ಬೆಳ್ಳಾರೆ: 2019-20ನೇ ಸಾಲಿನ ರೋಟರಿ ಕ್ಲಬ್ ಬೆಳ್ಳಾರೆ ಟೌನ್‍ನ ನೂತನ ಅಧ್ಯಕ್ಷರಾಗಿ ಬಿ. ನರಸಿಂಹಜೋಶಿ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಿ. ಎಸ್. ಆಯ್ಕೆಗೊಂಡಿರುತ್ತಾರೆ.
ಕ್ಲಬ್‍ನ ಉಪಾಧ್ಯಕ್ಷರಾಗಿ ಮೋನಪ್ಪ ಗೌಡ ತಂಬಿನಮಕ್ಕಿ, ನಿಕಟ ಪೂರ್ವ ಅಧ್ಯಕ್ಷರಾಗಿ ಎ. ಕೆ. ಮಣಿಯಾಣಿ, ನಿರ್ದೇಶಕರಾಗಿ ರವೀಂದ್ರ ಗೌಡ ಯಂ., ಬಿ. ಸುಬ್ರಹ್ಮಣ್ಯ ಜೋಶಿ, ಶ್ಯಾಮ ಸುಂದರ ರೈ, ಚಂದ್ರಶೇಖರ ರೈ, ನವೀನ್ ಕುಮಾರ್ ರೈ ತಂಬಿನಮಕ್ಕಿ ಆಯ್ಕೆಗೊಂಡಿರುತ್ತಾರೆ. ಇತರ ವಿಭಾಗಗಳಲ್ಲಿ ಪ್ರಮೋದ್ ಕೆ. ಕೆ., ಪ್ರಭಾಕರ ಆಳ್ವ ಭಜನಿಗುತ್ತು, ವಿನಯ್‍ಕುಮಾರ್ ಕೆ. ಪವನ್ ವಿ., ಕರುಣಾಕರ ಆಳ್ವ, ಚಂದ್ರಹಾಸ ರೈ, ಸಾಯಿಪ್ರಸಾದ್ ರೈ ಹಾಗೂ ಐತ್ತಪ್ಪ ಗೌಡ ಆಯ್ಕೆಗೊಂಡಿರುತ್ತಾರೆ.
ಕ್ಲಬ್ಬಿನ 12ನೇ ವರ್ಷದ ಪದಗ್ರಹಣ ಸಮಾರಂಭವು ದೇವಿ ಹೈಟ್ಸ್ ಬೆಳ್ಳಾರೆಯಲ್ಲಿ ಜು.9 ರಂದು ಸಂಜೆ 6.30ಕ್ಕೆ ನೆರವೇರಲಿದ್ದು ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ಲೆಕ್ಕ ಪರಿಶೋಧಕರಾದ ಯಂ. ಈಶ್ವರ ಭಟ್, ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಡಾ| ಪಿ. ಕೆ. ಕೇಶವ, ಝೋನಲ್ ಲೆಪ್ಟಿನೆಂಟ್ ಪ್ರಭಾಕರ ಆಳ್ವ ಭಜನಿಗುತ್ತು ಹಾಗೂ ಸುಳ್ಯ ಕ್ಲಬ್ಬಿನ ಅಧ್ಯಕ್ಷ ಡಾ| ಪುರುಷೋತ್ತಮ ಕೆ. ಜಿ. ಭಾಗವಹಿಸಲಿದ್ದಾರೆ.
ಸಾಮಾಜಿಕ ಮನ್ನಣೆ ಗಳಿಸಿದ ರೋಟರಿ ಬೆಳ್ಳಾರೆಯು ಈ ವರ್ಷದ ರೋಟರಿಯ ಜಿಲ್ಲಾ ಯೋಜನೆಗಳಾದ ಜೀವನ್ ಸಂಧ್ಯಾ, ಸೇವ್ ಲೈಫ್, ಕ್ಯಾನ್ಸರ್ ಹಾಗೂ ಇನ್ನಿತರ ಮಾರಕ ರೋಗಗಳ ಪತ್ತೆಗೆ ಕ್ರಮ ಹೀಗೆ ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಬೆಳ್ಳಾರೆಯಲ್ಲಿ ಜವುಳಿ ಉದ್ಯಮ ಹೊಂದಿರುವ ನರಸಿಂಹ ಜೋಶಿಯವರು ತಿಳಿಸಿದ್ದಾರೆ.
Advertisement