಇಲಾಖೆಯಿಂದ ದೊರೆಯುವ ಬೀಜಗಳು, ವಿವಿಧ ಗಿಡಗಳು ರೋಗ ನಿರೋಧಕ ಔಷಧಗಳು ವಿವಿಧ ಗೊಬ್ಬರಗಳು ಸಹಾಯಧನದಲ್ಲಿ ಸಿಗುವಂತಹ ವಿವಿಧ ಕೃಷಿ ಉಪಕರಣಗಳು ಹೀಗೆ ಇತ್ಯಾದಿ ಸೌಲಭ್ಯಗಳು ರೈತನ ಸಾಗುವಳಿ ಭೂಮಿಯ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದಾಗಿದ್ದರೆ ಮಾತ್ರ ದೊರೆಯುತ್ತದೆ. ಆದರೆ ಭೂಮಿಕೇಂದ್ರದಲ್ಲಿ ಆರ್.ಟಿ.ಸಿ.ಯಲ್ಲಿ ಸೂಕ್ತ ರೀತಿಯಲ್ಲಿ ಬೆಳೆ ದಾಖಲು ಮಾಡದೇ ಸಮಸ್ಯೆ ಎದುರಾಗುತ್ತಿದೆ. ಸೌಲಭ್ಯ ಪಡೆಯಬೇಕಾದರೆ ರೈತ ಪ್ರತಿ ಸಲ ಗ್ರಾಮಕರಣಿಕರ ಬಳಿ ಹೋಗಿ ಬೆಳೆ ನಮೂದಿಸಬೇಕಾಗುತ್ತದೆ. ಇದರಿಂದ ರೈತನಿಗೂ – ಅಧಿಕಾರಿಗಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ರೈತರ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದು ಒಮ್ಮೆ ಮಾಡಿದರೆ ಮತ್ತೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕೆಂದು ಪದ್ಮನಾಭ ನೂಜಾಲುರವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಮನವಿಯ ಪ್ರತಿಯನ್ನು ಜು.23 ರಂದು ಪದ್ಮನಾಭರು ಸುಳ್ಯ ತಹಶೀಲ್ದಾರ್‌ರಿಗೂ ನೀಡಿದ್ದಾರೆ.
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
View Comments
without crop/plants in land how he got land from GOvt. ? Even it has grants from govt. through "Akrama Sakrama". but there is no entry of Crope!? .