ಲಕ್ಷದೀಪೋತ್ಸವಕ್ಕೆ ಸಜ್ಜುಗೊಂಡ ಧರ್ಮಸ್ಥಳ

November 21, 2019
9:31 PM

ಉಜಿರೆ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಕ್ರವಾರ ಹೊಸಕಟ್ಟೆ ಉತ್ಸವದೊಂದಿಗೆ ಶುಭಾರಂಭಗೊಳ್ಳುತ್ತದೆ.

Advertisement

ದೇವಸ್ಥಾನ, ಬೀಡು, ವಸತಿ ಛತ್ರಗಳು ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮುಖ್ಯ ಪ್ರವೇಶದ್ವಾರದ ಬಳಿ ಕೆ.ಎಸ್.ಆರ್.ಟಿ.ಸಿ. ವಿಶೇಷ ಕೌಂಟರ್, ಪೊಲೀಸ್ ಕೌಂಟರ್ ತೆರೆಯಲಾಗಿದೆ. ಸ್ವಚ್ಛತಾ ಸೇನಾನಿಗಳು ಸ್ವಚ್ಛತೆ ಕಾಪಾಡಲು ವಿಶೇಷ ಶ್ರಮ ವಹಿಸುತ್ತಿದ್ದಾರೆ.

ಶುಕ್ರವಾರ ಸಂಜೆ ಉಜಿರೆಯಿಂದ ಧರ್ಮಸ್ಥಳಕ್ಕೆ ಹೊರಡುವ ಪಾದಯಾತ್ರೆಯ ಯಶಸ್ಸಿಗೆ ಸರ್ವರೂ ಸಹಕರಿಸಬೇಕೆಂದು ಶಾಸಕ ಹರೀಶ್ ಪೂಂಜ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಂಗಡಿಗಳು ಸಾಲು-ಸಾಲಾಗಿ ತೆರೆಯಲ್ಪಟ್ಟಿವೆ. ಹೋಟೆಲ್‍ಗಳು, ತಂಪು ಪಾನೀಯಗಳು, ಕಂಬಳಿ ಹಾಗೂ ಟೋಪಿ ವ್ಯಾಪಾರಿಗಳು ಹಾಗೂ ವೈವಿಧ್ಯಮಯ ಸರಕು ಮತ್ತು ತಿಂಡಿಗಳ ಅಂಗಡಿಗಳು ತೆರೆಯಲ್ಪಟ್ಟಿವೆ.

ನೇತ್ರಾವತಿ ಸ್ನಾನ ಘಟ್ಟದಿಂದ ಧರ್ಮಸ್ಥಳದವರೆಗೂ ದ್ವಿಪಥ ರಸ್ತೆ ನಿರ್ಮಾಣಗೊಂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಭಕ್ತರ ಸೇವೆಗೆ ದೇವಳದ ಸಿಬ್ಬಂದಿ, ಸ್ವಚ್ಛತಾ ಸೇನಾನಿಗಳು, ಪೊಲೀಸರು, ಗೃಹರಕ್ಷಕ ದಳದವರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಕಟಿಬದ್ಧರಾಗಿದ್ದಾರೆ. ವಸ್ತು ಪ್ರದರ್ಶನದಲ್ಲಿ ಜ್ಞಾನ-ವಿಜ್ಞಾನ-ಸುಜ್ಞಾನಕ್ಕೆ ಸಂಬಂಧಪಟ್ಟ ಮಳಿಗೆಗಳಿದ್ದು ಮಾಹಿತಿಯ ಕಣಜವಾಗಿದೆ. ಶುಕ್ರವಾರದಿಂದ ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾಷೆ- ಸಂಸ್ಕೃತಿಯ ಸ್ವಾಭಿಮಾನ ಮೆರೆಯೋಣ : ರಾಘವೇಶ್ವರ ಶ್ರೀ
August 12, 2025
7:45 AM
by: The Rural Mirror ಸುದ್ದಿಜಾಲ
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ – ಹೂ, ಹಣ್ಣುಗಳ   ಖರೀದಿ – ಭರದಿಂದ ಸಾಗಿರುವ ಸಿದ್ಧತೆ ಕಾರ್ಯಗಳು
August 7, 2025
11:16 PM
by: The Rural Mirror ಸುದ್ದಿಜಾಲ
ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ
August 2, 2025
9:46 PM
by: The Rural Mirror ಸುದ್ದಿಜಾಲ
ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ | ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ
July 29, 2025
8:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group