ಮಡಿಕೇರಿ :ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದಲ್ಲಿ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್ ಅವರು ಮಗುವಿಗೆ ರೋಟಾ ವೈರಸ್ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಕ್ಕಳಲ್ಲಿ ರೋಟಾ ವೈರಸ್ ಬೇಧಿ(ಅತೀಸಾರ ಬೇಧಿ) ನಿಯಂತ್ರಣಕ್ಕಾಗಿ ರೋಟಾ ವೈರಸ್ ಲಸಿಕೆ ನೀಡಲಾಗುತ್ತಿದೆ. ರೋಟಾ ವೈರಸ್ ಒಂದು ಅತಿ ಹೆಚ್ಚು ಹರಡಬಲ್ಲ ವೈರಾಣು, ಇದು ಮಕ್ಕಳಲ್ಲಿ ಬೇಧಿಯಾಗಲು ಅತಿ ದೊಡ್ಡ ಕಾರಣವಾಗಿದೆ. ಇದರಿಂದಾಗಿ ಮಕ್ಕಳು ಸಾವಿಗೀಡಾಗಬಹುದು. ರೋಟಾ ವೈರಸ್ ಸೋಂಕಿನ ಆರಂಭ ಕಡಿಮೆ ಪ್ರಮಾಣದ ಭೇಧಿಯಿಂದ ಆಗುತ್ತದೆ. ಮುಂದೆ ಅದು ಗಂಭೀರ ಸ್ವರೂಪಕ್ಕೆ ತಿರುಗಬಹುದು ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಸೂಕ್ಷ್ಮ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಶರೀರದಲ್ಲಿ ನೀರು ಮತ್ತು ಲವಣಾಂಶದ ಕೊರತೆ ಉಂಟಾಗಬಹುದು. ಹಾಗೂ ಕೆಲವು ಸಂದರ್ಭಗಳಲ್ಲಿ ಮಕ್ಕಳು ಸಾವಿಗೀಡಾಗಬಹುದು. ಆದ್ದರಿಂದ ಸಾರ್ವಜನಿಕ ಲಸಿಕಾ ಕಾರ್ಯಕ್ರಮಕ್ಕೆ ಈ ಲಸಿಕೆಯನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ ಮೋಹನ್ ಅವರು ತಿಳಿಸಿದರು.
ಲಸಿಕೆಯನ್ನು 6 ನೇ ವಾರದ ಮಕ್ಕಳಿಗೆ ಒಪಿವಿ, ಆರ್‍ವಿವಿ, ಐಪಿವಿ, ಪೆಂಟಾವೆಲೆಂಟ್, 10 ನೇ ವಾರದ ಮಕ್ಕಳಿಗೆ ಓಪಿವಿ, ಆರ್‍ವಿವಿ, ಪೆಂಟಾವೆಲೆಂಟ್. 14ನೇ ವಾರದ ಮಕ್ಕಳಿಗೆ ಒಪಿವಿ, ಆರ್‍ವಿವಿ, ಐಪಿವಿ, ಪೆಂಟಾವೆಲೆಂಟ್ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನಷ್ಟು ಮಾಹಿತಿ:-ರೋಟಾ ವೈರಸ್ ಲಸಿಕೆ ನೀಡಿಕೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು ವೈದ್ಯರು ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಹಾಕಿರುವುದನ್ನು ಮತ್ತು ಅವರು ಸಂಪೂರ್ಣವಾಗಿ ಸುರಕ್ಷಿತರಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
ಲಸಿಕೆ:-ರೋಟಾ ವೈರಸ್ ಲಸಿಕೆಯನ್ನು 6, 10, 14 ವಾರಗಳ ವಯೋಮಾನದಲ್ಲಿ ಹಾಕಿಸಬೇಕು. ಲಸಿಕೆಯೊಂದಿಗೆ ನೀಡಲಾಗಿರುವ ಸರಿಂಜ್‍ನಲ್ಲಿ 2.5 ಎಂ.ಎಲ್ ಲಸಿಕೆಯನ್ನು ಬಾಯಿಯ ಮೂಲಕ ಮಗುವಿಗೆ ಪ್ರತಿ ವರಸೆಯಲ್ಲಿ ಕೊಡಿಸಬೇಕು. ಮುಂದಿನ ಬಾರಿಗೆ ಲಸಿಕೆ ಹಾಕಿಸುವ ದಿನಾಂಕ ಮತ್ತು ಸ್ಥಳಗಳ ಕುರಿತು ಪೋಷಕರು ಮಾಹಿತಿ ತಿಳಿದುಕೊಂಡು ಲಸಿಕೆ ಹಾಕಿಸುವುದಕ್ಕೆ ಬರುವಾಗ ತಾಯಿ ಕಾರ್ಡ್ ತರಬೇಕು. ಲಸಿಕೆ ಹಾಕಿಸಿದ ನಂತರ ಒಂದು ವೇಳೆ ಮಗುವಿಗೆ ಜ್ವರ, ವಾಂತಿ ಆದರೆ ಅಥವಾ ಮಗು ಸತತವಾಗಿ ಅಳುತ್ತಿದ್ದರೆ, ಮಗುವುನ ಹೊಟ್ಟೆ ಊದಿಕೊಂಡಿದ್ದರೆ, ಹೊಟ್ಟೆ ನೋವಿದ್ದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರು ಅಥವಾ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ತಕ್ಷಣ ತೋರಿಸಬೇಕು.
ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ಆನಂದ್, ಜಿಲ್ಲಾ ಸರ್ವೆಕ್ಷಣಾಧೀಕಾರಿ ಡಾ ಶಿವಕುಮಾರ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ.ಶಿವಕುಮಾರ್ ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…