ಧರ್ಮಸ್ಥಳ: ಭೂಮಿತಾಯಿ ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಬೀದಿನಾಟಕ ಪ್ರದರ್ಶನದ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು, ಜಾಗೃತಿ ಮೂಡಿಸುವಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬಸ್ ನಿಲ್ದಾಣದಲ್ಲಿ, ವಸ್ತುಪ್ರದರ್ಶನ ಮೈದಾನದಲ್ಲಿ, ಹಾಗೂ ಅಧಿಕಜನ ಸೇರುವಲ್ಲಿಸ್ವಚ್ಛತಾ ಸೇನಾನಿಗಳು ಸ್ವಚ್ಛತೆಯ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಿಜಾಗೃತಿ ಮೂಡಿಸಿದ್ದಾರೆ.
13 ಮಂದಿ ಸ್ವಚ್ಛತಾ ಸೇನಾನಿಗಳ ತಂಡಇದೇ 22 ರಿಂದ 26ರ ವರೆಗೆ ಪ್ರತಿ ದಿನ ಸಂಜೆ 4 ಗಂಟೆಯಿಂದರಾತ್ರಿ ಹತ್ತುಗಂಟೆ ವರೆಗೆಎಲ್ಲಾಕಡೆ ಸುತ್ತಾಡಿ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸುವಕಾರ್ಯ ಮಾಡುತ್ತಿದ್ದಾರೆ.
ಬೆಳ್ತಂಗಡಿ ತಾಲ್ಲೂಕನ್ನು ಸಂಪೂರ್ಣ ಸ್ವಚ್ಛ ತಾಲ್ಲೂಕಾಗಿರೂಪಿಸುವ ಉದ್ದೇಶದಿಂದ 110 ಮಂದಿ ಸ್ವಚ್ಛತಾ ಸೇನಾನಿಗಳನ್ನು ನಿಯೋಜಿಸಿದ್ದು ಎಲ್ಲಾ ಕಡೆಗಳಲ್ಲಿ ಉತ್ತಮ ಸಹಕಾರದೊರಕುತ್ತಿದೆ ಎಂದುಗ್ರಾಮಾಭಿವೃದ್ಧಿಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ಮತ್ತು ನಿರ್ದೇಶಕ ಲಕ್ಷ್ಮಣ ಎಂ. ತಿಳಿಸಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಉಚಿತ LPG…
ಅಡಿಕೆ ತೊಗಟೆಯಿಂದ ಪಡೆಯುವ ಸೆಲ್ಲುಲೋಸ್ ಬಳಸಿ ಬಯೋಡಿಗ್ರೇಡೆಯಬಲ್ ಪ್ಲಾಸ್ಟಿಕ್ ಅಭಿವೃದ್ಧಿಪಡಿಸಿರುವ ಸಂಶೋಧನೆ ಪ್ರಕಟವಾಗಿದೆ.…
ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30ರಿಂದ ಫೆಬ್ರವರಿ 10ರವರೆಗೆ ಮೂಡಬಿದ್ರಿಯ ಸ್ವರಾಜ್…
ಪೆಟ್ರೋಲಿಯಂ ಸಂಸ್ಥೆಗಳ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ತಾನು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಎಂದು…
ಸಂಸದ ಬ್ರಿಜೇಶ್ ಚೌಟ ವಿಶೇಷ ಮುತುವರ್ಜಿಯಿಂದ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್…
ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕೋಲಾರ ಜಿಲ್ಲೆಯಲ್ಲಿ, ಕೃಷಿ ಚಟುವಟಿಕೆಗಳ ಜತೆಗೆ ಕುರಿ…