ಸುಳ್ಯ: ಓಣಂ ಆಚರಣೆಯನ್ನು ಸಂಸ್ಥೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಓಣಂ ಪೂಕಳಂನ್ನು ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೊ. ರಾಮಚಂದ್ರ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೊ.ಬಾಸ್ಕರನ್ ನಾಯರ್ ಮಾತನಾಡಿ ಓಣಂ ಹಬ್ಬ ಮುಂಚೆ ಕೇರಳದಲ್ಲಿ ಆಚರಿಸುತ್ತಿದ್ದರು. ಈಗ ಮಲಯಾಳಿಗರು ವಿಶ್ವದಾದ್ಯಂತ ಆಚರಿಸುತ್ತಿರುವುದನ್ನು ಕಾಣಬಹುದಾಗಿದೆ. ಮಹಾಬಲಿಯನ್ನು ನೆನಪಿಸುವ ಹಾಗೂ ಅವರ ಆಡಳಿತವನ್ನು ಜನರಿಗೆ ತಲುಪಿಸುವ ಹಬ್ಬವಾಗಿದೆ ಓಣಂ. ಓಣಂ ಹಬ್ಬ ಜಾತಿ, ಮತ ಬೇಧ ಭಾವಗಲಿಲ್ಲದೆ ಆಚರಿಸುವ ಹಬ್ಬವಾಗಿದೆ ಎಂದು ಹೇಳಿ ಓಣಂ ಗೀತೆಯನ್ನು ಹಾಡಿ ಸಭಿಕರನ್ನು ರಂಜಿಸಿದರು. ಓಣಂ ನಮ್ಮೆಲ್ಲರಲ್ಲಿ ಐಶ್ವರ್ಯ, ಸಮೃದ್ಧಿ, ನೆಮ್ಮದಿ ತುಂಬಿತುಳುಕಲಿ ಎಂದು ಹಾರೈಸಿದರು.
ಸಭಾಧ್ಯಕ್ಷೆತೆಯನ್ನು ರೊ.ಡಾ.ಪುರುಷೋತ್ತಮ ವಹಿಸಿದ್ದರು. ಅಸಿಸ್ಟಂಟ್ ಗವರ್ನರ್ ರೊ. ಡಾ.ಕೇಶವ ಪಿ. ಕೆ., ರೊ.ದಯಾನಂದ ಆಳ್ವ, ರೊ.ಡಾ.ಗುರುರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೊ.ಸನತ್ ದನ್ಯವಾದ ಹೇಳಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…