ಅನುಕ್ರಮ

ರೋಗವೂ – ರೋಡೂ ಒಂದೇ ಅಲ್ಲ…. ಸ್ವಲ್ಪ ಯೋಚಿಸಿ ನೋಡಿ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಲ್ಲವೂ ಕೃಷಿಯೇ….!

Advertisement

ಇಂದಿನ ದಿನಗಳಲ್ಲಿ ಯಾವುದರಿಂದ ಆದಾಯ ಪಡೆಯಲಿಕ್ಕಾಗುತ್ತದೋ  ಅದೆಲ್ಲವೂ ಕೃಷಿಯೇ ಆಗಿದೆ…..!.  ಕೃಷಿಯನ್ನು ಕೃಷಿಯೆಂದೇ ನಂಬುವವರು ಇನ್ನೂ ಅಲ್ಲೇ ಇದ್ದಾರೆ. ಯಾವಾಗ ಕೃಷಿಯನ್ನು  ವ್ಯವಹಾರದ ದೃಷ್ಟಿಯಿಂದ ನಿಭಾಯಿಸಲು ಸಮರ್ಥರಾಗುತ್ತೇವೋ‌ ಅಂದು ಗೆಲುವು ನಿಶ್ಚಿತ. ಒಂದೊಂದು ಹೆಜ್ಜೆ ಮೇಲೆ ಹತ್ತ ತೊಡಗುತ್ತೇವೆ.  ನಮ್ಮ ಪ್ರತಿಯೊಂದು ಖರ್ಚಿನ ಮೇಲು ಹಿಡಿತವಿರುತ್ತದೆ. ಯಾಕೆಂದರೆ ಅಲ್ಲಿ ಬೆವರಿನ ಹನಿಯಿದೆ, ಪರಿಶ್ರಮದ ಪ್ರತಿಫಲವಿದೆ. ಒಂದು ರೂಪಾಯಿ ಖರ್ಚು ಮಾಡಲೂ  ಯೋಚಿಸುತ್ತೇವೆ. ವ್ಯರ್ಥವಾಗಿ  ಕಳೆಯಲು  ಮನಸೇ ಬಾರದು.

ಈಗ  ಹೆಚ್ಚು ಪರಿಶ್ರಮವಿಲ್ಲದೆ  ಶ್ರೀಮಂತರಾಗುವ ವೃತ್ತಿಯೆಂದರೆ ರಾಜಕಾರಣ. ಹೀಗೆ ಹೇಳಬಾರದು ಎಂದು ಅಂದುಕೊಂಡಿದ್ದೆವು. ಆದರೆ ಇಂದಿನ ಪರಿಸ್ಥಿತಿ ಹಾಗಾಗಿದೆ. ಸಜ್ಜನ ರಾಜಕಾರಣಿಗಳು ಬದಿಗೆ ಸರಿಯುತ್ತಾರೆ, ಸರಿಸುತ್ತಾರೆ. ಅಭಿವೃದ್ಧಿ ಕಾಳಜಿ ಇರುವವರು  ದೂರವಾಗುತ್ತಾರೆ, ದೂರವಾಗಿಸುತ್ತಾರೆ. ಏಕೆಂದರೆ ರಾಜಕಾರಣದಲ್ಲಿ ಒಮ್ಮೆ ಆದಾಯದ ರುಚಿ  ಸಿಕ್ಕರೆ ಸಾಕು ಅದು ರೋಡು ಸರಿ-ತೋಡೂ ಸರಿ. ಅದು ರೋಗವಾದರೂ ಸರಿ..!. ಎಲ್ಲಿ ದುಡ್ಡು ಮಾಡಲಾಗುತ್ತದೋ ಅಲ್ಲಿಗೆ ದೊಡ್ಡ ದೊಡ್ಡ ಬಜೆಟ್…!‌ ದೊಡ್ಡ ಅನುದಾನ…!. ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ.  ಇದಕ್ಕೆ ಕಣ್ಣೆದುರೇ ದೃಷ್ಟಾಂತವಿದೆ. ನಮ್ಮ ಊರು ಕೇರಿಗಳಲ್ಲಿರುವ ಮಾರ್ಗಗಳು  ಅವಗಾವಾಗ ಹೊಸತಾಗುತ್ತದೆ, ಕಾಂಕ್ರೀಟ್‌ ಆಗುತ್ತದೆ. ಮೇಲ್ಮೈ ಗೆ ಡಾಮಾರು  ಹೊದ್ದು  ನುಣುಪಾಗಿ ಮಿಂಚುತ್ತಿರುತ್ತದೆ.   ಒಂದು ಮಳೆಗಾಲ ಕಳೆಯುವುದರೊಳಗೆ ಮತ್ತೆ ಅದೇ ಪಾಡು.      ಅಲ್ಲಲ್ಲಿ  ಗುಂಡಿಗಳು ಕಾಣಿಸಿಕೊಳ್ಳುತ್ತವೆ.    ನೀರು ತುಂಬಿ ರೋಡು ಯಾವುದು , ಗುಂಡಿ ಯಾವುದು ಎಂಬ ಅರಿವು‌ ಆಗದಷ್ಟು ಹಾಳಾಗಿ ಬಿಡುತ್ತದೆ. ಸರಿಯಾಗಿ ಮಾಡಿದರೆ  ಆದಾಯದ ಮೂಲಕ್ಕೆ ಎಲ್ಲಿ ಧಕ್ಕೆ  ಬರುತ್ತದೋ ಎಂದು ಕಳಪೆ ಕಾಮಗಾರಿಗೆ ಅನುಮತಿ ಕೊಟ್ಟು ಪ್ರತೀ ವರ್ಷ  ದುಡ್ಡು ಮಾಡುವ ಅಂದಾಜು. ದೊಡ್ಡ ಮಟ್ಟದಲ್ಲಿ ನಡೆಯುವ ಕೊಡು ಕೊಳ್ಳುವ ಮಾತುಕಥೆಗಳು ಜನಸಾಮಾನ್ಯರ ಗಮನಕ್ಕೂ ಬಾರದು, ಅರ್ಥವೂ ಆಗದು. ಇದನ್ನು ಪ್ರಶ್ನಿಸುವ ಸಜ್ಜನ ರಾಜಕಾರಣಿ ಬೇಕಾಗಿಲ್ಲ, ಇದ್ದರೂ ಅಂತಹವರನ್ನು  ಬದಿಗೆ ಸರಿಸಿ ಗಾಳಿ ತೆಗದುಬಿಡುತ್ತಾರೆ… ! ಬಿಡಿ ಆ ಸಂಗತಿ.

ಅತಿವೃಷ್ಟಿಯಾದರೂ ಅನಾವೃಷ್ಟಿಯಾದರೂ ಲಾಭ ಇಂತಹದ್ದೇ ರಾಜಕಾರಣಿಗಳಿಗೆ. ಇವರಿಗೆಲ್ಲಾ ರೋಗವೂ ಒಂದೇ, ರೋಡು ಒಂದೇ.
ದುಡ್ಡು ಮಾಡುವುದನ್ನೇ ಉದ್ಯೋಗ ಮಾಡಿಕೊಂಡವರು  ಕೊರೋನಾವನ್ನೂ ಬಿಟ್ಟಾರೆಯೇ ? ಆರೋಪ ಬರುತ್ತದೆ ಅದನ್ನು ಅಲ್ಲಗಳೆಯಲು ದಾರಿಗಳೇ ಇಲ್ಲದಷ್ಟು ವ್ಯವಸ್ಥೆ ಹದಗೆಟ್ಟಿದೆ…!. ದುಬಾರಿಯಾದ   ಚಿಕಿತ್ಸೆಯನ್ನು ಒತ್ತಾಯದಿಂದ ಜನಸಾಮಾನ್ಯರ ಮೇಲೆ ಹೇರುತ್ತಾರೆ.
ಕೈ ಗೆಟುಕುವ ದರದಲ್ಲಿ  ಆಯುರ್ವೇದ ಔಷಧಿಗಳಿದ್ದರೂ ಚಿಕಿತ್ಸೆಗೆ ಅನುಮತಿ ಕೊಡದೆ ಸತಾಯಿಸಲು  ಏನು ಕಾರಣ? ನೂರು ಇನ್ನೂರು ರೂಪಾಯಿಯಲ್ಲಿ ಚಿಕಿತ್ಸೆ  ಒದಗಿಸುವ ಅವಕಾಶವಿದ್ದರೂ ನಿರಾಕರಣೆಗೇನು ಕಾರಣ?  ಅದೇ  ಸಾವಿರಾರು ರೂಪಾಯಿ ವೆಚ್ಚದ ಔಷಧಿಗಳಿಗೆ ಹೇಗೆ ಸುಲಭದಲ್ಲಿ  ಅನುಮತಿ ಏಕೆ?. ನಾಮಕಾವಸ್ಥೆಯ ಪ್ರಾಯೋಗಿಕ ಪರೀಕ್ಷೆಗಳ ನಂತರ ಮಾರುಕಟ್ಟೆ  ಪ್ರವೇಶಿಸಲ್ಪಡುತ್ತವೆ…!  ವೈದ್ಯರು ರೋಗಿಗಳಿಗೆ  ಈ ಔಷಧಿಗಳನ್ನು ‌ ಸೂಚಿಸುತ್ತಾರೆ. ವೈದ್ಯರು  ಕೊಟ್ಟ ಔಷಧಿಗಳನ್ನು ಜನಸಾಮಾನ್ಯರು ಬಹಳ ನಂಬಿಕೆಯಿಂದ ಸ್ವೀಕರಿಸುತ್ತಾರೆ. ಆ ಮಾತ್ರೆಗಳಲ್ಲಿ ಏನಿದೆ…?  ಅಡ್ಡ ಪರಿಣಾಮಗಳೇನು ಒಂದನ್ನೂ ಯೋಚಿಸುವುದಿಲ್ಲ. ಕೆಲವು ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಒಂದು ಮದ್ದಿನೊಂದಿಗೆ ಹಲವು ಅಡ್ಡ ಪರಿಣಾಮಗಳು ಉಚಿತವಾಗಿ ನಮ್ಮ ಶರೀರಕ್ಕೆ ಸಿಗುತ್ತವೆ. ಉದಾಹರಣೆಗೆ ನೋವು ನಿವಾರಕಗಳ ಅಧಿಕ ಸೇವನೆ  ನಮ್ಮ ಕಿಡ್ನಿ ಯನ್ನು ಹಾಳುಗೆಡವುತ್ತದೆ. Pain killer is kidney killer ಎಂದೇ ಪರಿಚಿತ. ಆದರೆ  ಈ ವಿಷಯಗಳನ್ನೆಲ್ಲಾ ಯಾರೂ ಯೋಚಿಸಲು ಹೋಗುವುದಿಲ್ಲ.  ಇಂದು ಹಳ್ಳಿಗಳಲ್ಲಿ ಇರುವ ವೈದ್ಯ ರು ತಮ್ಮ ಕ್ಲೀನಿಕ್ ಮುಚ್ಚಿದರೆ ಅಥವಾ ಕೆಲವು ಗಂಟೆಗಳ ಕಾಲ ತೆರೆದಿರುತ್ತಾರಷ್ಟೆ. ಸಾಮಾನ್ಯ ಶೀತ ,ಜ್ವರಕ್ಕೂ ಮದ್ದು ಕೊಡಲು ಅನುಮತಿ ಈಗ ಅವರಿಗಿಲ್ಲ. ಸಣ್ಣ ಶೀತ, ಜ್ವರಕ್ಕೂ ಕೋವಿಡ್ ಕೇಂದ್ರಗಳಿಗೆ ಓಡಬೇಕು. ಯಾಕೆ ಹೀಗೆ ವ್ಯವಸ್ಥಿತವಾಗಿ ಜನರನ್ನು ಹೆದರಿಸಲಾಗುತ್ತಿದೆಂದು  ಅರ್ಥವಾಗುತ್ತಿಲ್ಲ. ಮಾಧ್ಯಮ ಗಳು ಶಿಸ್ತು ಬದ್ಧವಾಗಿ ಜಿದ್ಧಿಗೆ ಬಿದ್ಧಂತೆ ಪ್ರಚಾರಕ್ಕೆ ಇಳಿದಿವೆ.
ತಲೆತಲಾಂತರದಿಂದ ನಾವು ಬಳಸಿಕೊಂಡು ಬಂದಿರುವ ಔಷಧಿಗಳನ್ನು ಕೇವಲವಾಗಿ ಬಿಂಬಿಸುವುದೇಕೇ?   ನಮಗೆ ನಮ್ಮದು ಎಂಬ ಹೆಮ್ಮೆ ಏಕಿಲ್ಲ? ಬಳಸುವ ವಿಷಯದಲ್ಲಿ ನಾವೇಕೆ ಧೈರ್ಯ ತೋರಿಸುತ್ತಿಲ್ಲ?  ನಮಗೇಕೆ ನಮ್ಮ ಆಯುರ್ವೇದದ ಕುರಿತು ನಂಬಿಕೆಯಿಲ್ಲ. ಎಲ್ಲವನ್ನೂ ‌ಆದಾಯದ ದೃಷ್ಟಿ ಕೋನದಿಂದ ನೋಡುವವರಿಗೆ ಇದೆಲ್ಲಿ ಅರ್ಥವಾಗಬೇಕು.   ಅನ್ನ, ನೀರು , ವಿದ್ಯೆ, ಬದುಕು ಕೊಟ್ಟ ನೆಲದ ಋಣದ ಯೋಚನೆಯಿದೆಯೇ?   ಕಣ್ಣ ಮುಂದೆ ದುಡ್ಡು‌ ಕುಣಿಯುತ್ತಿದ್ದರೆ  ಬೇರೆ ಎಲ್ಲಾ ಗೌಣ. ಇದೆಲ್ಲಾ  ಯಾವುದೋ ಸಿದ್ಧಾಂತದ  ಕೃಪಾಪೋಷಿತ   ವ್ಯವಸ್ಥೆಯ ಸಂಚೆಂದು ಅನ್ನಿಸುವುದಿಲ್ಲವೇ?
ನಮ್ಮ ನಾಯಕ ನಿಸ್ವಾರ್ಥ ಮನಸಿನಿಂದ ನನ್ನ , ಜನ, ನನ್ನ ದೇಶವೆಂದು ವಿಶ್ರಾಂತ ರಹಿತನಾಗಿ ಹಗಲಿರುಳೆನ್ನದೆ ಶ್ರಮಿಸುವುದು ಕಾಣುತ್ತಿಲ್ಲವೇ?   ಪ್ರತಿಯೊಂದು ನಿರ್ಧಾರ ಗಳನ್ನು ತೆಗೆದುಕೊಂಡಾಗ ಹಿಂದುಮುಂದು ಯೋಚಿಸದೆ ವಿರೋಧಿಸುವುದಕ್ಕೇ ಇರುವುದೆಂಬಂತೆ ಮಾತನಾಡಿ ಜನರ ದಿಕ್ಕು ತಪ್ಪಿಸುವುತ್ತಿರುವುದೇಕೆ? ಒಂದು ದುರ್ಬಲ ವೈರಾಣು(!) ಜಗತ್ತನ್ನೇ ಅಲ್ಲಾಡಿಸುತ್ತಿರುವ ಈ ಕಾಲ ಘಟ್ಟದಲ್ಲಿ ದೇಶವಾಸಿಗಳೆಲ್ಲ ಒಂದಾಗಿ ಅಭಿವೃದ್ಧಿಯತ್ತ  ಹೆಜ್ಜೆ ಹಾಕುವತ್ತ ಗಮನಹರಿಸಬಾರದೇಕೇ? Vocal for local, ಆತ್ಮನಿರ್ಭರ ಭಾರತ  ಬಾಯಿಮಾತಿಗೆ ಆಗಿರದೆ ನಿಜವಾದ ಆತ್ಮನಿರ್ಭರ ಭಾರತವಾಗುವತ್ತ ಮುನ್ನುಗ್ಗುವ ಪ್ರಯತ್ನಕ್ಕೆ ಶ್ರೀಮಂತ , ಬಡವರೆನ್ನದೆ ಸಮಾಜದ ಎಲ್ಲರೂ ಕೈ ಜೋಡಿಸ ಬೇಕಾಗಿದೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

7 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

22 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

22 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

22 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

22 hours ago